ಆ್ಯಪ್ನಗರ

ದಾಖಲೆ ಇಲ್ಲದ 2.34 ಲಕ್ಷ ರೂ. ವಶ

ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.34 ಲಕ್ಷ ರೂ.ಗಳನ್ನು ಚುನಾವಣಾ ತಪಾಸಣೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Vijaya Karnataka 6 Apr 2019, 5:00 am
ಚಾಮರಾಜನಗರ : ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.34 ಲಕ್ಷ ರೂ.ಗಳನ್ನು ಚುನಾವಣಾ ತಪಾಸಣೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Vijaya Karnataka Web 2 34 lakh without document capture
ದಾಖಲೆ ಇಲ್ಲದ 2.34 ಲಕ್ಷ ರೂ. ವಶ


ಗುಂಡ್ಲುಪೇಟೆಯಿಂದ ಚಾಮರಾಜನಗರಕ್ಕೆ ಹೋಗುವ ರಸ್ತೆಯ ಶಿವಾನಂದ ವೃತ್ತದ ಬಳಿ ಗುರುವಾರ ತಪಾಸಣೆ ವೇಳೆ ಕಾರಿನಲ್ಲಿ ತೆರಳುತ್ತಿದ್ದ ಅಬಾಜ್‌ ಎಂಬುವವರಿಂದ ದಾಖಲೆಯಿಲ್ಲದ 80 ಸಾವಿರ ರೂ. ಹಣ ಪತ್ತೆಯಾಗಿದ್ದು ಪ್ಲೈಯಿಂಗ್‌ ಸ್ವ್ಕಾಡ್‌ ಅಧಿಕಾರಿ ವಶಪಡಿಸಿಕೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಕೊಳ್ಳೇಗಾಲ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಬಾಣಹಳ್ಳಿ ಸಮೀಪ ಕಾರಿನಲ್ಲಿ ಬಂದ ನಾರಾಯಣ ಸ್ವಾಮಿ ಎಂಬುವವರಿಂದ ದಾಖಲೆ ಇಲ್ಲದ 70,500 ರೂ.ಗಳನ್ನು ಎಸ್‌.ಎಸ್‌.ಟಿ (ಸ್ಟ್ಯಾಟಿಕ್‌ ಸರ್ವೇಲೆನ್ಸ್‌ ಟೀಮ್‌) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ-ಚಾಮರಾಜನಗರ ರಸ್ತೆಯಲ್ಲಿ ತಪಾಸಣೆ ವೇಳೆ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಸೈಯದ್‌ ಯೂನಿಸ್‌ ಎಂಬುವವರಿಂದ ದಾಖಲೆಯಿಲ್ಲದ 83,500 ರೂ. ಹಣವನ್ನು ಪ್ಲೈಯಿಂಗ್‌ ಸ್ವ್ಕಾಡ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ