ಆ್ಯಪ್ನಗರ

ದ್ವಿತೀಯ ಪಿಯುಸಿ; ಪರೀಕ್ಷೆ ಸುಸೂತ್ರ

ದ್ವಿತೀಯ ಪಿಯುಸಿ ಪರೀಕ್ಷೆಗಳು ಶುಕ್ರವಾರದಿಂದ ಆರಂಭಗೊಂಡಿದ್ದು, ಜಿಲ್ಲೆಯ ಎಲ್ಲ 33 ಕೇಂದ್ರಗಳಲ್ಲಿ ಮೊದಲ ದಿನ ಅರ್ಥಶಾಸ್ತ್ರ (ಎಕಾನಾಮಿಕ್ಸ್‌) ಹಾಗೂ ಭೌತಶಾಸ್ತ್ರ (ಫಿಸಿಕ್ಸ್‌) ವಿಷಯಗಳ ಪರೀಕ್ಷೆಗಳು ಯಾವುದೇ ಅಡ್ಡಿ, ಆತಂಕವಿಲ್ಲದೇ, ಸರಳ, ಸುಸೂತ್ರವಾಗಿ ನಡೆದಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಎಸ್‌. ವಿಕಕ್ಕೆ ತಿಳಿಸಿದ್ದಾರೆ.

Vijaya Karnataka 2 Mar 2019, 9:00 pm
ಬೀದರ್‌ :ದ್ವಿತೀಯ ಪಿಯುಸಿ ಪರೀಕ್ಷೆಗಳು ಶುಕ್ರವಾರದಿಂದ ಆರಂಭಗೊಂಡಿದ್ದು, ಜಿಲ್ಲೆಯ ಎಲ್ಲ 33 ಕೇಂದ್ರಗಳಲ್ಲಿ ಮೊದಲ ದಿನ ಅರ್ಥಶಾಸ್ತ್ರ (ಎಕಾನಾಮಿಕ್ಸ್‌) ಹಾಗೂ ಭೌತಶಾಸ್ತ್ರ (ಫಿಸಿಕ್ಸ್‌) ವಿಷಯಗಳ ಪರೀಕ್ಷೆಗಳು ಯಾವುದೇ ಅಡ್ಡಿ, ಆತಂಕವಿಲ್ಲದೇ, ಸರಳ, ಸುಸೂತ್ರವಾಗಿ ನಡೆದಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಎಸ್‌. ವಿಕಕ್ಕೆ ತಿಳಿಸಿದ್ದಾರೆ.
Vijaya Karnataka Web secondary puc examination of the test
ದ್ವಿತೀಯ ಪಿಯುಸಿ; ಪರೀಕ್ಷೆ ಸುಸೂತ್ರ


ಅರ್ಥಶಾಸ್ತ್ರ ವಿಷಯದ ಪರೀಕ್ಷೆಗೆ ಜಿಲ್ಲೆಯಾದ್ಯಂತ ಒಟ್ಟು 8711 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 7395 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, 1316 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಜತೆಗೆ, ಭೌತಶಾಸ್ತ್ರ ವಿಷಯದ ಪರೀಕ್ಷೆಗೆ ಜಿಲ್ಲೆಯಾದ್ಯಂತ ಒಟ್ಟು 8798 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 8375 ವಿದ್ಯಾರ್ಥಿಗಳು ಹಾಜರಾಗಿದ್ದರೆ, 423 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಡಿಡಿಪಿಯು ಮಲ್ಲಿಕಾರ್ಜುನ ಎಸ್‌. ಹೇಳಿದರು.

ಮೊದಲ ದಿನವಾದ ಶುಕ್ರವಾರ ಪರೀಕ್ಷಾ ಪ್ರಕ್ರಿಯೆ ಸುಸೂತ್ರವಾಗಿ ನಡೆದಿದೆ. ಎಲ್ಲೆಡೆ ಅಧಿಕಾರಿಗಳು ವಿದ್ಯಾರ್ಥಿಗಳ ಮೇಲೆ ನಿಗಾ ಇಟ್ಟಿದ್ದರು ಎಂದು ಡಿಡಿಪಿಯು ಹೇಳಿದರು. ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತಲು ಸೂಕ್ತ ಪೊಲೀಸ್‌ ಬಂದೋ ಬಸ್ತ್‌ ಏರ್ಪಾಡು ಮಾಡಲಾಗಿತ್ತು.

ಹೆಲ್ತ್‌ ಕೇರ್‌ ವಿಷಯದ ಪರೀಕ್ಷೆ

ಶನಿವಾರ ಮಾ.2 ರಂದು ಹೆಲ್ತ್‌ ಕೇರ್‌ ವಿಷಯದ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯ ಬಸವಕಲ್ಯಾಣದಲ್ಲಿ ಮಾತ್ರ ಒಂದೇ ಪರೀಕ್ಷಾ ಕೇಂದ್ರವಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ವಿಕಕ್ಕೆ ತಿಳಿಸಿದರು. ಪರೀಕ್ಷೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಹೆಲ್ತ್‌ ಕೇರ್‌ ವಿಷಯಕ್ಕೆ 16 ವಿದ್ಯಾರ್ಥಿಗಳು ಮಾತ್ರ ನೋಂದಾಯಿಸಿಕೊಂಡಿದ್ದು, ಶನಿವಾರ ಪರೀಕ್ಷೆ ಎದುರಿಸಲಿದ್ದಾರೆ ಎಂದು ಅವರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ