ಆ್ಯಪ್ನಗರ

ಹಂದಿ ಹಾವಳಿಗೆ ಬೆಳೆ ಹಾನಿ

ಹಾಲಹಳ್ಳಿ ಗ್ರಾಮದಲ್ಲಿ ಕಾಡುಹಂದಿಗಳ ಕಾಟಕ್ಕೆ ಬೆಳೆಗಳು ಹಾಳಾಗಿವೆ ಎಂದು ರೈತರು ದೂರಿದ್ದಾರೆ.

Vijaya Karnataka Web 31 Jul 2016, 8:52 pm
ಬೇಗೂರು : ಹಾಲಹಳ್ಳಿ ಗ್ರಾಮದಲ್ಲಿ ಕಾಡುಹಂದಿಗಳ ಕಾಟಕ್ಕೆ ಬೆಳೆಗಳು ಹಾಳಾಗಿವೆ ಎಂದು ರೈತರು ದೂರಿದ್ದಾರೆ.
Vijaya Karnataka Web
ಹಂದಿ ಹಾವಳಿಗೆ ಬೆಳೆ ಹಾನಿ


ಗ್ರಾಮದ ಎಚ್.ಪಿ. ಸಿದ್ದಲಿಂಗಪ್ಪ ಎಂಬುವವರು 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಜೋಳ, ಎಚ್.ಜಿ. ಗುರುಮೂರ್ತಿ ಎಂಬುವವರು 2 ಎಕರೆಯಲ್ಲಿ ಬೆಳೆದಿದ್ದ ಸೂರ್ಯಕಾಂತಿ ಹಾಗೂ ಎಚ್.ಎನ್. ಶಿವಪ್ಪ ಎಂಬುವವರು ಹಾಕಿದ್ದ ತೆಂಗಿನ ಸಸಿಗಳನ್ನು ಹಂದಿಗಳು ಹಾಳು ಮಾಡಿವೆ. ಈ ಭಾಗದಲ್ಲಿ ಕಾಡುಹಂದಿಗಳ ಕಾಟ ಹೆಚ್ಚಾಗಿದೆ. ಗ್ರಾಮದ ಅನೇಕ ರೆತರ ಬೆಳೆಗಳನ್ನು ತಿಂದು ನಾಶಗೊಳಿಸುತ್ತಿವೆ. ಹಂದಿಗಳ ಹಾವಳಿಯಿಂದ ಮಹಿಳೆಯರು, ಮಕ್ಕಳು, ರೆತರು ಜಮೀನುಗಳಿಗೆ ತೆರಳಲು ಹೆದರಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಅರಣ್ಯ ಇಲಾಖೆಗೆ ದೂರು ನೀಡಿದರೆ ಜೋಳದ ಬೆಳೆ ಹಾಗೂ ಸೂರ್ಯಕಾಂತಿ ಬೆಳೆಗೆ ಪರಿಹಾರ ನೀಡಲು ಆಗುವುದಿಲ್ಲ ಎಂದು ತಿಳಿಸುತ್ತಾರೆ. ಕೂಡಲೇ ಅರಣ್ಯ ಇಲಾಖೆಯವರು ಹಂದಿಗಳನ್ನು ಕಾಡಿಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ರೆತ ಸಂಘದ ಕಾರ್ಯಕರ್ತರಾದ ಮಹದೇವಮೂರ್ತಿ, ಕೆಂಪದೇವಮ್ಮ, ಮಲ್ಲೇಶ್ ಒತ್ತಾಯಿಸಿದ್ದಾರೆ. ಹಂದಿ, ಹಾವಳಿ ಬೆಳೆ, ಹಾನಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ