ಆ್ಯಪ್ನಗರ

ವಿದ್ಯಾನಗರ ಚರ್ಚ್‌ನಲ್ಲಿ ಸಂಭ್ರಮ, ಸಡಗರ

ಕ್ರಿಸ್ಮಸ್‌ ಹಬ್ಬದ ಆಗಮನದ ಪೂರ್ವ ಸಿದ್ಧತೆ ಕಾರ್ಯಕ್ರಮವು ನಗರದ ವಿದ್ಯಾನಗರ ಬಡಾವಣೆಯ ಸೆಂಟ್‌ ಪೌಲ್‌ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಗುರುವಾರ ರಾತ್ರಿ ಅದ್ಧೂರಿಯಾಗಿ ನಡೆಯಿತು.

ವಿಕ ಸುದ್ದಿಲೋಕ 3 Dec 2016, 5:02 pm

ಬೀದರ್‌: ಕ್ರಿಸ್ಮಸ್‌ ಹಬ್ಬದ ಆಗಮನದ ಪೂರ್ವ ಸಿದ್ಧತೆ ಕಾರ್ಯಕ್ರಮವು ನಗರದ ವಿದ್ಯಾನಗರ ಬಡಾವಣೆಯ ಸೆಂಟ್‌ ಪೌಲ್‌ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಗುರುವಾರ ರಾತ್ರಿ ಅದ್ಧೂರಿಯಾಗಿ ನಡೆಯಿತು.

ಈ ನಿಮಿತ್ತ ನಾನಾ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿತ್ತು. ಕಾರ‍್ಯಕ್ರಮವನ್ನು ಕೇಕ್‌ ಕತ್ತರಿಸುವ ಮೂಲಕ ಮಂಗಲಪೇಟ ಚರ್ಚ್‌ನ ಸಹಾಯಕ ಸಭಾಪಾಲಕ ಇ. ಸುನಂದಕುಮಾರ ಉದ್ಘಾಟಿಸಿ ಆಶೀರ್ವಚನ ನೀಡಿದರು. ಕ್ರಿಸ್ತನ ಪ್ರೀತಿ, ಶಾಂತಿಯ ಸಂದೇಶವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕತ್ತಲು ಎಂದರೆ ಹೇಯ ಕೃತ್ಯ. ಬೆಳಕು ಎಂದರೆ ಬೇರೆಯವರು ಒಳ್ಳೆಯದನ್ನು ಮಾಡಬೇಕು. ಇದನ್ನೇ ಗುರು ಕ್ರಿಸ್ತನು ಸಹ ಹೇಳಿದ್ದಾನೆ. ಈ ರೀತಿಯಾಗಿ ನಾವು ಬಾಳಬೇಕು ಎಂದ ಅವರು, ಕ್ರಿಸ್ತ ಆಗಮನ ಎಂದರೆ ಲೋಕಕ್ಕೆ ಬೆಳಕು ಎಂದು ವಿವರಿಸಿದರು.

ಕ್ರಿಸ್ಮಸ್‌ ಹಬ್ಬದ ನಿಮಿತ್ತ ವಿವಿಧ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ಸಮಾಜದ ಬಾಂಧವರು ಪ್ರತಿಯೊಬ್ಬರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಬೇಕು ಎಂದು ತಿಳಿಸಿದರು.

ವಿದ್ಯಾನಗರ ಚರ್ಚ್‌ನ ಸಭಾಪಾಲಕರಾದ ಸೈಮನ್‌ ಮಾರ್ಕ್‌, ಪ್ರಮುಖರಾದ ಆರ್‌. ಜಾರ್ಜ್‌, ಎಂ.ಎಸ್‌. ಡೇವಿಡ್‌, ಬಿ.ಜೆ. ಸ್ಯಾಮವೆಲ್‌, ಎಸ್‌.ಕೆ. ಡೇವಿಡ್‌, ವೈ.ಎಲ್‌. ಜೈವಂತ ಹಾಗೂ ಮತ್ತಿತರರರು ಪಾಲ್ಗೊಂಡಿದ್ದರು. ಕಾರ್ಯಕ್ರಮ ನಿಮಿತ್ತ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ