ಆ್ಯಪ್ನಗರ

ಮಾದರಿ ಪಟ್ಟಣಕ್ಕೆ ನಾಯಿಗಳ ಹಾವಳಿ

ನೂತನ ತಾಲೂಕು ಕೇಂದ್ರವಾಗಿರುವ ಚಿಟಗುಪ್ಪ ನಿವಾಸಿಗಳಿಗೆ ಹಾಗೂ ನಾನಾ ಕೆಲಸದ ನಿಮಿತ್ತ ಇಲ್ಲಿಗೆ ಆಗಮಿಸುವ ಜನರಿಗೆ ಬೀದಿ ನಾಯಿಗಳ ಕಾಟ ತಲೆನೋವಾಗಿ ಪರಿಣಮಿಸಿದೆ.

Vijaya Karnataka 20 Sep 2018, 5:22 pm
ಚಿಟಗುಪ್ಪ : ನೂತನ ತಾಲೂಕು ಕೇಂದ್ರವಾಗಿರುವ ಚಿಟಗುಪ್ಪ ನಿವಾಸಿಗಳಿಗೆ ಹಾಗೂ ನಾನಾ ಕೆಲಸದ ನಿಮಿತ್ತ ಇಲ್ಲಿಗೆ ಆಗಮಿಸುವ ಜನರಿಗೆ ಬೀದಿ ನಾಯಿಗಳ ಕಾಟ ತಲೆನೋವಾಗಿ ಪರಿಣಮಿಸಿದೆ.
Vijaya Karnataka Web street dogs to model town
ಮಾದರಿ ಪಟ್ಟಣಕ್ಕೆ ನಾಯಿಗಳ ಹಾವಳಿ


ಏಕಾಏಕಿ ಜನರ ಮೇಲೆ ದಾಳಿ ಮಾಡಿ ಕಚ್ಚಿರುವುದು ವರದಿಯಾಗಿದೆ. ಇದೇ ತಿಂಗಳ 1ರಿಂದ 17ರ ವರೆಗೆ ಚಿಟಗುಪ್ಪ ಪಟ್ಟಣದ 8 ಜನ ಹಾಗೂ ನಾನಾ ಕೆಲಸದ ನಿಮಿತ್ತ ಆಗಮಿಸಿದ ಸುತ್ತಮುತ್ತಲಿನ 28 ಜನರು ನಾಯಿ ದಾಳಿಗೆ ತುತ್ತಾಗಿದ್ದಾರೆ. ಒಟ್ಟು 36 ನಾಯಿ ದಾಳಿ ಪ್ರಕರಣಗಳು ಸಂಭವಿಸಿದ್ದು, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಲೆಕ್ಕವಿಲ್ಲ.

ಟೆಂಡರ್‌ ಪಡೆಯದ ಏಜೆನ್ಸಿಗಳು:

ಪಟ್ಟಣದ ವಾರ್ಡ್‌4ರ ಶ್ರೀಗುರು ಅಯ್ಯಪ್ಪಸ್ವಾಮಿ ಮಠ ಕಾಲೊನಿ, ಭುತಾಳಿ ಓಣಿ, ಹೈದರಾಲಿ ಚೌಕ, ಕ್ರಿಶ್ವನ್‌ ಓಣಿ, ಶಿವಪುರ ಓಣಿ ಸೇರಿದಂತೆ ಪಟ್ಟಣದ ಹಲವೆಡೆ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು ದಿಢೀರ್‌ ದಾಳಿ ಮಾಡುತ್ತಿವೆ.

ಜಿಲ್ಲೆಯಲ್ಲಿ ಸ್ವಚ್ಛ ಮಾದರಿ ಪಟ್ಟಣಕ್ಕೆ ಹೆಸರುವಾಸಿಯಾಗಿರುವ ಚಿಟಗುಪ್ಪ ಪುರಸಭೆ ಜನತೆಗೆ ಬೀದಿ ನಾಯಿಗಳ ಕಾಟ ಹೆಚ್ಚಿದೆ. ನಾಯಿಗಳನ್ನು ಹಿಡಿದು ಚುಚ್ಚುಮದ್ದು ನೀಡುವ ಮತ್ತು ಬಥ್‌Üರ್‍ ಕಂಟ್ರೋಲಗಾಗಿ ಸಂಬಂಧಿಸಿದಂತೆ ಹಲವು ಬಾರಿ ಟೆಂಡರ್‌ ಕರೆದರೂ ನುರಿತ ಏಜೆನ್ಸಿಗಳು ಟೆಂಡರನಲ್ಲಿ ಭಾಗವಹಿಸುತ್ತಿಲ್ಲ ಎಂದು ತಿಳಿದು ಬಂದಿದೆ.

ಮನ್ನಾಎಖೇಳ್ಳಿಯಲ್ಲೂ ಹಾವಳಿ

ತಾಲೂಕಿನ ಮನ್ನಾಎಖೇಳ್ಳಿ ಗ್ರಾಮದಲ್ಲೂ ಬೀದಿ ನಾಯಿಗಳ ಹಾವಳಿ ಅತಿಯಾಗಿದೆ. ಪ್ರಮುಖ ರಸ್ತೆಯಲ್ಲಿ ಪ್ರತಿ ನಿತ್ಯ ಬೆಳಗ್ಗೆಯಿಂದ ಸಂಜೆವರೆಗೂ ನಾಯಿಗಳ ದಂಡು ಬೀಡು ಬಿಟ್ಟಿರುತ್ತವೆ. ಹಲವು ಬೈಕ್‌ ಸವಾರರು ಬಿದ್ದು ಗಾಯಗಳಾದ ವರದಿ ಸಂಭವಿಸಿವೆ.

ರಾತ್ರಿ ನಾಯಿಗಳ ಚೀರಾಟದಿಂದ ಸ್ಥಳೀಯರು ನಿದ್ದೆಗೆಡುತ್ತಿದ್ದಾರೆ. ಎಲ್ಲರಿಗೂ ತೀವ್ರ ಕಿರಿಕಿರಿಯಾಗುತ್ತಿದೆ ಎಂದು ಮನ್ನಾಎಖೇಳ್ಳಿ ನಿವಾಸಿ ಡಾ. ನಾಗೇಶ ಪಾಟೀಲ ಅಳಲು ತೋಡಿಕೊಂಡಿದ್ದಾರೆ.

ನಾಯಿ ಕಾಟ ತಪ್ಪಿಸಲು 5 ಲಕ್ಷ

ಪ್ರಾಣಿಗಳನ್ನು ಹಿಂಸಿಸುವಂತಿಲ್ಲ. ಬದಲಾಗಿ ಎನಿಮಲ್‌ ಬಥ್‌Üರ್‍ ಕಂಟ್ರೋಲ್‌ಮತ್ತು ಅ್ಯಂಟಿಬಯಾಟಿಕ್‌ ವ್ಯಾಕ್ಷಿನೇಷನ್‌ ಗಾಗಿ ಪುರಸಭೆಯಿಂದ ಟೆಂಡರ್‌Ü ಕರೆಯಲಾಗಿದೆ. 5 ಲಕ್ಷ ಅನುದಾನವಿದೆ. ಆದರೆ ಯಾವುದೆ ಏಜೆನ್ಸಿಗಳು ಭಾಗವಹಿಸದ ಕಾರಣ ಅನುದಾನ ಬಳಕೆಯಾಗಿಲ್ಲ. ಆದಷ್ಟು ಬೇಗ ಸಮಸ್ಯೆಯನ್ನು ಬಗೆ ಹರಿಸಲಾಗುವುದು.

ಹುಸಾಮೊದ್ದಿನ್‌ ಬಾಬಾ, ಪುರಸಭೆ ಮುಖ್ಯಾಧಿಕಾರಿ ಚಿಟಗುಪ್ಪ

ಚಿಟಗುಪ್ಪ ಪಟ್ಟಣದ ಹಲವು ಓಣಿಗಳಲ್ಲಿ ಬೀದಿ ನಾಯಿಗಳ ಹಾವಳಿಯಿಂದ ರಾತ್ರಿ ಹೊರಗೆ ಬರಲು ಭಯವಾಗುತ್ತಿದೆ. ಇಚೇಗೆ ನನ್ನ ಮೇಲೂ ದಾಳಿ ಮಾಡಿದ ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಓಡಿದಾಗ, ಬಿದ್ದು ಗಾಯಗಳಾಗಿವೆ.

ಪ್ರಭು ಹಿರೇಮಠ, ಪಟ್ಟಣದ ನಿವಾಸಿ.

ಚಿಟಗುಪ್ಪ ಪಟ್ಟಣದಲ್ಲಿ ಅಂದಾಜು ಒಂದು ಸಾವಿರದಷ್ಟು ಬೀದಿ ನಾಯಿಗಳಿವೆ. ಎನಿಮಲ್‌ ಬರ್ಥ ಕಂಟ್ರೋಲ್‌ ಮಾಡುವ ದೃಷ್ಟಿಯಿಂದ ಸಂಬಂಧಿಸಿದವರೊಂದಿಗೆ ಚರ್ಚಿಸಲಾಗಿದೆ. ಬೇಗನೆ ಕ್ರಮ ಕೈಗೊಳ್ಳಲಾಗುವುದು.

ಡಾ. ಗೋವೀಂದ, ಪಶು ವೈದ್ಯಾಧಿಕಾರಿ ಹುಮನಾಬಾದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ