ಆ್ಯಪ್ನಗರ

ಮುಂಗಾರು ಹಂಗಾಮು: 73,247 ಹೆಕ್ಟೇರ್‌ ಬಿತ್ತನೆ ಗುರಿ

ಪ್ರಸಕ್ತ ಮುಂಗಾರು ಹಂಗಾಮಿಗೆ ತಾಲೂಕಿನ ಒಟ್ಟು 73,247 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ರೈತರು ಬೀಜೋಪಚಾರ ಮತ್ತು ವಿವಿಧ ಬೀಜಗಳ ಖರೀದಿಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.

Vijaya Karnataka 13 Jun 2019, 2:59 pm
ಬಸವಕಲ್ಯಾಣ :ಪ್ರಸಕ್ತ ಮುಂಗಾರು ಹಂಗಾಮಿಗೆ ತಾಲೂಕಿನ ಒಟ್ಟು 73,247 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ರೈತರು ಬೀಜೋಪಚಾರ ಮತ್ತು ವಿವಿಧ ಬೀಜಗಳ ಖರೀದಿಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.
Vijaya Karnataka Web monsoon harvest 73247 hectare sowing target
ಮುಂಗಾರು ಹಂಗಾಮು: 73,247 ಹೆಕ್ಟೇರ್‌ ಬಿತ್ತನೆ ಗುರಿ


ತಾಲೂಕಿನಲ್ಲಿ ಬಿತ್ತನೆ ಕಾರ್ಯ ನಡೆಯುವ 73,247 ಹೆಕ್ಟೇರ್‌ ಕೃಷಿ ಭೂಮಿ ಪೈಕಿ ಮುಂಗಾರು ಹಂಗಾಮಿನ ಮುಖ್ಯ ಬೆಳೆಗಳಾದ ಸೋಯಾಬಿನ್‌, ತೊಗರಿ, ಉದ್ದು, ಹೆಸರು ಮತ್ತು ಮುಂಗಾರು ಜೋಳ ಬೆಳೆಗಳು ಹೆಚ್ಚಿನ ಕ್ಷೇತ್ರವನ್ನು ಆವರಿಸಿಕೊಂಡಿವೆ.

ತಾಲೂಕಿನ 32,000 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಸೋಯಾಬಿನ್‌, 17,000 ಹೆ., ತೊಗರಿ, 5,500 ಹೆ., ಮುಂಗಾರು ಜೋಳ, 4,000 ಹೆಹೆ., 4,000 ಹೆಕ್ಟೇರ್‌ ಭೂಮಿಯಲ್ಲಿ ಉದ್ದು, ಉಳಿದ 10,747 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ.

10ರಿಂದ ಬೀಜ ವಿತರಣೆ

ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆಯ ಬೀಜಗಳನ್ನು ವಿತರಿಸಲು ಈಗಾಗಲೇ ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರ (ಆರ್‌ಎಸ್‌ಕೆ)ಗಳಲ್ಲಿ ಅಗತ್ಯ ಬೀಜಗಳ ದಾಸ್ತಾನು ಮಾಡಲಾಗಿದ್ದು, ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. 10ರಿಂದ ರೈತರಿಗೆ ಬೀಜ ವಿತರಿಸಲಾಗುವುದು. ತಾಲೂಕಿನ ಮುಖ್ಯ ಬೆಳೆಗಳಾದ ಸೋಯಾಬಿನ್‌, ತೊಗರಿ, ಉದ್ದು ಮತ್ತು ಹೆಸರು ಬೀಜಗಳನ್ನು ಪಡೆಯಲು ಸಾಮಾನ್ಯ ರೈತರಿಗೆ ಪ್ರತಿ ಕೆಜಿಗೆ 25 ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರಿಗೆ 37 ರೂ. 50 ಪೈಸೆ ರಿಯಾಯಿತಿ ದರ ಇರುತ್ತದೆ. ಸಂಬಂಧಪಟ್ಟ ಆರ್‌ಎಸ್‌ಕೆಗಳಿಗೆ ರೈತರು ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಬೀಜಗಳನ್ನು ಪಡೆಯಬೇಕು ಎಂದು ಬಸವಕಲ್ಯಾಣ ಸಹಾಯಕ ಕೃಷಿ ನಿರ್ದೇಶಕರು ವೀರಶೆಟ್ಟಿ ತಿಳಿಸಿದ್ದಾರೆ.

ಸದರಿ ನೋಂದಣಿ ಸಂಖ್ಯೆಯನ್ನು ಸಂಬಂಧಪಟ್ಟ ಆರ್‌ಎಸ್‌ಕೆಗಳಲ್ಲಿ ತೋರಿಸಿ ಬಿತ್ತನೆ ಬೀಜಗಳನ್ನು ಪಡೆಯಬೇಕು. ಬಸವಕಲ್ಯಾಣ, ಮುಡಬಿ, ರಾಜೇಶ್ವರ, ಕೋಹಿನೂರ, ಮಂಠಾಳ ಮತ್ತು ಹುಲಸೂರನಲ್ಲಿ ಆರ್‌ಎಸ್‌ಕೆಗಳಿದ್ದು, ಬಿತ್ತನೆ ಯೋಗ್ಯ ಮಳೆ ಬಿದ್ದ ಪರಿಣಾಮ ರಾಜೇಶ್ವರನಲಿ ಈಗಾಗಲೇ ಬೀಜಗಳನ್ನು ವಿತರಿಸಲಾಗುತ್ತಿದೆ. ಆನ್‌ಲೈನ್‌ನಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಬೇಕಾಗುವ ದಾಖಲೆಗಳು ಇಂತಿವೆ. ಪಹಣಿ, ಹೊಲ್ಡಿಂಗ್‌, ಬ್ಯಾಂಕ್‌ ಪಾಸ್‌ಬುಕ್‌, ಆಧಾರ್‌ ಕಾರ್ಡ್‌, ಎರಡು ಪಾಸ್‌ಪೋರ್ಟ್‌ ಫೋಟೋಗಳು, ರೇಷನ್‌ ಕಾರ್ಡ್‌, ಜಾತಿ ಪ್ರಮಾಣ ಪತ್ರ ಮತ್ತು ಮೊಬೈಲ್‌ ಸಂಖ್ಯೆ.

ತಾಲೂಕಿನ ಬಹುತೇಕ ರೈತರು ತಮ್ಮ ಕೃಷಿ ಭೂಮಿಯನ್ನು ಹದಗೊಳಿಸಿದ್ದು, ಬಿತ್ತನೆಗಾಗಿ ಬೀಜಗಳ ಸಂಗ್ರಹ, ಗೊಬ್ಬರ ಖರೀದಿಗೆ ಮುಂದಾಗಿದ್ದು, ಮಳೆಗಾಗಿ ಕಾದು ಕುಳಿತಿದ್ದಾರೆ.


ಬಿತ್ತನೆಯ ಸಿದ್ಧತೆಯಲ್ಲಿ ರೈತರು ತೊಡಗಿದ್ದಾರೆ. ಕೃಷಿಕರಿಗೆ ಬೀಜಗಳನ್ನು ವಿತರಿಸಲು ತಾಲೂಕಿನ ಆರ್‌ಎಸ್‌ಕೆಗಳಲ್ಲಿ ಅವುಗಳ ದಾಸ್ತಾನು ಮಾಡಲಾಗಿದೆ. ಬೀಜಗಳ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು.

-ವೀರಶೆಟ್ಟಿ, ಬಸವಕಲ್ಯಾಣ ಸಹಾಯಕ ಕೃಷಿ ನಿರ್ದೇಶಕರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ