ಆ್ಯಪ್ನಗರ

ಪಶ್ಚಿಮ ಬಂಗಾಳ ಸರಕಾರ ವಜಾಗೆ ಆಗ್ರಹ

ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ ಜಿಲ್ಲೆಯಲ್ಲಿನಡೆದ ನಿರ್ದೋಶಿ ಹಿಂದೂಗಳ ಹತ್ಯೆಯನ್ನು ಖಂಡಿಸಿ, ಮಂಗಳವಾರ ನಗರದದಲ್ಲಿವಿಶ್ವ ಹಿಂದೂ ಪರಿಷತ್‌, ಭಜರಂಗ ದಳ ವತಿಯಿಂದ ಇಲ್ಲಿನ ಗಣೇಶ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನೆ ಮೆರವಣಿಗೆ ನಡೆಯಿತು.

Vijaya Karnataka 16 Oct 2019, 10:23 pm
ಬೀದರ್‌:ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ ಜಿಲ್ಲೆಯಲ್ಲಿನಡೆದ ನಿರ್ದೋಶಿ ಹಿಂದೂಗಳ ಹತ್ಯೆಯನ್ನು ಖಂಡಿಸಿ, ಮಂಗಳವಾರ ನಗರದದಲ್ಲಿವಿಶ್ವ ಹಿಂದೂ ಪರಿಷತ್‌, ಭಜರಂಗ ದಳ ವತಿಯಿಂದ ಇಲ್ಲಿನ ಗಣೇಶ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನೆ ಮೆರವಣಿಗೆ ನಡೆಯಿತು.
Vijaya Karnataka Web west bengal government demands dismissal
ಪಶ್ಚಿಮ ಬಂಗಾಳ ಸರಕಾರ ವಜಾಗೆ ಆಗ್ರಹ


ಪ್ರಕಾಶ್‌ ಪೌಲ್‌ ಹಾಗೂ ಅವರ ಗರ್ಭಿಣಿ ಪತ್ನಿ ಮತ್ತು 8 ವರ್ಷದ ಬಾಲಕನ ಅಮಾನುಷ ಹತ್ಯೆಯಿಂದ ಇಡೀ ದೇಶದ ಹಿಂದೂಗಳು ಆತಂಕಗೊಂಡಿದ್ದಾರೆ. ಪಶ್ಚಿಮ ಬಂಗಾಳವು ಹಿಂದೂಗಳಿಗೆ ರಕ್ಷಣೆ ನೀಡುವಲ್ಲಿವಿಫಲವಾಗಿದೆ. ಬಾಂಗ್ಲಾಅಕ್ರಮವಾಗಿ ನುಸುಳಿ ಬಂದಿದ್ದು, ಇವರುಗಳ ಮತದ ಆಸೆಗಾಗಿ ಮಮತಾ ಸರಕಾರವು ಕಂಡೂ ಕಾಣದಂತೆ ಕುಳಿತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬಾಂಗ್ಲಾಜನರಿಂದ ಹಿಂದೂಗಳ ಮೇಲೆ ಅತ್ಯಾಚಾರ, ಶೋಷಣೆ ನಡೆಯುತ್ತಿದ್ದರೂ ಮಮತಾ ಮೌನವಾಗಿದ್ದು, ಪ್ರೋತ್ಸಾಹ ನೀಡುತ್ತಿರುವಂತೆ ಕಂಡು ಬರುತ್ತದೆ. ಹಲವು ವರ್ಷಗಳಿಂದ ಶೋಷಣೆ ನಡೆಯುತ್ತಲೇ ಇದ್ದರೂ ಅಲ್ಲಿನ ಸರಕಾರ ಮುಕ್ತವಾಗಿ ಬೆಂಬಲ ನೀಡುತ್ತಿದೆ ಎಂದು ದೂರಿದರು.

ಈ ಕುರಿತು ಕ್ರಮಕ್ಕೆ ಮುಂದಾಗಬೇಕು ಎಂದು ಬೇಡಿಕೆಗಳ ಹಿನ್ನೆಲೆಯಲ್ಲಿಜಿಲ್ಲಾಧಿಕಾರಿಗಳ ಕಚೇರಿಯ ಮೂಲಕ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಸಂಯೋಜಕ ಸುನೀಲ್‌ ದಳವೆ, ಬಸವರಾಜ್‌ ಕನ್ನಳ್ಳಿ, ಶರಣು ಬಿರಾದರ್‌, ರವಿ ಕೊಡಗಿ, ವಿರೇಶ್‌, ರಾಜೇಂದ್ರ, ಸತೀಶ್‌ ಪಾರಾ, ಧನರಾಜ್‌ ಬಿರಾದರ್‌, ವಿರಸಿಂಗ್‌ ಠಾಕೂರ್‌, ಸೀನು ಮಾಶೆಟ್ಟಿ, ಅರವಿಂದ ಶೆಟ್ಟಿ, ಪ್ರವಿಣ್‌ ರೇಕುಳಗಿ, ದಯಾದಂದ, ಚಂದು ಗುಡಪಳ್ಳಿ, ಯೋಗೇಶ್‌, ಜಯ ಸ್ವಾಮಿ, ಸಂಗಶೆಟ್ಟಿ ಹಳ್ಳದಕೇರಿ, ಸತೀಶ, ಮಲ್ಲಿಕಾರ್ಜುನ್‌ ಕುಂಬಾರ್‌, ಸಾಯಿ ಕಿರಣ್‌, ನಾಗರಾಜ್‌, ದತ್ತು ವಾಲ್ದೊಡ್ಡಿ, ಪ್ರಭು ಗುರು ನಗರ, ಪವನ್‌ ನೌಬಾದೆ, ಪವನ್‌ ಹುಗ್ಗೆ, ರಾಜೇಂದ್ರ ಪಾರದಿ, ಸಿದ್ಧಾರೆಡ್ಡಿ, ನಾಗೇಶ್‌ ಸ್ವಾಮಿ, ವೀರೇಶ್‌ ಸ್ವಾಮಿ, ವೆಂಕಟೇಶ್‌, ಮಹೇಶ್‌ ಕಟ್ಟೆ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಮುಖ ಬೇಡಿಕೆಗಳು

ಪಶ್ಚಿಮ ಬಂಗಾಳದ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಬೇಕು. ಬಂಧು ಪ್ರಕಾಶ್‌ ಪಾಲ ಅವರ ಪರಿವಾರದ ಹತ್ಯೆಯ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಹಂತಕರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು. ಪಶ್ಚಿಮ ಬಂಗಾಳದಲ್ಲಿಎನ್‌ಆರ್‌ಸಿ ಜಾರಿಗೊಳಿಸಿ ಬಾಂಗ್ಲಾದೇಸೀಯ ಅಕ್ರಮ ಪ್ರವೇಶಿಗಳನ್ನು ಬಾಂಗ್ಲಾದೇಶಕ್ಕೆ ವಾಪಾಸ್‌ ಕಳುಹಿಸಬೇಕು. ನಾಗರಿಕ ಕಾನೂನನ್ನು ತಿದ್ದುಪಡಿ ಮಾಡಿ ಬಾಂಗ್ಲಾದೇಶದಿಂದ ಪೆಟ್ಟು ತಿಂದು ಭಾರತಕ್ಕೆ ಬಂದ ಹಿಂದೂಗಳಿಗೆ ಪೌರತ್ವ ನೀಡಿ, ಅವರಿಗೆ ಆಶ್ರಯ ಕಲ್ಪಿಸಿ, ರಕ್ಷಣೆ ನೀಡಬೇಕು. ಪಶ್ಚಿಮ ಬಂಗಾಳದಲ್ಲಿರುವ ರಾಷ್ಟ್ರ ವಿರೋಧಿ ಹಾಗೂ ಸಮಾಜ ಘಾತುಕ ಶಕ್ತಿಗಳನ್ನು ಕಾನೂನು ಕ್ರಮದಿಂದ ಮಟ್ಟಹಾಕಬೇಕು ಎಂದು ಆಗ್ರಹಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ