ಆ್ಯಪ್ನಗರ

ಮುಜರಾಯಿ ಸಚಿವರ ಕ್ಷೇತ್ರದಲ್ಲೇಪೂಜಾ ಪರಿಕರ ತೊಟ್ಟಿಗೆ

ಹುಮನಾಬಾದ್‌ ಪಟ್ಟಣದ ಪ್ರಮುಖ ಶ್ರದ್ಧಾ ಭಕ್ತಿಕೇಂದ್ರ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜಾ ಸಾಮಗ್ರಿಯನ್ನು ಕಸದ ತೊಟ್ಟಿಗೆ ಚೆಲ್ಲುತ್ತಿರುವು ಭಕ್ತರನ್ನು ಕೆರಳಿಸುವಂತೆ ಮಾಡಿದೆ.

Vijaya Karnataka 14 Dec 2018, 5:00 am
ಹುಮನಾಬಾದ್‌ :ಪಟ್ಟಣದ ಪ್ರಮುಖ ಶ್ರದ್ಧಾ ಭಕ್ತಿಕೇಂದ್ರ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜಾ ಸಾಮಗ್ರಿಯನ್ನು ಕಸದ ತೊಟ್ಟಿಗೆ ಚೆಲ್ಲುತ್ತಿರುವು ಭಕ್ತರನ್ನು ಕೆರಳಿಸುವಂತೆ ಮಾಡಿದೆ.
Vijaya Karnataka Web muzirai is in the ministerial constituency pooja toolkill
ಮುಜರಾಯಿ ಸಚಿವರ ಕ್ಷೇತ್ರದಲ್ಲೇಪೂಜಾ ಪರಿಕರ ತೊಟ್ಟಿಗೆ


ಭಕ್ತರು ಅರ್ಪಿಸುವ ಸಕ್ಕರೆ, ಅಗರಬತ್ತಿ, ತೆಂಗಿನಕಾಯಿ ಹಾಗೂ ಹಬ್ಬದ ದಿನಗಳಲ್ಲಿ ಭಕ್ತರು ಅರ್ಪಿಸುವ ನೈವೇದ್ಯ ಕೂಡ ಯಾರು ಸೇವಿಸದೆ ಅಥವಾ ಯಾರಿಗೂ ಕೊಡದೆ ಕಸವಾಗಿ ಪರಿಣಮಿಸುತ್ತಿದೆ.

ಭಕ್ತರು ಅರ್ಪಿಸುವ ಅಗರಬತ್ತಿ ಹಚ್ಚದೆ ಇದ್ದರೆ ಅವುಗಳನ್ನು ಸ್ವೀಕರಸಬಾರದು ಎನ್ನುತ್ತಾರೆ ಭಕ್ತರು. ದೇವಸ್ಥಾನ ಆವರಣದಲ್ಲಿರುವ ಅಂಗಡಿಗಳಲ್ಲಿ ಇವುಗಳ ಮಾರಾಟ ಕೂಡ ಸ್ಥಗಿತಗೊಳಿಸಬಾರದು. ಆದರೆ ದೇವಸ್ಥಾನಕ್ಕೆ ಬರುವ ಭಕ್ತರು ತೆಂಗಿನ ಕಾಯಿ ಜತೆ ಅರ್ಪಿಸುವ ಅಗರಬತ್ತಿ ಕೂಡ ಹಚ್ಚದೆ ಕಸವಾಗುತ್ತಿದೆ.

ದೇವಸ್ಥಾನದಲ್ಲಿ ಭಕ್ತರು ಶ್ರದ್ಧೆಯಿಂದ ಅರ್ಪಿಸುವ ಸಾಮಗ್ರಿಗಳೆಲ್ಲವು ಬಳಕೆಯಾಗದೆ ಇವುಗಳನ್ನು ಕಸದ ತೊಟ್ಟಿಗೆ,ಹಂದಿ ತಿನ್ನಲು ಹಾಕಲಾಗುತ್ತಿರುವುದು ಭಕ್ತರನ್ನು ಕೆರಳಿಸಿದೆ.

ಹಿಂದೆ ಪೂಜಾ ಸಾಮಗ್ರಿಯ ವಿಲೇವಾರಿಗೆ ದೇವಸ್ಥಾನದಲ್ಲಿ ಘಟಕ ಸ್ಥಾಪಿಸಲಾಗುವುದು ಎಂದು ಹೇಳಲಾಗಿತ್ತು,ಆದರೆ ದೇವಸ್ಥಾನದ ಎದುರುಗಡೆಯೇ ಕಸದ ತೊಟ್ಟಿಯಲ್ಲಿ ಹಾಕಲಾಗುತ್ತಿದೆ.

ಪ್ಲಾಸ್ಟಿಕ್‌ ನಿಷೇಧ ನೆಪಕ್ಕೆ:


ದೇವಸ್ಥಾನ ಆವರಣದಲ್ಲಿ ಪ್ಲಾಸ್ಟಿಕ ನಿಷೇಧಿಸಲಾಗಿದೆ ಎಂದು ಆಡಳಿತದಿಂದ ಫಲಕ ಹಾಕಲಾಗಿದೆ. ಆದರೆ ಇದು ಜಾರಿಯಾಗದೆ ಫಲಕ ಮಾತ್ರ ಉಳಿದು ಕೊಂಡಿದೆ. ಇಲ್ಲಿಗೆ ಬರುವ ಭಕ್ತರು ಪೂಜಾ ಸಾಮಗ್ರಿಗಳಿಗಾಗಿ ಪ್ಲಾಸ್ಟಿಕ್‌ ಬಳಸುತ್ತಿರುವುದು, ಇವುಗಳ ವಿಲೇವಾರಿ ಕೂಡ ತಲೆ ನೋವಾಗಿದೆ.

ಮುಜರಾಯಿ ಸಚಿವರ ಕ್ಷೇತ್ರದಲ್ಲೇ ಇದು ಕಟ್ಟು ನಿಟ್ಟಾಗಿ ಜಾರಿಯಾಗುತ್ತಿಲ್ಲ ಎಂಬ ಆಪಾದನೆ ಕೇಳಿ ಬರುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ