ಆ್ಯಪ್ನಗರ

ಮಗುವಿನ ಶವ ಹೊರಕ್ಕೆ ತೆಗೆದು ವೈದ್ಯ ತಪಾಸಣೆ

ತಾಲೂಕಿನ ಸೇಡೋಳ ಗ್ರಾಮದಲ್ಲಿಮಗುವೊಂದರ ಶಂಕಾಸ್ಪದ ಸಾವಿನ ಹಿನ್ನೆಲೆಯಲ್ಲಿಹೂತ ಶವವನ್ನು ಪೊಲೀಸ್‌ ಹಾಗೂ ತಹಸೀಲ್ದಾರ್‌ ಸಮ್ಮುಖದಲ್ಲಿಹೊರಕ್ಕೆ ತೆಗೆದು ವೈದ್ಯ ತಪಾಸಣೆ ಮಾಡಿದ ಘಟನೆ ಮಂಗಳವಾರ ನಡೆಯಿತು.

Vijaya Karnataka 17 Oct 2019, 5:00 am
ಹುಮನಾಬಾದ್‌:ತಾಲೂಕಿನ ಸೇಡೋಳ ಗ್ರಾಮದಲ್ಲಿಮಗುವೊಂದರ ಶಂಕಾಸ್ಪದ ಸಾವಿನ ಹಿನ್ನೆಲೆಯಲ್ಲಿಹೂತ ಶವವನ್ನು ಪೊಲೀಸ್‌ ಹಾಗೂ ತಹಸೀಲ್ದಾರ್‌ ಸಮ್ಮುಖದಲ್ಲಿಹೊರಕ್ಕೆ ತೆಗೆದು ವೈದ್ಯ ತಪಾಸಣೆ ಮಾಡಿದ ಘಟನೆ ಮಂಗಳವಾರ ನಡೆಯಿತು.
Vijaya Karnataka Web the physician checks the babys body out
ಮಗುವಿನ ಶವ ಹೊರಕ್ಕೆ ತೆಗೆದು ವೈದ್ಯ ತಪಾಸಣೆ


ಘಟನೆ ಹಿನ್ನೆಲೆ:


ಮಗು ಅಶ್ವಿತ್‌ ಮೇತ್ರೆ (3) ಸೆಪ್ಟೆಂಬರ್‌ 1ರಂದು ಬೆಳಗ್ಗೆ 12 ಕ್ಕೆ ಕಾಣೆಯಾಗಿತ್ತು. ಅಂದು ಸಂಜೆ, ಉಮೇಶ ಮೇತ್ರೆ ಅವರ ಮನೆಯಲ್ಲಿಮಗು ಶವವಾಗಿ ಪತ್ತೆಯಾಗಿತ್ತು. ಸಹಜ ಸಾವು ಎಂದು ಭಾವಿಸಿ ಗ್ರಾಮದ ಪ್ರಮುಖರ ಸಮ್ಮುಖದಲ್ಲಿಅಂತ್ಯ ಸಂಸ್ಕಾರ ಮಾಡಲಾಗಿತ್ತು.

ಈ ಕುರಿತು ಕೆಲವು ದಿನಗಳ ನಂತರ ಮಗುವಿನ ಸಾವಿನ ವಿಷಯದಲ್ಲಿಸಂಶಯ ವ್ಯಕ್ತವಾಗಿ, ಕೊಲೆ ನಡೆದಿದೆ ಎಂದು ಸಾರ್ವಜನಿಕ ವಲಯದಲ್ಲಿಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ, ಮೃತ ಅಶ್ವಿತ್‌ನ ತಂದೆ ಅಂಬಾದಾಸ್‌ ಮೇತ್ರೆ ಸೆ.27ರಂದು ಹುಮನಾಬಾದ್‌ ಪೊಲೀಸ್‌ ಠಾಣೆಯಲ್ಲಿ ಶಂಕಾಸ್ಪದ ಸಾವಿನ ತನಿಖೆಗೆ ಆಗ್ರಹಿಸಿ ದೂರು ಸಲ್ಲಿಸಿದ್ದರು. ದೂರಿನ ಮೇರೆಗೆ ತಹಸೀಲ್ದಾರ್‌ ನಾಗಯ್ಯ ಹಿರೇಮಠ, ಪಿಎಸ್‌ಐ ಸಂತೋಷ ಎಲ್‌.ಟಿ. ಸಮ್ಮುಖದಲ್ಲಿಸೇಡೋಳ ಗ್ರಾಮದ ಸ್ಮಶಾನ ಭೂಮಿಯಲ್ಲಿ ಹೂತಿರುವ ಶವವನ್ನು ಹೊರಕ್ಕೆ ತೆಗೆದು ವೈದ್ಯರ ತಂಡದೊಂದಿಗೆ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಸ್ಥಳದಲ್ಲಿಗ್ರೇಡ್‌-2 ತಹಸೀಲ್ದಾರ್‌ ಜಯಶ್ರೀ, ಗ್ರಾಪಂ ಅಧ್ಯಕ್ಷ ಪಾಡುರಂಗ ಫೀರಾಜಿ, ಸದಸ್ಯ ರಾಜು ದಂಡೆಕರ, ಕಂದಾಯ ನಿರೀಕ್ಷಕ ಯಲ್ಲಗೊಂಡ, ಪಿಡಿಒ ಆನಂದ ಸಾವಳೆ, ಡಾ. ಮೊಶೀನ್‌ ಉಲ್ಲಾಖಾನ್‌, ಡಾ.ಸೈಯದ್‌ ಇಸಾಮೋದ್ಧಿನ್‌, ಡಾ. ಸೈಯದ್‌ ಇಸ್ಮಾಯಿಲ್‌, ಇಂಟ್ಲಿಜನ್ಸಿ ಪಿಎಸ್‌ಐ ಶೇಖ್‌ಷಾ ಪಟೇಲ್‌, ಪೊಲೀಸ್‌ ಸಿಬ್ಬಂದಿಗಳಾದ ಬಸವರಾಜ ಜೆ.ಎಂ.ಕೆ., ಪ್ರತಾಪ್‌ರೆಡ್ಡಿ, ವಿಜಯಕುಮಾರ, ಸಂಜುಕುಮಾರ, ಶ್ರೀಧರ ಮಟ್ಟಿ, ಆಕಾಶ ಸಿಂಧೆ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ