ಆ್ಯಪ್ನಗರ

ಪರಾರಿಯಾಗಿದ್ದ ಕೈದಿ ಬಂಧನ

ಕೊಳ್ಳೇಗಾಲ ತಾಲೂಕಿನ ಹರಳೆ ಗ್ರಾಮದಲ್ಲಿ ಐದು ಕೊಲೆ ಮಾಡಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿ, ಕಾರಾಗೃಹದಲ್ಲಿದ್ದಾಗ ಪರಾರಿಯಾಗಿದ್ದ ಅಪರಾಧಿ ಮುರುಗೇಶನನ್ನು ತಮಿಳುನಾಡಿನ ಕೊಳತ್ತೂರಿನಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ಧಾರೆ.

Vijaya Karnataka 4 Sep 2019, 5:00 am
ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಹರಳೆ ಗ್ರಾಮದಲ್ಲಿ ಐದು ಕೊಲೆ ಮಾಡಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿ, ಕಾರಾಗೃಹದಲ್ಲಿದ್ದಾಗ ಪರಾರಿಯಾಗಿದ್ದ ಅಪರಾಧಿ ಮುರುಗೇಶನನ್ನು ತಮಿಳುನಾಡಿನ ಕೊಳತ್ತೂರಿನಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ಧಾರೆ.
Vijaya Karnataka Web arrested prisoner fled
ಪರಾರಿಯಾಗಿದ್ದ ಕೈದಿ ಬಂಧನ


ಕಳೆದ 2015ರಲ್ಲಿ ಕೊಳ್ಳೇಗಾಲ ತಾಲೂಕಿನ ಹರಳೆ ಗ್ರಾಮದಲ್ಲಿ ಕಬ್ಬು ಕಟಾವಿಗೆಂದು ಕೆಲಸಕ್ಕೆ ಬಂದಿದ್ದ ಮಹಿಳೆಯನ್ನು ಅಕ್ರಮ ಸಂಬಂಧಕ್ಕೆ ಅಪರಾಧಿ ಒತ್ತಾಯಿಸಿ, ನಿರಾಕರಿಸಿದ್ದಕ್ಕಾಗಿ ಆಕೆಯನ್ನು ಮತ್ತು ರಾತ್ರಿಯ ಹೊತ್ತು ಮಲಗಿದ್ದ ಮಗು ಸೇರಿದಂತೆ ನಾಲ್ವರನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದನು.

ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಅಪರಾಧಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ನ್ಯಾಯಾಲಯವು ಆರೋಪಿಗೆ ಮರಣ ದಂಡನೆ ವಿಧಿಸಿತ್ತು. ನಂತರ ದಿನಗಳಲ್ಲಿ ಬೆಳಗಾವಿಯ ಕಾರಾಗೃಹದಿಂದ ಪರಾರಿಯಾಗಿದ್ದನು.

ಮರಣ ದಂಡನೆಗೆ ಒಳಗಾಗಿದ್ದ ಅಪರಾಧಿಯನ್ನು ತಮಿಳುನಾಡಿನ ಕೊಳತ್ತೂರು ಪೊಲೀಸರು ಪತ್ತೆಹಚ್ಚಿ ಕೊನೆಗೆ ಬಂಧಿಸುವಲ್ಲಿ ಯಶ್ವಸಿಯಾದ ಬಳಿಕ ಅಪರಾಧಿಯನ್ನು ಬೆಳಗಾವಿ ಕಾರಾಗೃಹಕ್ಕೆ ಒಪ್ಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ