ಆ್ಯಪ್ನಗರ

ರೆಡ್‌ ಹ್ಯಾಂಡ್‌ ಆಗಿ ಅಧಿಕಾರಿ ಎಸಿಬಿ ಬಲೆಗೆ

ಲಂಚ ಪಡೆಯುವಾಗ ಇಲ್ಲಿನ ಅಲ್ಪ ಸಂಖ್ಯಾತರ ಇಲಾಖೆಯ ಕಚೇರಿಯಲ್ಲೇ ಅಧಿಕಾರಿಯೊಬ್ಬ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕ್ಲರ್ಕ್‌ ಯಲ್ಲಪ್ಪ ಸಿಕ್ಕಿ ಬಿದ್ದ ಅಧಿಕಾರಿ. ಗುತ್ತಿಗೆಯಾಧಾರ ಕೆಲಸ ಮಾಡುತ್ತಿರುವ ಯಲ್ಲಪ್ಪ , ಮೊಹಮ್ಮದ್‌ ಮುಬಿನ್‌ ಎಂಬುವವರ ಬಳಿ 5 ಸಾವಿರ ನಗದು ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

Vijaya Karnataka 21 Jun 2018, 5:16 pm
ಬೀದರ್‌:ಲಂಚ ಪಡೆಯುವಾಗ ಇಲ್ಲಿನ ಅಲ್ಪ ಸಂಖ್ಯಾತರ ಇಲಾಖೆಯ ಕಚೇರಿಯಲ್ಲೇ ಅಧಿಕಾರಿಯೊಬ್ಬ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕ್ಲರ್ಕ್‌ ಯಲ್ಲಪ್ಪ ಸಿಕ್ಕಿ ಬಿದ್ದ ಅಧಿಕಾರಿ. ಗುತ್ತಿಗೆಯಾಧಾರ ಕೆಲಸ ಮಾಡುತ್ತಿರುವ ಯಲ್ಲಪ್ಪ , ಮೊಹಮ್ಮದ್‌ ಮುಬಿನ್‌ ಎಂಬುವವರ ಬಳಿ 5 ಸಾವಿರ ನಗದು ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
Vijaya Karnataka Web officer acb balage as red hand
ರೆಡ್‌ ಹ್ಯಾಂಡ್‌ ಆಗಿ ಅಧಿಕಾರಿ ಎಸಿಬಿ ಬಲೆಗೆ


ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಯಿಸುವ ಸಲುವಾಗಿ ದೂರುದಾರ ಮೊಹಮ್ಮದ್‌ ಮುಬಿನ್‌ ಅವರ ಬಳಿ 15 ಸಾವಿರ ರೂ.ಗೆ ಯಲ್ಲಪ್ಪ ಹಾಗೂ ಮೇಲಧಿಕಾರಿ ಬೇಡಿಕೆ ಇಟ್ಟಿದ್ದರು. ಬುಧವಾರ ಯಲ್ಲಪ್ಪ ಅವರು 15 ಸಾವಿರ ಪೈಕಿ 5 ಸಾವಿರ ಪಡೆಯುವಾಗ ಸಿಕ್ಕಿ ಬಿದ್ದಿದ್ದಾರೆ. ಎಸಿಬಿ ಅಧಿಕಾರಿಗಳು ಯಲ್ಲಪ್ಪ ಅವರನ್ನು ಬಂಧಿಸಿದ್ದಾರೆ.

ಎಸಿಬಿ ಡಿವೈಎಸ್ಪಿ ಬಿ.ಬಿ. ಪಟೇಲ್‌, ಪಿಐಗಳಾದ ಹಣಮಂತರಾವ್‌, ವಿಜಯಕುಮಾರ, ಹೆಡ್‌ ಕಾನ್ಸ್‌ಟೇಬಲ್‌ ರಮೇಶ್‌, ಶಿವರಾಜ್‌, ಸಿಬ್ಬಂದಿ ಶ್ರೀಕಾಂತ, ಅನಿಲ್‌, ಸರಸ್ವತಿ, ವಸಂತ, ರಾಘವೇಂದ್ರ, ವಿಠ್ಠÜಲ್‌ ಇತರರು ದಾಳಿಯ ತಂಡದಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ