ಆ್ಯಪ್ನಗರ

ಬಿಜೆಪಿಯದ್ದು ಇಬ್ಬಗೆಯ ನೀತಿ; ಮೋದಿಯದ್ದು ಒಡೆದಾಳುವುದೇ ಕೆಲಸ- ಬೃಂದಾ ಕಾರಟ್

ಬಿಜೆಪಿಯದ್ದು ಇಬ್ಬಗೆಯ ನೀತಿ, ಮೋದಿಯದ್ದು ಬ್ರಿಟೀಷರಂತೆ ಒಡೆದಾಳುವುದೇ ಕೆಲಸ, ಬಿಜೆಪಿಗರಿಗೆ ನಾಚಿಕೆಯಾಗಬೇಕು ಎಂದು ಸಿಪಿಐಎಂನ ರಾಷ್ಟ್ರೀಯ ನಾಯಕಿ ಬೃಂದಾ ಕಾರಟ್ ಆಕ್ರೋಶ ವ್ಯಕ್ತಪಡಿಸಿದರು.

Vijaya Karnataka Web 13 Feb 2020, 8:48 pm
ಬೀದರ್‌: ಭಾರತೀಯ ಜನತಾ ಪಕ್ಷದ ಸಚಿವರು, ನೇತಾರರು, ಮುಖಂಡರುಗಳು ದೇಶ ವಿರೋಧಿ ಹೇಳಿಕೆಗಳನ್ನು ನೀಡಿದರೂ, ಗುಂಡು ಹಾರಿಸಿ ಎಂದು ಹೇಳಿದರೂ, ಸಂವಿಧಾನ ಬದಲಾಯಿಸುತ್ತೇವೆ ಎಂದರೂ ಏನೂ ಕ್ರಮ ಕೈಗೊಳ್ಳದ, ಯಾವುದೇ ಪ್ರಕರಣ ದಾಖಲಿಸದ ಬಿಜೆಪಿ ನೇತೃತ್ವದ ಸರಕಾರಗಳು, 10 ವರ್ಷದ ಮಗುವೊಂದು ಸಿಎಎ ಕುರಿತು ಹೇಳಿದ ಮಾತಿಗೆ ದೇಶ ದ್ರೋಹದಂತಹ ಪ್ರಕರಣ ದಾಖಲಿಸುತ್ತಾರೆ ಎಂದರೆ ಬಿಜೆಪಿಗರಿಗೆ ನಾಚಿಕೆಯಾಗಬೇಕು ಎಂದು ಸಿಪಿಐಎಂನ ರಾಷ್ಟ್ರೀಯ ನಾಯಕಿ ಬೃಂದಾ ಕಾರಟ್ ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web brinda karat


ಶಾಹೀನ್ ಶಿಕ್ಷಣ ಸಂಸ್ಥೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ್ರೋಹ ಕೇಸ್‌ನಡಿ ಬಂಧಿತರಾಗಿ ಜೈಲಿನಲ್ಲಿರುವ ಶಾಹೀನ್ ಶಾಲೆಯ ಮುಖ್ಯಗುರು ಹಾಗೂ ವಿದ್ಯಾರ್ಥಿನಿಯ ತಾಯಿಯನ್ನು ಭೇಟಿಯಾಗಿ, ನಂತರ ಶಾಹೀನ್ ಶಾಲೆಯಲ್ಲಿರುವ 10 ವರ್ಷದ ಬಾಲಕಿಯನ್ನು ಭೇಟಿಯಾದ ಬಳಿಕ ವಿಕದೊಂದಿಗೆ ಮಾತನಾಡಿದರು.

ಶಾಹೀನ್ ಶಿಕ್ಷಣ ಸಂಸ್ಥೆಯ ಪ್ರಕರಣದಲ್ಲಿ ಬಿಜೆಪಿ ಇಬ್ಬಗೆಯ ನೀತಿಯನ್ನು ಅನುಸರಿಸಿದೆ ಎಂದು ನೇರವಾಗಿ ಆರೋಪಿಸಿದರು. 10 ವರ್ಷದ ಈ ಬಾಲಕಿ ಏನು ಮಾತನಾಡಿದೆ ಎನ್ನುವುದು ಯೂ ಟ್ಯೂಬ್‌ನಲ್ಲಿ ಇದೆ. ಅದನ್ನು ನೋಡಿದರೆ ಎಲ್ಲವೂ ಗೊತ್ತಾಗುತ್ತದೆ. ಬಾಲಕಿ ಹೇಳಿದ ಮಾತಿನಲ್ಲಿ ದೇಶದ್ರೋಹದ ವಿಷಯ ಎಲ್ಲಿದೆ ? ಎಂದು ಕಾರಟ್ ಪ್ರಶ್ನಿಸಿದರು.

ನಿರ್ಭಯಾ ಹಂತಕರಿಗೆ ನೇಣು ಸನ್ನಿಹಿತ..! ಕಾನೂನು ಹೋರಾಟದ ಆಯ್ಕೆಗಳೂ ಮುಕ್ತ..!

ಇಂತಹ ಸಣ್ಣ ವಿಷಯಕ್ಕೆ ದೇಶದ್ರೋಹದ ಪ್ರಕರಣ ದಾಖಲಿಸುವ ಮೂಲಕ ಮೋದಿ ನೇತೃತ್ವದ ಸರಕಾರ ದೇಶದಲ್ಲಿ ಬ್ರಿಟಿಷ್ ಲಾ (ಒಡೆದಾಳುವ ನೀತಿ) ಜಾರಿಗೆ ತರುತ್ತಿದೆ ಎಂದು ಆರೋಪಿಸಿದರು.

ಅಧಪತನಕ್ಕೆ ಇಳಿದಿರುವ ಆರ್ಥಿಕತೆಯನ್ನು ಮುಚ್ಚಿಕೊಳ್ಳಲು ಸಿಎಎನಂತಹ ಕಾನೂನು ಜಾರಿಗೆ ತಂದಿದ್ದಾರೆ. ಅದರ ಕುರಿತು ಪ್ರಶ್ನಿಸಿದವರಿಗೆ ದೇಶದ್ರೋಹದಡಿ ಪ್ರಕರಣ ದಾಖಲಿಸಿ ಬೆದರಿಸುವ ಕೆಲಸ ನಡೆಯುತ್ತಿದೆ. ಇದಕ್ಕೆ ನಾವು ಹೆದರಲ್ಲ ಎಂದು ಅವರು ತಿಳಿಸಿದರು.

ಜನವಾದಿ ಮಹಿಳಾ ಸಂಘಟನೆಯ ಕೆ. ನೀಲಾ, ಸಿಪಿಐಎಂನ ಆರ್.ಪಿ. ರಾಜಾ, ಲಕ್ಷ್ಮಿ ಬಾವುಗೆ ಸೇರಿದಂತೆ ಹಲವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ