ಆ್ಯಪ್ನಗರ

ನಿಯಮ ಪಾಲಿಸದ ವಾಹನಗಳ ನೋಂದಣಿ ರದ್ದು:ಎಚ್ಚರಿಕೆ

ಶಾಲೆಗಳ ಹತ್ತಿರದಲ್ಲೇ ವಿಶೇಷ ಕಾರ್ಯಾಚರಣೆ ನಡೆಯಲಿದ್ದು, ವಾಹನ ಚಾಲಕರು ನಿಯಮ ಉಲ್ಲಂಘಿಸಿದರೆ, ವಾಹನವನ್ನು ಜಪ್ತಿ ಮಾಡುವುದು ಹಾಗೂ ಚಾಲಕರು ಮಾರ್ಗ ಸೂಚಿ ನಿಯಮ ಪಾಲಿಸದ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಭಾಲ್ಕಿ ಎಆರ್‌ಟಿಓ ವಾಹನ ನಿರೀಕ್ಷಕ ಸುರೇಶ ಕಾಜಗಲ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vijaya Karnataka 14 Jun 2019, 9:37 pm
ಹುಮನಾಬಾದ್‌ :ಶಾಲೆಗಳ ಹತ್ತಿರದಲ್ಲೇ ವಿಶೇಷ ಕಾರ್ಯಾಚರಣೆ ನಡೆಯಲಿದ್ದು, ವಾಹನ ಚಾಲಕರು ನಿಯಮ ಉಲ್ಲಂಘಿಸಿದರೆ, ವಾಹನವನ್ನು ಜಪ್ತಿ ಮಾಡುವುದು ಹಾಗೂ ಚಾಲಕರು ಮಾರ್ಗ ಸೂಚಿ ನಿಯಮ ಪಾಲಿಸದ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಭಾಲ್ಕಿ ಎಆರ್‌ಟಿಓ ವಾಹನ ನಿರೀಕ್ಷಕ ಸುರೇಶ ಕಾಜಗಲ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Vijaya Karnataka Web unregister unauthorized vehicles warning
ನಿಯಮ ಪಾಲಿಸದ ವಾಹನಗಳ ನೋಂದಣಿ ರದ್ದು:ಎಚ್ಚರಿಕೆ


ಆಟೋಗಳಲ್ಲಿ ಮಕ್ಕಳನ್ನು ಹಿಂದಿನ ಸೀಟ್‌ ಮಾತ್ರವಲ್ಲದೇ ಡ್ರೈವರ್‌ ಸೀಟ್‌ನ ಎಡಬದಿ ಹಾಗೂ ಬಲ ಬದಿಯಲ್ಲಿ ಸಾಮರ್ಥ್ಯ‌ಕ್ಕಿಂತ ಹೆಚ್ಚು ಮಕ್ಕಳನ್ನು ಕೂರಿಸಿಕೊಂಡು ಜತೆಗೆ ಅವರ ಬ್ಯಾಗ್‌, ಟಿಫಿನ್‌ ಕ್ಯಾರಿಯರ್‌ ಇಡಲಾಗುತ್ತದೆ. ಇದರೊಳಗೆ ಮಕ್ಕಳಿಗೆ ಸರಿಯಾಗಿ ಉಸಿರಾಡಲು ತೊಂದರೆಯಾಗುತ್ತದೆ. ಇದನ್ನು ಗಮನಿಸಿ, ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಖಾಸಗಿ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಸಂಚರಿಸಲು ಅನುವು ಮಾಡಿಕೊಡದಿರುವುದು ಕಂಡು ಬಂದರೆ, ಶಾಲಾ ಕಾಲೇಜು ಹಾಗೂ ಆಟೊ, ವ್ಯಾನ್‌ ಸೇರಿದಂತೆ ವಾಹನ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅದರ ಜತೆಗೆ ವಾಹನ ಜಪ್ತಿ ಮಾಡಿ, ದಂಡ ವಸೂಲಿ, ವಾಹನದ ನೋಂದಣಿಯನ್ನು ವಜಾಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಸಾರಿಗೆ, ಪೊಲೀಸ್‌ ಹಾಗೂ ಶಿಕ್ಷಣ ಇಲಾಖೆ ಜಂಟಿಯಾಗಿ ಸುಪ್ರೀಂ ಕೋರ್ಟ್‌ ಸೂಚನೆ ಮೇರೆಗೆ ಮಾರ್ಗಸೂಚಿ ರಚಿಸಲಾಗಿದೆ. ಈಗಾಗಲೇ ಖಾಸಗಿ ಶಾಲೆಗಳು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಆಯಾ ಶಾಲೆಗಳಿಗೆ ತಿಳಿವಳಿಕೆ ನೀಡಲಾಗಿದೆ. ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಮತ್ತೆ ತಿಳಿವಳಿಕೆ ಪತ್ರ ನೀಡಿ ಎಚ್ಚರಿಸಲಾಗುತ್ತಿದೆ.

ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸ್‌ರು ನಿಯಮ ಉಲ್ಲಂಘಿಸುವ ಶಾಲೆಗಳು, ವಾಹನಗಳು ಕಂಡು ಬಂದರೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು. ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ