ಆ್ಯಪ್ನಗರ

ಬಂಜಾರ ಶಾಲೆ ರಸ್ತೆ ದುರವಸ್ಥೆ

ತಾಲೂಕಿನ ಉತ್ತುವಳ್ಳಿ ಗ್ರಾಮದಿಂದ ಚಾಮರಾಜನಗರ ಬಂಜಾರ ಶಾಲೆಗೆ ಸಂಪರ್ಕಿಸುವ ರಸ್ತೆ ಹದಗೆಟ್ಟು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಅನುಭವಿಸುವಂತಾಗಿದೆ.

Vijaya Karnataka 18 Nov 2019, 5:00 am
ಹರವೆ ಮಹೇಶ್‌ ಚಾಮರಾಜನಗರ
Vijaya Karnataka Web ಚಾಮರಾಜನಗರ ತಾಲೂಕಿನ ಉತ್ತವಳ್ಳಿ ಗ್ರಾಮದಿಂದ ಚಾಮರಾಜನಗರ ಬಂಜಾರ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಕ್ಕಪಕ್ಕ ಗಿಡಗಂಟಿ ಬೆಳೆದಿರುವುದು.


ತಾಲೂಕಿನ ಉತ್ತುವಳ್ಳಿ ಗ್ರಾಮದಿಂದ ಚಾಮರಾಜನಗರ ಬಂಜಾರ ಶಾಲೆಗೆ ಸಂಪರ್ಕಿಸುವ ರಸ್ತೆ ಹದಗೆಟ್ಟು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಅನುಭವಿಸುವಂತಾಗಿದೆ.

ಜಿಲ್ಲಾಕೇಂದ್ರಕ್ಕೆ ಮುಖ್ಯರಸ್ತೆಯ ಮೂಲಕ ತೆರಳಬೇಕಾದರೆ 3 ಕಿ.ಮೀ ಬಳಸು ಮಾರ್ಗದಲ್ಲಿಬರಬೇಕು. ಅದೇ ಗ್ರಾಮದ ಮಾರಿಗುಡಿಯಿಂದ ಸಂಪರ್ಕಿಸುವ ರಸ್ತೆ ಒಂದೂವರೆ ಕಿ.ಮೀ ಇದ್ದು, ಈ ರಸ್ತೆ ಸಮಗ್ರವಾಗಿ ಅಭಿವೃದ್ಧಿಯಾದರೆ ಗ್ರಾಮಸ್ಥರು ಜಿಲ್ಲಾಕೇಂದ್ರಕ್ಕೆ ಸಮಯಕ್ಕೆ ಸರಿಯಾಗಿ ತಲುಪಬಹುದು ಎಂಬುದು ಗ್ರಾಮಸ್ಥರ ಆಶಯ.

ಕಳೆದ ಏಳೆಂಟು ವರ್ಷಗಳ ಹಿಂದೆ ರಸ್ತೆಗೆ ಮೆಟ್ಲಿಂಗ್‌ ಮಾಡಿದ್ದು, ಬಿಟ್ಟರೇ ಡಾಂಬರೀಕರಣವಾಗಿಲ್ಲ. ಇದರಿಂದ ಸಂಚಾರ ದಿನನಿತ್ಯದ ನರಕವಾಗಿದೆ ಎನ್ನುತ್ತಾರೆ ನಿವಾಸಿಗಳು.

ಸಮಸ್ಯೆಗಳ ಆಗರ: ಉತ್ತುವಳ್ಳಿ ಗ್ರಾಮದೊಳಗಿರುವ ಮಾರಮ್ಮನ ದೇವಸ್ಥಾನದಿಂದ ನಗರದ ಹೊರವಲಯದಲ್ಲಿರುವ ಬಂಜಾರ ಶಾಲೆಗೆ ಕಚ್ಛಾ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆ ನಗರಕ್ಕೆ ಬರಲು ಅತಿ ಸಮೀಪವಾಗಿರುವುದರಿಂದ ಗ್ರಾಮದ ಸಾರ್ವಜನಿಕರು ವಿದ್ಯಾರ್ಥಿಗಳು, ದ್ವಿಚಕ್ರ ವಾಹನ ಸವಾರರು ಹೆಚ್ಚಿನ ಸಂಖ್ಯೆಯಲ್ಲಿಸಂಚರಿಸುತ್ತಾರೆ. ಕಳೆದ 8 ವರ್ಷಗಳ ಹಿಂದೆ ರಸ್ತೆಯನ್ನು ಮೆಟ್ಲಿಂಗ್‌ ಮಾತ್ರ ಮಾಡಲಾಗಿದ್ದು, ಡಾಂಬರು ಭಾಗ್ಯ ಕಾಣದ ಪರಿಣಾಮ ಮಳೆಗಾಲದಲ್ಲಿರಸ್ತೆಯಲ್ಲೇ ನೀರು ನಿಲ್ಲುತ್ತಿದ್ದು, ಸಾರ್ವಜನಿಕರು ಕೆಸರಿನ ನೀರಲ್ಲೇ ಸಂಚರಿಸುವಂತಾಗಿದೆ.

ಗಿಡಗಂಟಿ ಸಮಸ್ಯೆ: ರಸ್ತೆಯ 2 ಕಡೆ ಕಾಡು ಜಾತಿಯ ಗಿಡಗಂಟಿಗಳು ಬೆಳೆದಿರುವುದರಿಂದ ಹಾವು, ಚೇಳು, ಹಂದಿಗಳ ಆವಾಸಸ್ಥಾನವಾಗಿದೆ. ನಗರ ನಂಜನಗೂಡು ರಸ್ತೆಯಿಂದ ಮೂಡ್ಲುಪುರ, ಸೋಮವಾರಪೇಟೆ, ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಗುತ್ತಿಗೆದಾರರು ರಸ್ತೆಗೆ ಕಪ್ಪುಮಣ್ಣು ಸುರಿದಿದ್ದು, ಮಳೆ ಸ್ವಲ್ಪ ಬಿದ್ದರೂ, ತಿರುಗಾಡುವುದೇ ಕಷ್ಟ, ರಸ್ತೆ ಅಭಿವೃದ್ಧಿಪಡಿಸುವ ಸಂಬಂಧ ಜನಪ್ರತಿನಿಧಿಗಳ ಗಮನಕ್ಕೆ ತಂದು ಮನವಿ ನೀಡಿದ್ದೇವೆ, ಆದರೂ ಯಾವುದೇ ಪ್ರಯೋಜನವಾಗಿಲ್ಲಎನ್ನುತ್ತಾರೆ ಗ್ರಾಮಸ್ಥರು.

ಸಂಪರ್ಕ ರಸ್ತೆ ಅಭಿವೃದ್ಧಿಗೆ ಜಿಲ್ಲಾಡಳಿತ ಸೇರಿದಂತೆ ಜನಪ್ರತಿನಿಧಿಗಳು ಸೂಕ್ತ ಕ್ರಮಕೈಗೊಂಡು ಸಾರ್ವಜನಿಕರ ಅನುಕೂಲ ಕಲ್ಪಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ.

ಗ್ರಾಮದಿಂದ ಚಾಮರಾಜನಗರ ಹೊರವಲಯದ ಬಂಜಾರ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ ಹಲವು ವರ್ಷಗಳಿಂದ ಅಭಿವೃದ್ಧಿಯಾಗದೇ ನನೆಗುದಿಗೆ ಬಿದ್ದಿದೆ. ರಸ್ತೆಯ ಬದಿ ಗಿಡಗಂಟಿಗಳು ಬೆಳೆದು ಸಂಚಾರಕ್ಕೆ ಸಮಸ್ಯೆಯಾಗಿದೆ. ಕೂಡಲೇ ಸಂಬಂಧಪಟ್ಟವರು ರಸ್ತೆ ಅಭಿವೃದ್ಧಿಗೆ ಕ್ರಮವಹಿಸಬೇಕು.

-ಈಶ್ವರಾಚಾರ್‌ ಉತ್ತುವಳ್ಳಿ


ಉತ್ತುವಳ್ಳಿಯಿಂದ ಬಂಜಾರ ಶಾಲೆಗೆ ಸಂಪರ್ಕಿಸುವ ರಸ್ತೆ ಜಿಪಂ ವ್ಯಾಪ್ತಿಗೆ ಬರುತ್ತವೆ. ನಮ್ಮ ಗ್ರಾಮ ನಮ್ಮ ರಸ್ತೆ ಅಭಿವೃದ್ಧಿ ಯೋಜನೆಗೆ ಬಿಡುಗಡೆಯಾಗುವ ಪಿಎಂಜಿಎಸ್‌ವೈ ಅನುದಾನದಲ್ಲಿಈ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಈ ಅನುದಾನ ತಡೆಹಿಡಿದಿರುವುದರಿಂದ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿಲ್ಲ. ನನ್ನ ಕ್ಷೇತ್ರದಲ್ಲೇ 44 ಕೋಟಿ ರೂ.ಅನುದಾನ ತಡೆಹಿಡಿದಿದ್ದು, ಅದು ಮಂಜೂರಾದರೆ ಕಾಮಗಾರಿ ಕೈಗೊಳ್ಳಬಹುದು.

-ಸಿ.ಪುಟ್ಟರಂಗಶೆಟ್ಟಿ ಶಾಸಕರು ಚಾಮರಾಜನಗರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ