ಆ್ಯಪ್ನಗರ

ಉಪ್ಪಾರ ಕೊಲೆಗೆ ಖಂಡನೆ, ಸಿಬಿಐ ತನಿಖೆಗೆ ಆಗ್ರಹ

ಗೋ ರಕ್ಷಕ ಬೆಳಗಾವಿಯ ಶಿವು ಉಪ್ಪಾರ ಅವರ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಬೀದರ್‌ನಲ್ಲಿ ಮಂಗಳವಾರ ಹಿಂದೂ ಬ್ರಿಗೇಡ್‌ ಜಾಗೃತಿ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ, ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

Vijaya Karnataka 29 May 2019, 9:28 pm
ಬೀದರ್‌:ಗೋ ರಕ್ಷಕ ಬೆಳಗಾವಿಯ ಶಿವು ಉಪ್ಪಾರ ಅವರ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಬೀದರ್‌ನಲ್ಲಿ ಮಂಗಳವಾರ ಹಿಂದೂ ಬ್ರಿಗೇಡ್‌ ಜಾಗೃತಿ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ, ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
Vijaya Karnataka Web upparas death condemns cbi probe
ಉಪ್ಪಾರ ಕೊಲೆಗೆ ಖಂಡನೆ, ಸಿಬಿಐ ತನಿಖೆಗೆ ಆಗ್ರಹ


ಬೆಳಗಾವಿ ಜಿಲ್ಲೆಯ ಗೋಕಾಕ್‌ ತಾಲೂಕಿನ ಗೋಕಾಕ್‌ ನಿವಾಸಿಯಾದ ಶಿವಕುಮಾರ ಉಪ್ಪಾರ ಅವರ ಅನುಮಾನಾಸ್ಪದ ಸಾವಾಗಿದೆ. ಈತ ಓರ್ವ ವಿದ್ಯಾರ್ಥಿಯಾಗಿದ್ದು, ಗೋ ರಕ್ಷಣೆ ಮತ್ತಿತರ ಹಿಂದೂತ್ವದ ಕಾರ‍್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದು, ಪಾಲ್ಗೊಳ್ಳುತ್ತಿದ್ದರು.

ಕೆಲ ದಿನಗಳ ಹಿಂದೆ ಗೋವುಗಳನ್ನು ರಾಜ್ಯದಿಂದ ಅನ್ಯ ರಾಜ್ಯಕ್ಕೆ ಸಾಗಣೆ ಮಾಡುತ್ತಿರುವುದನ್ನು ಕಂಡು ಅದರ ವಿರುದ್ಧ ದೊಡ್ಡ ಪ್ರಮಾಣದಲ್ಲಿ ದನಿ ಎತ್ತಿದ್ದರು. ಇದೇ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡ ಕೆಲ ದುಷ್ಕರ್ಮಿಗಳು ಈತನನ್ನು ಕೊಲೆ ಮಾಡಿ ಗೋಕಾಕ್‌ನ ಬಸ್‌ ನಿಲ್ದಾಣದಲ್ಲಿ ನೇತು ಹಾಕಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಗೋ ರಕ್ಷಕನ್ನು ಕೊಲೆ ಮಾಡಿದ್ದಾರೆ ಎಂದರೆ ಭಾರತ ದೇಶಕ್ಕೆ ಘೋರವಾದ ವಿಷಯ ಎಂದು ನಾವು ಅರಿಯಬೇಕು. ಜತೆಗೆ ನಮ್ಮ ಸರಕಾರವು ದೇಶದಲ್ಲಿ ಗೋ ಹತ್ಯೆ ನಿಸೇಧ ಕಾಯ್ದೆಯನ್ನು ಜಾರಿಗೆ ತರಬೇಕು. ಅದನ್ನು ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಹಿಂದುತ್ವದ ಪರವಾಗಿ ಹೋರಾಡುವ ಯುವಕರಿಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಗೌರವಾಧ್ಯಕ್ಷ ರಮೇಶ್‌ ಮೋರೆ, ಜಿಲ್ಲಾ ಉಪಾಧ್ಯಕ್ಷ ಸೀನು ಮಾಶೆಟ್ಟಿ, ಜಿಲ್ಲಾಧ್ಯಕ್ಷ ರವಿ ಕೂಡಗಿ, ಪ್ರಮುಖರಾದ ಪುಷ್ಪಕ್‌ ಜಾಧವ್‌, ಸಂತೋಷ್‌ ಭಂಡೆ, ಸಾಯಿ ಸೀತಾ, ಯಲ್ಲೇಶ್‌, ಅರುಣಕುಮಾರ ಹೊಸಪೇಟೆ, ಶ್ರೀಮಂತ ಸಪಾಟೆ, ಜಸ್‌ ಪ್ರೀತ್‌ಸಿಂಗ್‌ ಮಾಂಟಿ, ಭೀಮಣ್ಣ ಸೊರಳ್ಳೆ, ಸೋಮಶೇಖರ, ಗಜಾನನ ಹೆಗಡೆ, ಪ್ರಶಾಂತ ತಪಸಾಳೆ, ಅಜಯ್‌ ತ್ರಿಮುಕೆ, ವಿಶ್ವನಾಥ ಮೇತ್ರೆ, ಆಕಾಶ್‌ ಜ್ಞಾನಪನೋರ, ಜೀತೇಂದ್ರ ಜಿತೋ, ಗುರು ಪಾಂಪಡೆ, ಪಾಂಡುರಂಗ, ಬಸ್ಸು, ಸಂತೋಷ ಗಾದಗಿ, ರಾಜಾಹುಲಿ ಆಣದೂರ, ಬಶೆಟ್ಟಿ ಆನಂದ್‌, ಚೇತನ್‌ ಸೋರಳ್ಳಿ, ಸಾಯಿ ಮೂಲಗೆ, ವಿಜಯ ನಾವದಗೇರಿ, ಅಜಯ್‌ ಮಂಡಲ್‌, ಸಾಯಿ ವಂಶಿ, ರಾಹುಲ್‌ ದೇವತರಾಜ್‌, ಜಗಮೋಹನ ರಜಪೂತ್‌, ಸೋಮು ಬಗದಲ್‌, ಸತೀಶ್‌ ಪಾರಾ, ಪವನ ಗುಡ್ಡಾ, ಮೋಹನ್‌, ಯಲ್ಲಾಲಿಂಗ, ವೀರು ಹುಲಗೇರಾ ಮತ್ತಿತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ