ಆ್ಯಪ್ನಗರ

ಮದುವೆ ನಿಲ್ಲಿಸಿ ಎಂದು ಠಾಣೆಗೆ ಓಡಿದ ವಧು

ಮದುವೆ ನಿಲ್ಲಿಸಿ ಎಂದು ಯುವತಿಯೊಬ್ಬಳು ಕಲ್ಯಾಣ ಮಂಟಪದಿಂದ ತಪ್ಪಿಸಿಕೊಂಡು ಪೊಲೀಸ್‌ ಠಾಣೆಗೆ ಹೋಗಿದ್ದಾಳೆ.

ಮಲಯಾಳಂ ಸಮಯಂ 12 Jul 2016, 12:42 pm
ತ್ರಿಶ್ಶೂರ್: ಮದುವೆ ನಿಲ್ಲಿಸಿ ಎಂದು ಯುವತಿಯೊಬ್ಬಳು ಕಲ್ಯಾಣ ಮಂಟಪದಿಂದ ತಪ್ಪಿಸಿಕೊಂಡು ಪೊಲೀಸ್‌ ಠಾಣೆಗೆ ಹೋಗಿದ್ದಾಳೆ.
Vijaya Karnataka Web bride ran in to police station to stop marriage
ಮದುವೆ ನಿಲ್ಲಿಸಿ ಎಂದು ಠಾಣೆಗೆ ಓಡಿದ ವಧು


ಕೊಡಂಗಲೂರಿನ ಶ್ರೀ ಕುರುಂಬ ದೇವಿ ದೇವಸ್ಥಾನದಲ್ಲಿ ಮದುವೆ ಸಮಾರಂಭ ಆಯೋಜಿಸಲಾಗಿತ್ತು. ಇನ್ನೇನು ತಾಳಿ ಕಟ್ಟಲು ಕೆಲವೇ ಕ್ಷಣಗಳಿರುವಾಗ ಯುವತಿ ಅಲ್ಲಿಂದ ಠಾಣೆಗೆ ಪರಾರಿಯಾಗಿದ್ದಾಳೆ.

ಯುವತಿ ಹಿರಿಯ ಸೋದರಿಯ ಆಶ್ರಯದಲ್ಲಿ ಇದ್ದು, ಅಕ್ಕ ಮತ್ತು ಭಾವ ಇದೇ ವರನನ್ನು ಮದುವೆಯಾಗುವಂತೆ ಬಲವಂತ ಮಾಡಿದ್ದರು. 18 ವರ್ಷದ ಯುವತಿಗೆ 36 ವರ್ಷದ ವರನನ್ನು ನಿಗದಿಗೊಳಿಸಲಾಗಿತ್ತು. ಆದರೆ ಯುವತಿ ಇಷ್ಟು ವಯಸ್ಸಾದವನ ಜತೆ ಮದುವೆ ಇಷ್ಟ ಇಲ್ಲ, ಮದುವೆ ನಿಲ್ಲಿಸಿ ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾಳೆ.

ಪೊಲೀಸ್ ಅಧಿಕಾರಿ ಎರಡೂ ಕಡೆಯವರ ಜತೆ ಮಾತುಕತೆ ನಡೆಸಿದ ಬಳಿಕ ಮದುವೆ ರದ್ದುಗೊಳಿಸಲಾಯಿತು. ವಧುವಿಗೆ ನೀಡಲಾಗಿದ್ದ ಉಡುಗೊರೆ ಮತ್ತು ಬಟ್ಟೆಗಳನ್ನು ವರನ ಕಡೆಯವರಿಗೆ ವಾಪಸ್ ಮಾಡಲಾಯಿತು.ವರನ ಕಡೆಯವರು ವಧುವಿನ ಕುಟುಂಬದ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಯುವತಿ ಓದಿನಲ್ಲಿ ಜಾಣೆಯಾಗಿದ್ದು, 10ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ್ದಳು.ಹಣಕಾಸು ಬಿಕ್ಕಟ್ಟಿನ ಕಾರಣ ಓದು ನಿಂತಿದೆ. ಓದು ಮುಂದುವರಿಸುವ ಇಚ್ಛೆ ಇದ್ದು, ಮದುವೆಯಾದರೆ ಅದು ಸಾಧ್ಯವಾಗುವುದಿಲ್ಲ ಎಂದು ಯುವತಿ ಪೊಲೀಸರಲ್ಲಿ ಹೇಳಿದ್ದಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ