ಆ್ಯಪ್ನಗರ

ಮಾದಾಪಟ್ಟಣ ಗ್ರಾಮದಲ್ಲಿ ಹುಲಿ ಆತಂಕ

ಸಮೀಪದ ಮಾದಾಪಟ್ಟಣ ಗ್ರಾಮದ ಗುರುಮಲ್ಲಪ್ಪ ಎಂಬುವವರ ಜಮೀನಿನಲ್ಲಿ ಹುಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

Vijaya Karnataka 7 Oct 2018, 5:00 am
ಬೇಗೂರು(ಗುಂಡ್ಲುಪೇಟೆ): ಸಮೀಪದ ಮಾದಾಪಟ್ಟಣ ಗ್ರಾಮದ ಗುರುಮಲ್ಲಪ್ಪ ಎಂಬುವವರ ಜಮೀನಿನಲ್ಲಿ ಹುಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
Vijaya Karnataka Web
ಮಾದಾಪಟ್ಟಣ ಗ್ರಾಮದಲ್ಲಿ ಹುಲಿ ಆತಂಕ


ನಿಜಗುಣಮ್ಮ ಎಂಬುವವರು ಮೇಯಿಸುತ್ತಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದೆ. ಗಾಬರಿಗೊಂಡ ಅವರು ಜೋರಾಗಿ ಕಿರುಚಿಕೊಂಡಿದ್ದಾರೆ. ಅಲ್ಲದೆ ಹಸುವನ್ನು ರಕ್ಷಿಸಲು ತಮ್ಮ ಬಳಿಯಿದ್ದ ಛತ್ರಿಯನ್ನು ಹುಲಿ ಮೇಲೆ ಎಸೆದಿದ್ದಾರೆ. ಗಾಬರಿಗೊಂಡ ಹುಲಿ ಅವರ ಜಮೀನಿನಲ್ಲೇ ಇರುವ ಪಾಳುಬಾವಿಯ ಕಡೆ ತೆರಳಿದೆ. ನಂತರ ಅವರು ಗ್ರಾಮಕ್ಕೆ ಹೋಗಿ ವಿಷಯ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಗ್ರಾಮಸ್ಥರು ಧಾವಿಸಿ ಹುಡುಕಾಟ ನಡೆಸಿದರೂ ಯಾವುದೇ ಕುರುಹು ಪತ್ತೆಯಾಗಿಲ್ಲ . ನಂತರ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದಾರೆ.

ಓಂಕಾರ್‌ ಅರಣ್ಯ ವಲಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪಟಾಕಿ ಸಿಡಿಸಿದರೂ ಹುಲಿ ಪತ್ತೆಯಾಗಿಲ್ಲ . ಹುಲಿಯ ಜತೆ ಒಂದು ಮರಿ ಸಹ ಇದ್ದುದಾಗಿ ನಿಜಗುಣಮ್ಮ ತಿಳಿಸಿದ್ದು, ಕೂಡಲೇ ಅರಣ್ಯ ಇಲಾಖೆಯವರು ಹುಲಿ ಸೆರೆ ಹಿಡಿಯಬೇಕೆಂದು ರೈತರು ಒತ್ತಾಯಿಸಿದ್ದಾರೆ. ಘಟನೆಯಿಂದ ರೈತರು ಜಮೀನುಗಳಿಗೆ ತೆರಳಲು ಭಯಪಡುತ್ತಿದ್ದಾರೆ.

ವಲಯ ಅರಣ್ಯಾಧಿಕಾರಿ ನವೀನ್‌, ಮತ್ತೊಮ್ಮೆ ಹುಲಿ ಗ್ರಾಮದಲ್ಲಿ ಕಾಣಿಸಿಕೊಂಡರೆ ಬೋನಿಟ್ಟು ಸೆರೆಹಿಡಿಯುತ್ತೇವೆ. ಈ ಬಗ್ಗೆ ಗ್ರಾಮಸ್ಥರು ಭಯಪಡುವ ಅಗತ್ಯವಿಲ್ಲ . ಹುಲಿ ಒಂದೇ ಕಡೆ ಇರುವ ಪ್ರಾಣಿಯಲ್ಲ. ಮನುಷ್ಯನಿಂದ ಅಂತರ ಕಾಯ್ದುಕೊಳ್ಳುವ ಇವು ಬೇರೆಡೆ ಹೋಗಿರುವ ಸಂಭವವಿದೆ,''ಎಂದು ತಿಳಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ