ಆ್ಯಪ್ನಗರ

ಕಲ್ಯಾಣ ಪರ್ವ ವಿರೋಧಿಸಿ ಪ್ರತಿಭಟನೆ

ನಗರದ ನಡೆಯುತ್ತಿರುವ 18ನೇ ಕಲ್ಯಾಣ ಪರ್ವದ ಕೊನೆಯ ದಿನವಾದ ಭಾನುವಾರ ಜರುಗಿದ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಗದ್ದಲ ಉಂಟಾಗಿ ಮಾತಿನ ಚಕಮಕಿ, ಕಲ್ಲುತೂರಾಟದ ಘಟನೆ ನಡೆಯಿತು.

Vijaya Karnataka 14 Oct 2019, 5:00 am
ಬಸವಕಲ್ಯಾಣ :ನಗರದ ನಡೆಯುತ್ತಿರುವ 18ನೇ ಕಲ್ಯಾಣ ಪರ್ವದ ಕೊನೆಯ ದಿನವಾದ ಭಾನುವಾರ ಜರುಗಿದ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಗದ್ದಲ ಉಂಟಾಗಿ ಮಾತಿನ ಚಕಮಕಿ, ಕಲ್ಲುತೂರಾಟದ ಘಟನೆ ನಡೆಯಿತು.
Vijaya Karnataka Web protest against kalyan parva
ಕಲ್ಯಾಣ ಪರ್ವ ವಿರೋಧಿಸಿ ಪ್ರತಿಭಟನೆ


ಒಂದು ಕಡೆ ಕಲ್ಯಾಣ ಪರ್ವದ ಮೆರವಣಿಗೆ, ಇನ್ನೊಂದು ಕಡೆ ಕಲ್ಯಾಣ ಪರ್ವ ವಿರೋಧಿಸಿ ಪ್ರತಿಭಟನೆ ನಡೆದಾಗ ಘರ್ಷಣೆಗೆ ಕಾರಣವಾಗಿ ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಯಿತು.

ನಗರದ ಐತಿಹಾಸಿಕ ಕೋಟೆಯಿಂದ ಮುಖ್ಯ ರಸ್ತೆಯ ಮಾರ್ಗವಾಗಿ ಬಸವ ಮಹಾಮನೆಯ ಆವರಣದ ವರೆಗೂ ಬಸವ ಭಕ್ತರ ಮೆರವಣಿಗೆ ಸಾಗಿತ್ತು. ಇದೇ ವೇಳೆ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿ ಕಲ್ಯಾಣ ಪರ್ವ ವಿರೋಧಿಸಿ ಪ್ರತಿಭಟನೆ ನಡೆಯಿತು. ಮೆರವಣಿಗೆಯು ಬಸವೇಶ್ವರ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಎರಡೂ ಕಡೆಯಿಂದಲೂ ಕೂಗಾಟ, ಧಿಕ್ಕಾರಗಳು ಕೇಳಿಬಂದವು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಿಡಿಪಿಸಿ ಅಧ್ಯಕ್ಷ ಅನಿಲ ರಗಟೆ ಅವರ ಹಣೆಗೆ ಕಲ್ಲೊಂದು ತೂರಿ ಬಂದು ಬಡಿಯಿತು. ಆಗ ಪ್ರತಿಭಟನಾಕಾರರು ಆಕ್ರೋಶಗೊಂಡು ಪಾದರಕ್ಷೆ ಪ್ರದರ್ಶಿಸಿದರು. ಇದರಿಂದ ಮತ್ತಷ್ಟು ಕೆರಳಿದ ಕಲ್ಯಾಣಪರ್ವದ ಮೆರವಣಿಗೆಯಲ್ಲಿಭಾಗಿಯಾಗಿದ್ದ ಬಸವಾಭಿಮಾನಿಗಳು ಪ್ರತಿಭಟನಾಗಾರರತ್ತ ತೆರಳಲು ಮುಂದಾದರು. ಸ್ಥಳದಲ್ಲಿದ್ದ ಪೊಲೀಸರು ತಡೆದು, ಮುಂದಾಗುವ ಅನಾಹುತ ತಪ್ಪಿಸಿದರು.

ದೇವಸ್ಥಾನದ ಕಮಿಟಿಯವರು ಘೋಷಣೆಗಳನ್ನು ಕೂಗಿ, ವಚನಾಂಕಿತ ತಿದ್ದಿದವರಿಗೆ ಬಸವಣ್ಣನ ಕರ್ಮ ಭೂಮಿಯಲ್ಲಿಕಲ್ಯಾಣ ಪರ್ವ ಮಾಡುವ ಯಾವುದೇ ನೈತಿಕತೆ ಇಲ್ಲ. ಇದಕ್ಕೆ ತಮ್ಮ ವಿರೋಧವಿದೆ ಎಂದು ಪರ್ವದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿಬಿಡಿಪಿಸಿ ಅಧ್ಯಕ್ಷ ಅನಿಲ ರಗಟೆ, ವಿಶ್ವಸ್ಥ ಸಮಿತಿಯ ಅಧ್ಯಕ್ಷ ಮಲ್ಲಯ್ಯ ಸ್ವಾಮಿ, ಪದಾಧಿಕಾರಿಗಳಾದ ರೇವಣಪ್ಪ ರಾಯವಾಡೆ, ಬಸವರಾಜ ಬಾಲಕಿಲೆ, ಸುಭಾಷ ಹೊಳಕುಂದೆ, ಅಶೋಕ ನಾಗರಾಳೆ, ಸುರೇಶ ಸ್ವಾಮಿ, ರಾಜಕುಮಾರ ಚಿರಡೆ,ಜಗನ್ನಾಥ ಖೂಬಾ, ಗದಗೆಪ್ಪಾ ಹಲಶೆಟ್ಟೆ, ರಾಜಕುಮಾರ ಹೊಳಕುಂದೆ,. ಭದ್ರಿನಾಥ ಪಾಟೀಲ, ಮಲ್ಲಿಕಾರ್ಜುನ ಕುರಿಕೋಟೆ, ಮಲ್ಲಿಕಾರ್ಜುನ ಚಿರಡೆ, ಶಿವರಾಜ ಶಾಶೆಟ್ಟೆ, ಡಾ.ಪ್ರಥ್ವಿರಾಜ ಬಿರಾದಾರ, ರವಿ ಕೊಳಕೂರ, ಶಿವಕುಮಾರ ಬಿರಾದಾರ, ಡಾ.ಎಸ್‌.ಬಿ. ದುರ್ಗೆ, ಶಶಿಕಾಂತ ದುರ್ಗೆ ಅನೇಕರು ಭಾಗವಹಿಸಿದ್ದರು. ಬಿಗಿ ಪೊಲೀಸ್‌ ಬಂದೋಬಸ್‌್ತ ಏರ್ಪಡಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ