ಆ್ಯಪ್ನಗರ

ಭಗವಂತ ಖೂಬಾ ಅವರಿಗಿದೆ 102 ಕೋಟಿ ಸಾಲ

ಬೀದರ್‌ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಭಗವಂತ ಖೂಬಾ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಚುನಾವಣಾಧಿಕಾರಿ ಡಾ. ಎಚ್‌.ಆರ್‌. ಮಹದೇವ್‌ ಅವರಿಗೆ ನಾಮಪತ್ರ ಸಲ್ಲಿಸಿದ್ದು, ಅದರೊಂದಿಗೆ ಆಸ್ತಿಯ ವಿವರ ಕೂಡಾ ಸಲ್ಲಿಕೆ ಮಾಡಿದ್ದಾರೆ.

Vijaya Karnataka 31 Mar 2019, 5:00 am
ಬೀದರ್‌ :ಬೀದರ್‌ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಭಗವಂತ ಖೂಬಾ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಚುನಾವಣಾಧಿಕಾರಿ ಡಾ. ಎಚ್‌.ಆರ್‌. ಮಹದೇವ್‌ ಅವರಿಗೆ ನಾಮಪತ್ರ ಸಲ್ಲಿಸಿದ್ದು, ಅದರೊಂದಿಗೆ ಆಸ್ತಿಯ ವಿವರ ಕೂಡಾ ಸಲ್ಲಿಕೆ ಮಾಡಿದ್ದಾರೆ.
Vijaya Karnataka Web the bhagwan khuba is the 102 crore debt
ಭಗವಂತ ಖೂಬಾ ಅವರಿಗಿದೆ 102 ಕೋಟಿ ಸಾಲ

ಖೂಬಾ ಹೆಸರಿನಲ್ಲಿ 49. 12ಲಕ್ಷ ರೂ. ಚರಾಸ್ತಿ, 93. 46ಲಕ್ಷ ರೂ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿಯ ಹೆಸರಿನಲ್ಲಿ 3.78 ಲಕ್ಷ ರೂ ಚರಾಸ್ತಿ ಹಾಗೂ 35 ಲಕ್ಷ ರೂ.ಸ್ಥಿರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಬ್ಯಾಂಕ್‌, ಹಣಕಾಸು ಸಂಸ್ಥೆಗಳು ಮತ್ತು ಇತರೆಡೆಯಿಂದ 1.02 ಕೋಟಿ ರೂ ಸಾಲ ಪಡೆದುಕೊಂಡಿರುವುದಾಗಿ ಘೋಷಿಸಿದ್ದಾರೆ.

ಪತ್ನಿಯ ಹೆಸರಿನಲ್ಲಿ ಖರೀದಿಸಿದ ಸ್ಥಿರಾಸ್ತಿಯ ಅಭಿವೃದ್ಧಿಗಾಗಿ 50 ಲಕ್ಷ ರೂ. ಖರ್ಚು ಮಾಡಿರುವುದಾಗಿ ತಿಳಿಸಿದ್ದಾರೆ. ತಮ್ಮ ಹೆಸರಿನಲ್ಲಿ 2.34ಕೋಟಿ ರೂ ಹಾಗೂ ಪತ್ನಿಯ ಹೆಸರಿನಲ್ಲಿ 1.24 ಕೋಟಿ ರೂ.ಪ್ರಸಕ್ತ ಮಾರ್ಕೆಟ್‌ ಬೆಲೆಯ ಆಸ್ತಿ ಇರುವುದಾಗಿ ತಿಳಿಸಿದ್ದಾರೆ. ತಮ್ಮ ಹೆಸರಿನಲ್ಲಿ 1.42 ಕೋಟಿ ರೂ. ಆಸ್ತಿ ಹಾಗೂ ಪತ್ನಿಯ ಹೆಸರಿನಲ್ಲಿ 88.78 ಲಕ್ಷ ರೂ. ಆಸ್ತಿಯನ್ನು ಖರೀದಿಸಿದ್ದಾರೆ.

ಪೂರ್ವಜರಿಂದ ಒಟ್ಟು 5ಕೋಟಿ ರೂ.ಗಳ ಬೆಲೆಯ ಆಸ್ತಿ ಬಂದಿದೆ. ತಮ್ಮ ಕೈಯಲ್ಲಿ 50 ಸಾವಿರ ಹಾಗೂ ಪತ್ನಿಯ ಬಳಿ 30 ಸಾವಿರ ರೂ.ನಗದು ಇರುವುದಾಗಿಯೂ ಖೂಬಾ ಅವರು ತಿಳಿಸಿದ್ದಾರೆ.

ಪಿಕ್‌ ಅಪ್‌ (ಎಂ), ಟಿಪ್ಪರ್‌, ಇನ್ನೋವಾ ಎಸ್‌ಯುವಿ,ಲೋಡರ್‌ (ನಾಲ್ಕೂ ವಾಹನ ಸೇರಿ 45 ಲಕ್ಷ) ವಾಹನಗಳಿವೆ. ತಮ್ಮ ಬಳಿ 2 ಲಕ್ಷ ಮೌಲ್ಯದ 60 ಗ್ರಾಂ ಚಿನ್ನ, 1.10 ಲಕ್ಷ ಮೌಲ್ಯದ ಗಡಿಯಾರ ಇರುವುದಾಗಿ ಹೇಳಿದ್ದಾರೆ. ಪತ್ನಿ ಬಳಿ 3.30 ಲಕ್ಷ ಮೌಲ್ಯದ 200 ಗ್ರಾಂ ಚಿನ್ನಾಭರಣ,48 ಸಾವಿರ ಮೌಲ್ಯದ ಒಂದು ಕೆಜಿ ಬೆಳ್ಳಿ ಇದೆ. ಭಗವಂತ ಖೂಬಾ ಅವರ ಪತ್ನಿ ಶೀಲಾ ಖೂಬಾ, ಮಕ್ಕಳಾದ ಅಶುತೋಷ್‌ ಖೂಬಾ, ವಸುಂಧರಾ ಖೂಬಾ, ಮಣಿಕರ್ಣಿಕಾ ಖೂಬಾ ಇದ್ದಾರೆ.

ಭಗವಂತ ಖೂಬಾ ಅವರು ತುಮಕೂರಿನ ಎಸ್‌ಐಟಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿಇ ಮೆಕ್ಯಾನಿಕಲ್‌ ಶಿಕ್ಷಣ ಪಡೆದುಕೊಂಡಿದ್ದಾರೆ ಎಂಬ ವಿಷಯವನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ನಮೂದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ