ಆ್ಯಪ್ನಗರ

ಕೆಪಿಸಿಸಿ ಕಾರ‍್ಯದರ್ಶಿ ಹುದ್ದೆಗೆ ಅರಳಿ ರಾಜೀನಾಮೆ

ಲೋಕಸಭೆ ಚುನಾವಣೆ ಕಾಂಗ್ರೆಸ್‌ ಹಿನ್ನಡೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ರಾಜೀನಾಮೆ ಸಲ್ಲಿಸಿದ್ದಾರೆ.

Vijaya Karnataka 28 May 2019, 5:00 am
ಬೀದರ್‌ :ಲೋಕಸಭೆ ಚುನಾವಣೆ ಕಾಂಗ್ರೆಸ್‌ ಹಿನ್ನಡೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ರಾಜೀನಾಮೆ ಸಲ್ಲಿಸಿದ್ದಾರೆ.
Vijaya Karnataka Web the resignation of the resignation of kpcc secretary
ಕೆಪಿಸಿಸಿ ಕಾರ‍್ಯದರ್ಶಿ ಹುದ್ದೆಗೆ ಅರಳಿ ರಾಜೀನಾಮೆ


''ನಾನು ನನ್ನ ಕೆಲಸದಲ್ಲಿ ವಿಫಲವಾಗಿದ್ದೇನೆ, ನನ್ನ ಕೆಲಸದ ಬಗ್ಗೆ ನಾನು ನೈತಿಕ ಹೊಣೆ ಹೊತ್ತು, ಪಕ್ಷವು ತನಗೆ ನೀಡಿದ್ದ ಕೆಪಿಸಿಸಿ ಕಾರ‍್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ದಯಮಾಡಿ ಅಂಗೀಕರಿಸಬೇಕು '' ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೆ ಕಳುಹಿಸಿರುವ ಪತ್ರದಲ್ಲಿ ವಿವರಿಸಿದ್ದಾರೆ.

''ನನ್ನ ಮೇಲೆ ವಿಶ್ವಾಸವಿಟ್ಟು ಕಲಬುರಗಿ ಲೋಕಸಭಾ ಕ್ಷೇತ್ರದ ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ಅದಕ್ಕೆ ತಕ್ಕಂತೆ ನಾನು ಹಗಲು, ರಾತ್ರಿ ಕೆಲಸ ಮಾಡಿದರೂ ಮತದಾರರಿಗೆ ಸರಿಯಾಗಿ ಮನವರಿಕೆಯಾದಂತೆ ಕಾಣುತ್ತಿಲ್ಲ. ಪಕ್ಷದ ಪರ ಮತ ಹಾಕಿಸಲು ನಾನು ವಿಫಲವಾಗಿದ್ದೇನೆ ಎಂಬ ರೀತಿಯಲ್ಲಿ ನನಗೆ ಭಾಸವಾಗುತ್ತಿದೆ''ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ತಮ್ಮ ಮೇಲೆ ವಿಶ್ವಾಸವಿಟ್ಟು ಕೆಲಸ ವಹಿಸಿದ್ದು, ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ತಾವು ಉಸ್ತುವಾರಿ ಹೊಂದಿದ್ದ ಕ್ಷೇತ್ರದಲ್ಲೂ ಎದುರಾಳಿ ಪಕ್ಷಕ್ಕೆ ಹೆಚ್ಚಿನ ಮತಗಳು ಬಂದಿದೆ. ಇದರಿಂದಾಗಿ ತಮ್ಮ ರಾಷ್ಟ್ರ ನಾಯಕರು ಸೋಲು ಕಂಡಿದ್ದಾರೆ. ಹೀಗಾಗಿ, ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಅರಳಿ ತಿಳಿಸಿದ್ದಾರೆ. ಮುಂದೆ ಪಕ್ಷದ ಏಳಿಗೆಗಾಗಿ ದುಡಿಯುವೆ, ಪಕ್ಷ ಸಂಘಟಿಸುವುದಾಗಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ