ಆ್ಯಪ್ನಗರ

ಶಾಸಕರ ರಾಜೀನಾಮೆ; ಎದ್ದು ಹೋದ ಸುಧಾಕರ

ಜೆಡಿಎಸ್‌- ಕಾಂಗ್ರೆಸ್‌ನ ಮೈತ್ರಿ ಸರಕಾರದ ಶಾಸಕರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ಶಾಸಕ ಡಾ. ಕೆ. ಸುಧಾಕರ್‌ ನಿರಾಕರಿಸಿದರು.

Vijaya Karnataka 7 Jul 2019, 5:00 am
ಬೀದರ್‌ :ಜೆಡಿಎಸ್‌- ಕಾಂಗ್ರೆಸ್‌ನ ಮೈತ್ರಿ ಸರಕಾರದ ಶಾಸಕರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ಶಾಸಕ ಡಾ. ಕೆ. ಸುಧಾಕರ್‌ ನಿರಾಕರಿಸಿದರು.
Vijaya Karnataka Web resignation of mlas improved improviser
ಶಾಸಕರ ರಾಜೀನಾಮೆ; ಎದ್ದು ಹೋದ ಸುಧಾಕರ


ಶನಿವಾರ ಬೀದರ್‌ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರನ್ನು ಮಾಧ್ಯಮದವರು ಶಾಸಕರ ರಾಜೀನಾಮೆ ಕುರಿತು ಕೇಳಿದಾಗ, ಆ ಕುರಿತು ಸುಧಾಕರ್‌ ಮಾತನಾಡದೇ ಎದ್ದು ಹೋದ ಪ್ರಸಂಗ ನಡೆಯಿತು.

''ನಾನು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷನಾಗಿ ಪರಿಶೀಲನೆ ನಡೆಸಲು ಬಂದಿದ್ದೇನೆ. ಇದು ಬಿಟ್ಟು ಬೇರೆ ಏನೂ ಮಾತನಾಡಲಾರೆ'' ಎಂದು ಸುದ್ದಿಗೋಷ್ಠಿಯಲ್ಲೇ ಎದ್ದು ಹೊರ ಹೋದರು. ಇದಕ್ಕೂ ಮುನ್ನ ರಾಜ್ಯ ರಾಜಕಾರಣದ ಬೆಳವಣಿಗೆಗೆ ತಮಗೆ ಯಾವುದೇ ಸಂಬಂಧವೇ ಇಲ್ಲದಂತೆ ಅಧಿಕಾರಿಗಳೊಂದಿಗೆ ಡಿಸಿ ಕಚೇರಿಯಲ್ಲಿ ಸಭೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ