ಆ್ಯಪ್ನಗರ

ಐಎಎಸ್‌ ಕಬ್ಬಿಣದ ಕಡಲೆ ಅಲ್ಲ

ಐಎಸ್‌ಎಸ್‌, ಐಪಿಎಸ್‌ನಂತಹ ಪರೀಕ್ಷೆ ಕಬ್ಬಿಣದ ಕಡಲೆ ಅಲ್ಲವೇ ಅಲ್ಲ, ಅದು ಸರಳವಾಗಿದ್ದು, ನಿಶ್ಚಿತ ಗುರಿ, ಪರಿಶ್ರಮ ಇದ್ದರೆ ಯಾರು ಬೇಕಾದರೂ ಸಾಧನೆ ಮಾಡಬಹುದಾಗಿದೆ ಎಂದು ಬಸವಕಲ್ಯಾಣ ಉಪ ವಿಭಾಗಧಿಕಾರಿ ಭವಂರಸಿಂಗ್‌ ಮೀನಾ ಹೇಳಿದರು.

Vijaya Karnataka 10 Nov 2019, 8:38 pm
ಭಾಲ್ಕಿ:ಐಎಸ್‌ಎಸ್‌, ಐಪಿಎಸ್‌ನಂತಹ ಪರೀಕ್ಷೆ ಕಬ್ಬಿಣದ ಕಡಲೆ ಅಲ್ಲವೇ ಅಲ್ಲ, ಅದು ಸರಳವಾಗಿದ್ದು, ನಿಶ್ಚಿತ ಗುರಿ, ಪರಿಶ್ರಮ ಇದ್ದರೆ ಯಾರು ಬೇಕಾದರೂ ಸಾಧನೆ ಮಾಡಬಹುದಾಗಿದೆ ಎಂದು ಬಸವಕಲ್ಯಾಣ ಉಪ ವಿಭಾಗಧಿಕಾರಿ ಭವಂರಸಿಂಗ್‌ ಮೀನಾ ಹೇಳಿದರು.
Vijaya Karnataka Web training on competitive exams for bcm students
ಐಎಎಸ್‌ ಕಬ್ಬಿಣದ ಕಡಲೆ ಅಲ್ಲ


ಪಟ್ಟಣದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿತಾಲೂಕು ಆಡಳಿತ, ತಾಪಂ ಹಾಗೂ ಜಿಲ್ಲಾಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗಲ್ಲಿಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗಾಗಿ ಸೋಮವಾರ ಆಯೋಜಿಸಿದ್ದ ವೃತ್ತಿ ಮಾರ್ಗದರ್ಶನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಎರಡು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಬಡವರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಮ್ಮಲ್ಲಿನ ನಕಾರಾತ್ಮಕ ಹಾಗೂ ಸಂಕುಚಿತ ಮನೋಭಾವ ಬಿಟ್ಟು, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಐಎಎಸ್‌, ಐಪಿಎಸ್‌ ಕೇವಲ ಶ್ರೀಮಂತರ ಮಕ್ಕಳಿಗೆ ಸೀಮಿತವಲ್ಲ. ಕಠಿಣ ಪರಿಶ್ರಮವಿದ್ದರೆ ಬಡ ವಿದ್ಯಾರ್ಥಿಗಳು ಕೂಡ ಐಎಎಸ್‌,ಐಪಿಎಸ್‌ ಪರೀಕ್ಷೆಗಳು ಸುಲಭವಾಗಿ ಎದುರಿಸಬಹುದಾಗಿದೆ ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ಉತ್ತಮ ಸ್ನೇಹಿತರ ಸಂಗದಲ್ಲಿದ್ದರೇ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತದೆ. ಯುಪಿಎಸ್‌ನಂಥ ಉನ್ನತ ಪರೀಕ್ಷೆ ಪಾಸು ಮಾಡಲು ಇಂಗ್ಲಿಷ್‌ ಬೇಕಾಗಿಲ್ಲ. ಮಾತೃಭಾಷೆ ಮೇಲೆ ಹಿಡಿತ ಇದ್ದರೆ,ಬದುಕಲು ಇಂಗ್ಲಿಷ್‌ ಬೇಕು ಎನ್ನುವುದು ಸುಳ್ಳು. ಗುರಿ, ಛಲ ಇದ್ದರೆ ಎಲ್ಲವೂ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಅಧಿಕಾರಿ ರಮೇಶ ದೇವಮನೆ ಪ್ರಾಸ್ತಾವಿಕ ಮಾತನಾಡಿದರು. ತಹಸೀಲ್ದಾರ ಅಣ್ಣಾರಾವ ಪಾಟೀಲ್‌, ಔರಾದ ಬಿಸಿಎಂ ವಿಸ್ತೀರ್ಣಾಧಿಕಾರಿ ಗದಗೆಪ್ಪ, ಭಾಲ್ಕಿ ಬಿಸಿಎಂ ವಿಸ್ತೀರ್ಣಾಧಿಕಾರಿ ವಿಜಯಮಾಲಾ ವಗ್ಗೆ, ಡಾ.ಮಂಜುನಾಥ, ವಸತಿ ನಿಲಯ ಮೇಲ್ವಿಚಾರಕ ಬಸವರಾಜ ಮಾಳಗೆ ಸೇರಿದಂತೆ ಹಲವರು ಇದ್ದರು.

ಕೋಟ್‌

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಿದ್ಧತೆ ಕೈಗೊಳ್ಳುವ ವಿದ್ಯಾರ್ಥಿಗಳು ಪ್ರತಿದಿನ ತಪ್ಪದೇ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಪತ್ರಿಕೆ ಓದುವುದರಿಂದ ಜಗತ್ತಿನಲ್ಲಿನ ಬೆಳವಣಿಗಳು ತಿಳಿದುಕೊಳ್ಳಲು ಸಾಧ್ಯವಾಗುವುದರ ಜತೆಗೆ ಜ್ಞಾನ ಹೆಚ್ಚಳಕ್ಕೂ ಸಹಕಾರಿಯಾಗಲಿದೆ.

- ಭವಂರಸಿಂಗ್‌ ಮೀನಾ ಉಪ ವಿಭಾಗಾಧಿಕಾರಿಗಳು, ಬಸವಕಲ್ಯಾಣ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ