ಆ್ಯಪ್ನಗರ

ನೀರಿಲ್ಲದೆ ಮೇಲೇಳದ ಮೊಳಕೆ

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಮೊಳಕೆಯೊಡೆದಿದ್ದು, ನೀರಿಲ್ಲದ್ದರಿಂದ ಬಾಡಿ ಹೋಗುತ್ತಿವೆ. ತಕ್ಷಣವೇ ಮಳೆಯ ಅಗತ್ಯವಿದ್ದು, ಮಳೆಗಾಗಿ ರೈತಾಪಿ ಜನರು ಮುಗಿಲು ನೋಡುವಂತಾಗಿದೆ.

Vijaya Karnataka 20 Jul 2019, 9:11 pm
ಬಸವರಾಜ ಶಿವಪೂಜೆ ಔರಾದ್‌ :ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಮೊಳಕೆಯೊಡೆದಿದ್ದು, ನೀರಿಲ್ಲದ್ದರಿಂದ ಬಾಡಿ ಹೋಗುತ್ತಿವೆ. ತಕ್ಷಣವೇ ಮಳೆಯ ಅಗತ್ಯವಿದ್ದು, ಮಳೆಗಾಗಿ ರೈತಾಪಿ ಜನರು ಮುಗಿಲು ನೋಡುವಂತಾಗಿದೆ.
Vijaya Karnataka Web top seedlings without water
ನೀರಿಲ್ಲದೆ ಮೇಲೇಳದ ಮೊಳಕೆ


ಸತತ ಬರಗಾಲದಿಂದ ತತ್ತರಿಸಿದ ತಾಲೂಕಿನ ರೈತರ ಪಾಲಿಗೆ ಈ ಬಾರಿಯೂ ಬರದ ಕಾರ್ಮೋಡ ಕವಿದಿದ್ದು, ಮುಂಗಾರು ಕೈಕೊಡುತ್ತಿದೆ. ಅಲ್ಪ ಸ್ವಲ್ಪ ಮಳೆಯಿಂದಾಗಿ ತಾಲೂಕಿನ ಕೆಲ ಕಡೆ ಬಿತ್ತನೆ ಮಾಡಿದ ರೈತರು, ಆರಿದ್ರ ಮಳೆ ಕೈ ಕೊಟ್ಟ ಕಾರಣ ಪುನರ್ವಸು ಮಳೆಯ ಭರವಸೆಯಲ್ಲಿ ದಿನ ದೂಡುವಂತಾಗಿದೆ.

ಮುಂಗಾರಿಗಿಂತ ಮುಂಚೆ ರೈತರು ರಂಟೆ ಕುಂಟೆ ಹೊಡೆದು ಹರ್ಷದಿಂದ ಬಿತ್ತನೆ ಮಾಡಿದ್ದಾರೆ. ಆದರೆ ಸಮಯಕ್ಕೆ ಸುರಿಯದ ಮಳೆಯಿಂದಾಗಿ ತಾಲೂಕಿನ ರೈತರು ಕಂಗಾಲಾಗಿದ್ದು, ದೇವರ ಮೊರೆ ಹೋಗಿದ್ದಾರೆ.

ಆಷಾಢದ ಗಾಳಿಗೆ ಮೋಡಗಳು ಓಡುತ್ತಿದ್ದು, ಬೀಸುವ ಗಾಳಿಗೆ ಭೂಮಿ ಕೂಡ ಬಿರುಸುಗೊಂಡು ಮೊಳಕೆ ಮೇಲೇಳದಂತಾಗಿದೆ. ಈಗಾಗಲೆ ಬಿತ್ತಿದ ರೈತರ ಹಾಗೂ ಇನ್ನೂ ಬಿತ್ತನೆ ಮಾಡದ ರೈತರ ಗೋಳು ಕೇಳುವವರಿಲ್ಲದಂತಾಗಿದೆ.

ತಾಲೂಕಿನಲ್ಲಿ ಈ ಬಾರಿ ಮಳೆ ಪ್ರಮಾಣ ಸಾಕಷ್ಟು ಕಡಿಮೆಯಾಗಿದ್ದು,ಜೂನ್‌ ತಿಂಗಳಲ್ಲಿ ವಾಡಿಕೆಯಂತೆ 133 ಮಿಮೀ ಮಳೆಯಾಗಬೇಕು.ಆದರೆ ಬರೀ 56 ಮಿಮೀ ಮಳೆಯಾಗಿದ್ದು, ಅಲ್ಲಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ಆದರೆ ಜುಲೈ ತಿಂಗಳಲ್ಲಿ ಬೀಳಬೇಕಾದ ಮಳೆ ಆಷಾಢದ ಗಾಳಿಗೆ ಸುರಿಯದೇ ರೈತನ ಬೆಳೆಗಳಿಗೆ ಕಂಟಕ ತಂದೊಡ್ಡುವಂತಾಗಿದೆ.

ನಡೆಯದ ಬಿತ್ತನೆ:

ತಾಲೂಕು ಕೇಂದ್ರ ಸುತ್ತ ಮುತ್ತ 5 ಕಿಮೀ ಅಂತರದಲ್ಲಿ ಮಳೆ ಹೆಚ್ಚಾಗಿದ್ದು ಅಲ್ಲಿ ಮಾತ್ರ ಬಿತ್ತನೆ ಮಾಡಲಾಗಿದ್ದು ಬಿಟ್ಟರೆ ಸಂತಪುರ, ಠಾಣಾ ಕಶುನೂರ್‌, ವಡಗಾಂವ, ಚಿಂತಾಕಿ ಹೋಬಳಿಗಳಲ್ಲಿ ವಾಡಿಕೆಯಂತೆ ಬಿತ್ತನೆಯಾಗಿಲ್ಲ ಎನ್ನುವುದು ಕೃಷಿ ಇಲಾಖೆ ಮಾಹಿತಿಯಿಂದ ತಿಳಿದು ಬರುತ್ತದೆ.

ಒಟ್ಟಿನಲ್ಲಿ ಮುಂಗಾರು ಮಳೆ ಬಾರದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೋಡ ಕವಿದ ವಾತಾವರಣದಿಂದ ಹವಾಮಾನ ತಂಪು ಆಗಿದ್ದರೂ ಮಳೆ ಬರುತ್ತಿಲ್ಲ. ಬಿತ್ತಿದ ಬೀಜ ಮೊಳಕೆಯೊಡೆದರೂ ಉಳಿಸಿಕೊಳ್ಳದೆ ರೈತರು ಅಸಹಾಯಕರಾಗಿದ್ದಾರೆ.

ತಾಲೂಕಿನಲ್ಲಿ ಈಗಾಗಲೆ ಶೇ. 50 ರಷ್ಟು ಬಿತ್ತನೆಯಾಗಿದೆ. ಮಳೆ ಪ್ರಮಾಣ ಕಡಿಮೆ ಇದ್ದ ಕಾರಣ ಇನ್ನು ಬಿತ್ತನೆ ಮಾಡಿಲ್ಲ. ತಾಲೂಕಿನಲ್ಲಿ ಒಟ್ಟು 88750 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದ್ದು, ಮಳೆ ಬಾರದ ಕಾರಣ 49252 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ.

ಅಬ್ದುಲ್‌ ಮಾಜೀದ್‌ ಸಹಾಯಕ ಕೃಷಿ ನಿರ್ದೇಶಕರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ