ಆ್ಯಪ್ನಗರ

ಸಾಂಸ್ಕೃತಿಕ ಶ್ರೀಮಂತಿಕೆಗೆ ಪ್ರಸಾದ್‌ ಕೊಡುಗೆ ಅಪಾರ

ಜಿಲ್ಲೆಯ ಸಾಂಸ್ಕೃತಿಕ ಶ್ರೀಮಂತಿಕೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್‌ಎಸ್‌...

Vijaya Karnataka Web 10 Jan 2017, 9:00 am

ಗುಂಡ್ಲುಪೇಟೆ: ಜಿಲ್ಲೆಯ ಸಾಂಸ್ಕೃತಿಕ ಶ್ರೀಮಂತಿಕೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಎಸ್‌.ಮಹಾದೇವಪ್ರಸಾದ್‌ ಕೈಗೊಂಡ ಕ್ರಮಗಳು ಅನನ್ಯ ಎಂದು ಚುಟುಕು ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷೆ ಎಂ.ಪುಟ್ಟತಾಯಮ್ಮ ತಿಳಿಸಿದರು.

ಚುಟುಕು ಸಾಹಿತ್ಯ ಪರಿಷತ್‌ ಕಚೇರಿಯಲ್ಲಿ ಕಸಾಪ ಮತ್ತು ಚುಟುಕು ಸಾಹಿತ್ಯ ಪರಿಷತ್‌ ನಿಂದ ನಡೆದ ಎಚ್‌.ಎಸ್‌.ಮಹಾದೇವಪ್ರಸಾದ್‌ ಶ್ರದ್ಧಾಂಜಲಿ ಸಭೆ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಮಹಾದೇವಪ್ರಸಾದ್‌ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಖಾತೆಗೆ ವಿಶೇಷ ಮಾನ್ಯತೆ ತಂದುಕೊಟ್ಟರು. ಜಿಲ್ಲೆಯಾದ್ಯಂತ ನಡೆದ ಸಾಹಿತ್ಯ ಸಮ್ಮೇಳನಗಳ ಯಶಸ್ವಿಗೆ ಶ್ರಮಿಸಿದರು. ಪಟ್ಟಣದಲ್ಲಿ ಕಸಾಪಗೆ ನಿವೇಶನ ಕೊಡಿಸಿದರು. ರಾಜ್ಯಮಟ್ಟದ ಸಮ್ಮೇಳನ ಜಿಲ್ಲೆಯಲ್ಲಿ ನಡೆಸುವ ಅವಕಾಶ ಕೊಡಿಸುವ ಭರವಸೆ ನೀಡಿದ್ದರು. ಈ ಎಲ್ಲ ಕಾರಣಗಳಿಗೆ ಜಿಲ್ಲೆಯ ಸಾಂಸ್ಕೃತಿಕ ಶ್ರೀಮಂತಿಕೆಗೆ ಕೊಡುಗೆ ಅಪಾರ ಎಂದು ಹೇಳಿದರು.

ಕಸಾಪ ತಾಲೂಕು ಅಧ್ಯಕ್ಷ ವಿ.ಎನ್‌.ಚಿದಾನಂದ್‌, ಉಪಾಧ್ಯಕ್ಷ ಜಿ.ಜಿ.ಮಲ್ಲಿಕಾರ್ಜುನ್‌,ಅತಾವುಲ್ಲಾಬೇಗ್‌, ಮಾಜಿ ಅಧ್ಯಕ್ಷ ಜಿ.ಡಿ.ದೊಡ್ಡಯ್ಯ, ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಕೆಂಪರಾಜು, ಕವಯಿತ್ರಿ ಡಾ.ಲಕ್ಷ್ಮಿಪ್ರೇಮ್‌ಕುಮಾರ್‌, ಅಕ್ಷ ರ ಚಿತ್ರ ಕಲಾವಿದ ನಾಗಭೂಷಣ ಬಸವಾಪುರ, ಕಸಾಪ ಪದಾಧಿಕಾರಿಗಳಾದ ಜಗತ್‌ಪ್ರಕಾಶ್‌,ಗುಂಪು ದೇವರಾಜು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ