ಆ್ಯಪ್ನಗರ

ರೈತರು ಕಷ್ಟದಲ್ಲಿದ್ದಾಗ ಉತ್ಸವ ಆಚರಿಸುವುದು ಸರಿಯಲ್ಲ: ಸಿಎಂ

ಬರಗಾಲದಲ್ಲಿ ಬೀದರ್‌ ಉತ್ಸವ ಮಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ತಿಳಿಸಿದ್ದಾರೆ.

Vijaya Karnataka 14 Dec 2018, 5:00 am
ಬೀದರ್‌:ಬರಗಾಲದಲ್ಲಿ ಬೀದರ್‌ ಉತ್ಸವ ಮಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ತಿಳಿಸಿದ್ದಾರೆ.
Vijaya Karnataka Web not okay to celebrate the festival when farmers are in trouble cm
ರೈತರು ಕಷ್ಟದಲ್ಲಿದ್ದಾಗ ಉತ್ಸವ ಆಚರಿಸುವುದು ಸರಿಯಲ್ಲ: ಸಿಎಂ


ಬೆಳಗಾವಿಯಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಈ ಕುರಿತು ಮನವಿ ಸಲ್ಲಿಸಿ, ರೈತರು ಕಷ್ಟದಲ್ಲಿರುವ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಕುಡಿಯುವ ನೀರಿನ ಅಭಾವ, ಮೇವಿನ ಸಮಸ್ಯೆ, ರೈತರು ಕಷ್ಟದಲ್ಲಿರುವುದನ್ನು ತಿಳಿಸಲಾಗಿದೆ. ರೈತರು ಕಷ್ಟದಲ್ಲಿರುವಾಗ ಉತ್ಸವ ಆಚರಿಸಿ ಸಂಭ್ರಮಿಸಬಾರದು ಎಂದು ಕೋರಲಾಗಿದೆ ಎಂದು ಅರಳಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಬರಗಾಲ ಇರುವುದು ಗಮನದಲ್ಲಿದೆ. ಇಂತಹ ಹೊತ್ತಿನಲ್ಲಿ ಉತ್ಸವ ಆಚರಿಸುವುದು ಸಮಂಜಸ ಅಲ್ಲ. ಈ ಕುರಿತು ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡಲಾಗುತ್ತದೆ ಎಂದು ಕುಮಾರಸ್ವಾಮಿ ಭರವಸೆ ನೀಡಿದ್ದಾರೆ ಎಂದು ಎಂಎಲ್ಸಿ ಅರಳಿ ಹೇಳಿದ್ದಾರೆ.

ಮಳೆಯ ಅಭಾವದಿಂದಾಗಿ ಮುಂಗಾರು, ಹಿಂಗಾರು ಬೆಳೆ ಕಳೆದುಕೊಂಡು ರೈತರು ಕಷ್ಟದಲ್ಲಿದ್ದಾರೆ. ಸಣ್ಣ ರೈತರು, ಕೂಲಿಕಾರರು ವಲಸೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಜನ ಕಷ್ಟದಲ್ಲಿದ್ದರೂ ಜಿಲ್ಲಾ ಆಡಳಿತ ಉತ್ಸವದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬರಗಾಲದಿಂದಾಗಿ ಉತ್ಸವದಲ್ಲಿ ಭಾಗಿಯಾಗಿ ಸಂಭ್ರಮಿಸುವ ಸ್ಥಿತಿ ಇಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಿಎಂ ಅವರನ್ನು ಕೋರಲಾಗಿದೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಎಲ್ಲ ಮಾತುಗಳನ್ನು ಕೇಳಿಸಿಕೊಂಡಿದ್ದಲ್ಲದೆ, ರೈತರು ಕಷ್ಟದಲ್ಲಿದ್ದಾಗ ಉತ್ಸವ ಆಚರಿಸುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದರು ಎಂದು ಅರಳಿ ತಿಳಿಸಿದ್ದಾರೆ. ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್‌, ಡಾ. ಚಂದ್ರಶೇಖರ ಪಾಟೀಲ್‌ ಅವರೊಂದಿಗೆ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಬೀದರ್‌ ಉತ್ಸವ ಆಚರಿಸದಂತೆ ಮನವಿ ಮಾಡಲಾಗಿದೆ. ಮುಖ್ಯಮಂತ್ರಿಯವರು ಜಿಲ್ಲೆಯ ರೈತರ ಕಷ್ಟಕ್ಕೆ ಸ್ಪಂದಿಸುವ ವಿಶ್ವಾಸ ಇದೆ ಎಂದು ಅರವಿಂದಕುಮಾರ ಅರಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ