ಆ್ಯಪ್ನಗರ

ಅಂಬೇಡ್ಕರ್‌ ಶೋಷಿತ ಸಮಾಜದ ದನಿ

ಡಾ. ಬಿ.ಆರ್‌. ಅಂಬೇಡ್ಕರ್‌ ಶೋಷಿತ ಸಮಾಜದ ಧ್ವನಿಯಾಗಿ ಮತದಾನದ ಹಕ್ಕು ಕಲ್ಪಿಸಿಕೊಟ್ಟ ಪುಣ್ಯ ಪುರುಷ ಎಂದು ಮಾದಾಪುರ ಜಿ.ಪಂ.ಸದಸ್ಯ ಆರ್‌. ಬಾಲರಾಜು ತಿಳಿಸಿದರು.

Vijaya Karnataka 16 Apr 2019, 5:00 am
ಚಾಮರಾಜನಗರ : ಡಾ. ಬಿ.ಆರ್‌. ಅಂಬೇಡ್ಕರ್‌ ಶೋಷಿತ ಸಮಾಜದ ಧ್ವನಿಯಾಗಿ ಮತದಾನದ ಹಕ್ಕು ಕಲ್ಪಿಸಿಕೊಟ್ಟ ಪುಣ್ಯ ಪುರುಷ ಎಂದು ಮಾದಾಪುರ ಜಿ.ಪಂ.ಸದಸ್ಯ ಆರ್‌. ಬಾಲರಾಜು ತಿಳಿಸಿದರು.
Vijaya Karnataka Web ambedkar is a corrupt society
ಅಂಬೇಡ್ಕರ್‌ ಶೋಷಿತ ಸಮಾಜದ ದನಿ


ನಗರದ ಡಾ. ಬಿ.ಆರ್‌. ಅಂಬೇಡ್ಕರ್‌ ಬಡಾವಣೆಯಲ್ಲಿರುವ ದಲಿತ ಮುಖಂಡ ವೆಂಕಟರಮಣಸ್ವಾಮಿ ಅವರ ನಿವಾಸದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ 128ನೇ ಜನ್ಮ ದಿನಾಚರಣೆಯಲ್ಲಿ ಅಂಬೇಡ್ಕರ್‌ ಹಾಗು ಬುದ್ದರ ಪುತ್ಥಳಿಗೆ ಪುಷ್ಪಾರ್ಚನೆ ಹಾಗೂ ಮೊಂಬತ್ತಿ ಹಚ್ಚಿ ನಮನ ಸಲ್ಲಿಸಿದರು.

ಶೋಷಿತ ಸಮಾಜದಲ್ಲಿ ಹುಟ್ಟಿದ ಅಂಬೇಡ್ಕರ್‌ ಅವರು ಜೀವನದ್ದುಕ್ಕೂ ಅಪಮಾನಗಳನ್ನು ಅನುಭವಿಸಿದರು.

ನನ್ನ ಸಮುದಾಯ ಇಂಥ ನೋವನ್ನು ಅನುಭವಿಸಬಾರದು ಎಂದು ಅಪಾರವಾದ ಪಾಂಡಿತ್ಯ ಪಡೆದು, ದೇಶಕ್ಕೆ ಉತ್ಕೃಷ್ಟವಾದ ಸಂವಿಧಾನ ನೀಡಿದ್ದಾರೆ. ಸ್ವಾಭಿಮಾನದಿಂದ ಜೀವನ ನಡೆಸಬೇಕು ಹೇಳಿಕೊಟ್ಟ ಮಹಾನ್‌ ಪುರುಷರು ಎಂದು ಬಣ್ಣಿಸಿದರು.

ದಲಿತ ಮುಖಂಡ ವೆಂಕಟರಮಣಸ್ವಾಮಿ ಮಾತನಾಡಿ, ಅಂಬೇಡ್ಕರ್‌ ಸಂವಿಧಾನ ದತ್ತವಾಗಿ ಮೀಸಲಾತಿ ಕಲ್ಪಿಸುವ ಮೂಲಕ ಎಲ್ಲಾ ಶೋಷಿತ ಸಮುದಾಯಗಳ ದಾರಿದೀಪವಾದರು. ಇಂಥ ಮಹಾನ್‌ ಚೇತನ ಹುಟ್ಟಿದ ದಿನವನ್ನು ಶೋಷಿತ ಸಮುದಾಯ ಹಬ್ಬದ ಮಾದರಿಯಲ್ಲಿ ಆಚರಣೆ ಮಾಡುತ್ತಿದೆ ಎಂದು ಪ್ರಶಂಸಿಸಿದರು.

ಮುಖಂಡರಾದ ಅಮಚವಾಡಿ ಚಂದ್ರಶೇಖರ್‌, ಜ್ಯೋತಿಗೌಡನಪುರ ದುಂಡಯ್ಯ, ಎ.ಜಾನ್‌, ತಾ.ಪಂ.ಮಾಜಿ ಸದಸ್ಯ ಉಮ್ಮತ್ತೂರು ನಾಗೇಶ್‌ ಇತರರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ