ಆ್ಯಪ್ನಗರ

ನಕ್ಸಲ್‌ ನಿಗ್ರಹ ಪಡೆಯಿಂದ ಜನಸಂಪರ್ಕ ಸಭೆ

ತಾಲೂಕಿನ ಕಣಿಯನಪುರ ಕಾಲನಿ ಗ್ರಾಮದಲ್ಲಿ ನಕ್ಸಲ್‌ ನಿಗ್ರಹ ಪಡೆ ವತಿಯಿಂದ ಜನಸಂಪರ್ಕ ಸಭೆ ನಡೆಯಿತು.

Vijaya Karnataka 23 Apr 2019, 5:00 am
ಗುಂಡ್ಲುಪೇಟೆ : ತಾಲೂಕಿನ ಕಣಿಯನಪುರ ಕಾಲನಿ ಗ್ರಾಮದಲ್ಲಿ ನಕ್ಸಲ್‌ ನಿಗ್ರಹ ಪಡೆ ವತಿಯಿಂದ ಜನಸಂಪರ್ಕ ಸಭೆ ನಡೆಯಿತು.
Vijaya Karnataka Web a meeting of the people from the naxal suppression force
ನಕ್ಸಲ್‌ ನಿಗ್ರಹ ಪಡೆಯಿಂದ ಜನಸಂಪರ್ಕ ಸಭೆ


ಗ್ರಾಮದ ಆವರಣದಲ್ಲಿ ನಡೆದ ಜನಸಂಪರ್ಕ ಸಭೆಯ ನೇತೃತ್ವ ವಹಿಸಿದ್ದ ನಕ್ಸಲ್‌ ನಿಗ್ರಹ ಪಡೆಯ ಡಿಎಸ್ಪಿ ಪ್ರಸನ್ನಕುಮಾರ್‌ ಜನರ ಸಮಸ್ಯೆಗಳನ್ನು ಆಲಿಸಿ, ಲಿಖಿತ ಮನವಿ ಸ್ವೀಕರಿಸಿದರು.

ನಂತರ ಮಾತನಾಡಿದ ಅವರು, ''ಅರಣ್ಯವಾಸಿಗಳಾದ ಗಿರಿಜನರನ್ನು ಅರಣ್ಯದಂಚಿಗೆ ಸ್ಥಳಾಂತರಿಸಲಾಗಿದೆ. ಗಿರಿಜನರಿಗೆ ಇತರರಂತೆ ಬದುಕಲು ಸರಕಾರ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಾನಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಆದ್ದರಿಂದ ಗಿರಿಜನರು ಹಿಂಜರಿಕೆ ಬಿಟ್ಟು ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು,'' ಎಂದು ಸಲಹೆ ನೀಡಿದರು.

''ರಸ್ತೆ, ಸಾರಿಗೆ, ಅಂಗನವಾಡಿ ಕೇಂದ್ರ ನಿರ್ಮಾಣ ಕಾಮಗಾರಿ ಅಪೂರ್ಣವಾಗಿರುವ ಬಗ್ಗೆ, ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ಗಿರಿಜನರಿಗೆ ತಲುಪದ ಮತ್ತು ಅಗತ್ಯವಾಗಿ ಮೂಲಸೌಲಭ್ಯಗಳ ಕೊರತೆ ಬಗ್ಗೆ ಸಂಬಂಧಿಸಿದ ಅಧಿಕಾರಿಯವರಿಗೆ ಪತ್ರ ಬರೆಯಲಾಗುವುದು,'' ಎಂದು ಭರವಸೆ ನೀಡಿದರು.

ಗ್ರಾಮದ ಮುಖಂಡರಾದ ಕನ್ನರಯ್ಯ, ಕುನ್ನಮರೀಗೌಡ, ಅಭಿಲಾಷ್‌, ಅಂಗನವಾಡಿ ಕಾರ್ಯಕರ್ತೆ ಸೌಮ್ಯ, ನಕ್ಸಲ್‌ ನಿಗ್ರಹ ಪಡೆಯ ನೌಕರರಾದ ಶಿವಕುಮಾರ್‌, ಮಹದೇವಪ್ರಸಾದ್‌, ನಂದೀಶ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ