Please enable javascript.ಹರವೆ: ಚಿರತೆ ಸೆರೆಗೆ ಬೋನ್ - ಹರವೆ: ಚಿರತೆ ಸೆರೆಗೆ ಬೋನ್ - Vijay Karnataka

ಹರವೆ: ಚಿರತೆ ಸೆರೆಗೆ ಬೋನ್

Vijaya Karnataka Web 28 Dec 2015, 5:00 am
Subscribe

ತಾಲೂಕಿನ ಹರವೆ ಗ್ರಾಮದ ಹೊರವಲಯದಲ್ಲಿ ಕಾಣಿಸಿಕೊಂಡ ಚಿರತೆ ಸೆರೆಗೆ ಭಾನುವಾರ ಅರಣ್ಯ ಇಲಾಖೆ ಬೋನ್ ಇಟ್ಟಿದೆ.

ಹರವೆ: ಚಿರತೆ ಸೆರೆಗೆ ಬೋನ್

ಚಾಮರಾಜನಗರ: ತಾಲೂಕಿನ ಹರವೆ ಗ್ರಾಮದ ಹೊರವಲಯದಲ್ಲಿ ಕಾಣಿಸಿಕೊಂಡ ಚಿರತೆ ಸೆರೆಗೆ ಭಾನುವಾರ ಅರಣ್ಯ ಇಲಾಖೆ ಬೋನ್ ಇಟ್ಟಿದೆ.

ಗ್ರಾಮದಿಂದ ಮೇಗಲಹುಂಡಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಗ್ರಾಮದ ನಿವಾಸಿ ಪುಟ್ಟ ಸುಬ್ಬಣ್ಣ ಅವರ ಜಮೀನಿಗೆ ಹೊಂದಿಕೊಂಡ ಮುಳ್ಳುಕಂಟಿಗಳ ಪೊದೆಯಲ್ಲಿ ಚಿರತೆ ಅಡಗಿದೆ ಎನ್ನಲಾಗಿದೆ. ಇದೇ ರಸ್ತೆಯಲ್ಲಿ ರೈತರ ಜಮೀನುಗಳಿದ್ದು, ಜಾನುವಾರುಗಳು ಹೆದರಿ ಓಡಿಹೋಗುತ್ತಿದ್ದರಿಂದ ಈ ಪ್ರದೇಶದಲ್ಲಿ ಕಾಡುಪ್ರಾಣಿ ವಾಸವಾಗಿರಬಹುದೇನೋ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದರು.

ಶನಿವಾರ ಮಧ್ಯಾಹ್ನ ಗ್ರಾಮದ ಮಹದೇವಪ್ಪ ಹಾಗೂ ಗಿರೀಶ್ ಎಂಬುವವರು ಅದೇ ಜಾಗದಲ್ಲಿ ಚಿರತೆ ಮರದಿಂದ ಜಿಗಿಯುತ್ತಿರುವುದನ್ನು ಕಂಡು ಗಾಬರಿಯಾಗಿ ಗ್ರಾಮದ ಮುಖಂಡರ ಮೂಲಕ ಅರಣ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.

ವಿಚಾರ ತಿಳಿದ ಅರಣ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಚಿರತೆ ಅಡಗಿರುವ ಸ್ಥಳ ಪರಿಶೀಲಿಸಿ, ಸೆರೆಹಿಡಿಯಲು ಬೋನ್ ಇಡುವುದಾಗಿ ತಿಳಿಸಿದ್ದರು. ಅದರಂತೆ ಭಾನುವಾರ ಮಧ್ಯಾಹ್ನ 12 ಗಂಟೆಯಲ್ಲಿ ಬೋನ್ ಇಟ್ಟು ತೆರಳಿದ್ದಾರೆ.

ಚಿರತೆ ಕಾಣಿಸಿಕೊಂಡಿರುವುದು ಆತಂಕ ತಂದಿದೆ. ಅರಣ್ಯ ಇಲಾಖೆ ಮುಂಜಾಗ್ರತೆ ವಹಿಸಿ, ಚಿರತೆ ಹಾವಳಿಯಿಂದ ರಕ್ಷಣೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ