ಆ್ಯಪ್ನಗರ

ಕಣ್ಣೀರು ಹಾಕುವವರು ಎಚ್‌ಡಿಕೆ, ಹಾಕಿಸುವವರು ಸಿದ್ದರಾಮಯ್ಯ, ಒರೆಸುವವರು ಬಿಎಸ್‌ವೈ: ಕಟೀಲ್‌ ಕಮೆಂಟ್‌!

ಸಿಎಂ ಆದ ಕೂಡಲೇ ಕಣ್ಣೀರು ಹಾಕಿದ ಮುಖ್ಯಮಂತ್ರಿ ಎಂದರೆ ಅದು ಎಚ್‌ಡಿ ಕುಮಾರಸ್ವಾಮಿ. ಜನರಿಗೆ ಕಣ್ಣೀರು ಹಾಕಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ. ಜನರ ಕಣ್ಣೀರು ಒರೆಸುತ್ತಿರುವ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ. ಹೀಗೆ ಮೂರೂ ಪಕ್ಷಗಳ ಮುಖ್ಯಮಂತ್ರಿಗಳ ಕುರಿತು ಕಮೆಂಟ್ ಮಾಡಿದವರು ನಳಿನ್‌ ಕುಮಾರ್ ಕಟೀಲ್.

Vijaya Karnataka Web 19 Feb 2020, 5:18 pm
ಬೀದರ್‌: ಸಿಎಂ ಆದ ಕೂಡಲೇ ಕಣ್ಣೀರು ಹಾಕಿದ ಮುಖ್ಯಮಂತ್ರಿ ಎಂದರೆ ಅದು ಎಚ್‌ಡಿ ಕುಮಾರಸ್ವಾಮಿ. ಜನರಿಗೆ ಕಣ್ಣೀರು ಹಾಕಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ. ಜನರ ಕಣ್ಣೀರು ಒರೆಸುತ್ತಿರುವ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ. ಹೀಗೆ ಮೂರೂ ಪಕ್ಷಗಳ ಮುಖ್ಯಮಂತ್ರಿಗಳ ಕುರಿತು ಕಮೆಂಟ್ ಮಾಡಿದವರು ನಳಿನ್‌ ಕುಮಾರ್ ಕಟೀಲ್.
Vijaya Karnataka Web nalin kumar kateel in bidar


ಬೀದರ್ನಲ್ಲಿ ಬಿಜೆಪಿಯ ನೂತನ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಧಿಕಾರ ಸಿಕ್ಕ ಕೂಡಲೇ ಎಚ್.ಡಿ. ಕುಮಾರಸ್ವಾಮಿ ಅವರು ಜನರ ಮನೆ ಮನೆಗೆ ತೆರಳಿ ಕಣ್ಣೀರು ಹಾಕಿದರು. ಈ ಕಣ್ಣೀರು ಕೆಲಸ ಮಾಡಲಿಲ್ಲ ಎಂದು ಕಟೀಲ್ ವ್ಯಂಗ್ಯವಾಡಿದರು. ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ರೈತರ ಆತ್ಮಹತ್ಯೆ, ಅಧಿಕಾರಿಗಳ ಸಾವು, ಹಿಂದೂ ಕಾರ್ಯಕರ್ತರ ಕೊಲೆಗಳು ನಡೆದವು. ಜನರ ಕಣ್ಣೀರು ಹಾಕಿಸಿದರು ಎಂದು ಅವರು ತಿಳಿಸಿದರು.

ಇದೀಗ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದು ನೆರೆ ಸಂತ್ರಸ್ತರ ಸೇರಿದಂತೆ ರಾಜ್ಯದ ಜನರ ಕಣ್ಣೊರೆಸುತ್ತಿದ್ದಾರೆ. ನೇಕಾರರ ಸಾಲ ಮನ್ನಾ ಮಾಡಿ, ರೈತರ ಸಾಲ ಮನ್ನಾಗೆ ಬದ್ಧರಾಗಿದ್ದಾರೆ. ರಾಜ್ಯದ ಜನರ ಮನೆ ಮನೆಗೆ ತೆರಳಿ ಜನರ ಕಣ್ಣೊರೆಸುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.

ಮಿನುಗುವ ಪೌಡರನ್ನು ‘ಮಿಣಿ ಮಿಣಿ ಪೌಡರ್’ ಎಂದಿದ್ದಕ್ಕೆ ಟ್ರೋಲ್ ಮಾಡಿದ್ರು, ಸದನದಲ್ಲಿ ನೋವು ತೋಡಿಕೊಂಡ ಎಚ್‌ಡಿಕೆ

ಎಚ್.ಡಿ. ಕುಮಾರಸ್ವಾಮಿ ಅವರೇ, ಆರ್‌ಎಸ್‌ಎಸ್ ರಾಜಕೀಯ ಮಾಡುದಕ್ಕಾಗಿ ಇಲ್ಲ. ಅದು ರಾಷ್ಟ್ರ ನಿರ್ಮಾಣಕ್ಕಾಗಿ ಇದೆ. ಮಗನಿಗೆ, ಹೆಂಡತಿಗೆ ಟಿಕೆಟ್ ಕೊಡಿಸಲು. ಅಪ್ಪನಿಗೆ ಸಂಸದನನ್ನಾಗಿ ಮಾಡಲು. ಇಡೀ ಕುಟುಂಬವನ್ನೇ ರಾಜಕೀಯಕ್ಕೆ ತರಲು ಆರ್‌ಎಸ್‌ಎಸ್ ಇಲ್ಲ ಎಂದು ವ್ಯಂಗ್ಯವಾಡಿ ಜೆಡಿಎಸ್‌ನ ಕುಟುಂಬ ರಾಜಕಾರಣವನ್ನು ಟೀಕಿಸಿದರು.

ಬಿಎಸ್‌ವೈ ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದ್ದಾರೆ. ಹೈದರಾಬಾದ್‌ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಮಾಡಿದರು. ಎಲ್ಲೆಡೆ ಪರಿವರ್ತನೆಯಾಗುತ್ತಿದೆ. ದೇಶದಲ್ಲೂ ಸಹ ಬದಲಾವಣೆ ಗಳಾಗುತ್ತಿವೆ. ಮೋದಿ ಅವರಿಗೆ ವೀಸಾ ನೀಡದ ಅಮೆರಿಕಾದವರು (ಟ್ರಂಪ್) ಮೋದಿ ಅವರನ್ನು ಹುಡುಕಿಕೊಂಡು ಗುಜರಾತ್‌ನ ಅಹಮದಾಬಾದ್‌ಗೆ ಬರುತ್ತಿದ್ದಾರೆ ಎಂದರು.

ದೇಶದ ಸರ್ವರ ನಿರ್ಧಾರದಂತೆ ಕಾಶ್ಮೀರದಲ್ಲಿ 370ನೇ ವಿಧಿ ರದ್ದಾಗಿದೆ. ಇನ್ನೆರಡು ವರ್ಷಗಳಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ. ಮುಸ್ಲಿಂ ರಾಷ್ಟ್ರಗಳಲ್ಲಿ ಅನ್ಯಾಯಕ್ಕೊಳಗಾದವರಿಗೆ ಪೌರತ್ವ ನೀಡುವುದು ಮಹಾತ್ಮ ಗಾಂಧಿ, ಇಂದಿರಾ ಗಾಂಧಿ ಹಾಗೂ ಮನಮೋಹನಸಿಂಗ್ ಅವರ ಕನಸಾಗಿತ್ತು. ಇವರ ಕನಸಿಗೆ ಕಾಂಗ್ರೆಸ್ ಬೆಂಕಿ ಇಡುವ ಕೆಲಸ ಮಾಡುತ್ತಿದೆ. ಆದರೆ, ನಾವು ಅವರುಗಳ ಆಶಯದಂತೆ ಪೌರತ್ವ ನೀಡುತ್ತಿದ್ದೇವೆ. ದೇಶದ ಯಾವೊಬ್ಬ ಮುಸ್ಲಿಂನ ಪೌರತ್ವ ಕಸಿದುಕೊಳ್ಳುವುದಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷಕ್ಕೆ 135 ವರ್ಷಗಳ ಇತಿಹಾಸವಿದೆ. ನಿಜವಾಗಿಯೂ ಹೋರಾಟ ಮಾಡಿದೆ. ಇದೀಗ ಅಧಿಕಾರದ ಲಾಲಸೆ, ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಸಂಘಟನೆಯ ಶಿಥಿಲತೆಯಿಂದ ಇಂದು ವಿರೋಧ ಪಕ್ಷವಾಗಲು ಸಹ ನಾಲಾಯಕ್ ಆಗಿದೆ. ಇಂದಿನ ಕಾಂಗ್ರೆಸ್ ಬೌದ್ಧಿಕ ದಿವಾಳಿಯಾಗಿದೆ ಎಂದು ನಳಿನಕುಮಾರ ಕಟೀಲ್ ಆರೋಪಿಸಿದರು.

ಹುಬ್ಬಳ್ಳಿಯ ಕೆಎಲ್‌ಇನಲ್ಲಿ ಪಾಕಿಸ್ತಾನದ ಪರ ಜೈಕಾರ ಹಾಕಿದವರಿಗೆ, ಶಾಹೀನ್ ಸಂಸ್ಥೆಯಲ್ಲಿ ಪ್ರದಾನಿಗಳ ವಿರುದ್ಧ ಹೇಳಿಕೆ ನೀಡಿದವರಿಗೆ ಕಾಂಗ್ರೆಸ್ ಸಾಥ್ ನೀಡುತ್ತಿದೆ. ಹೀಗಾಗಿ, ಕಾಂಗ್ರೆಸ್ ರಾಷ್ಟ್ರ ವಿರೋಧಿಯಾಗಿದೆ ಎಂದು ಅವರು ಜರಿದರು.

"ಚಿಲ್ಲರೆ ರಾಜಕೀಯಕ್ಕಾಗಿ ಕಾಂಗ್ರೆಸ್ ರಾಷ್ಟ್ರದ್ರೋಹಿ ಕೆಲಸ ಮಾಡುತ್ತಿದೆ. ದೇಶ ವಿರೋಧಿಗಳ ಬೆನ್ನಿಗೆ ನಿಲ್ಲುತ್ತಿದೆ. ಸಿದ್ದರಾಮಯ್ಯನವರೇ ದೇಶ ದ್ರೋಹಿಗಳ ಬೆನ್ನಿಗೆ ನಿಂತಿದ್ದೀರಿ. ಹೀಗಾಗಿ ನೀವು ರಾಷ್ಟ್ರ ಭಕ್ತರಾ ?, ದೇಶ ದ್ರೋಹಿಯಾ ?, ಪಾಕಿಸ್ತಾನದ ಪರನಾ ನೀವು ಎಂಬುದನ್ನು ಸ್ಪಷ್ಟಪಡಿಸಿ."
- ನಳೀನಕುಮಾರ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ