ಆ್ಯಪ್ನಗರ

ಚಾಮರಾಜನಗರ: ಹಣಕ್ಕಾಗಿ ಮಹಿಳೆಯನ್ನು ಕೊಂದಿದ್ದವನಿಗೆ ಜೀವಾವಧಿ ಶಿಕ್ಷೆ

ಹಣದ ವಿಚಾರಕ್ಕೆ ಮಹಿಳೆಯನ್ನು ಕೊಂದಿದ್ದ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಆನಂದ ಕುಮಾರ್ ಎಂಬಾತನಿಗೆ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

Vijaya Karnataka Web 27 Nov 2020, 4:26 pm
ಚಾಮರಾಜನಗರ: ಹಣದ ವಿಚಾರಕ್ಕೆ ಮಹಿಳೆಯನ್ನು ಕೊಲೆ ಮಾಡಿದ್ದಾತನಿಗೆ ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಆನಂದ ಕುಮಾರ್‌ ಶಿಕ್ಷೆಗೊಳಗಾದವ. ಈತ ಅದೇ ಗ್ರಾಮದ ರತ್ನಮ್ಮ ಎಂಬಾಕೆಯ ಪತಿ ರಾಮಚಂದ್ರ ಅವರಿಂದ 10 ಸಾವಿರ ರೂ. ಸಾಲ ಪಡೆದಿದ್ದ. ಸಾಲದ ಹಣವನ್ನು ರತ್ನಮ್ಮಳಿಗೆ ವಾಪಸ್‌ ನೀಡಲು ಹೋದಾಗ ಇದಕ್ಕೆ ಬಡ್ಡಿ ಸೇರಿಸಿ ಹೆಚ್ಚಿನ ಮೊತ್ತ ನೀಡಬೇಕೆಂದು ರತ್ನಮ್ಮ ಒತ್ತಾಯಿಸಿದ್ದರು. ಆಗ ಇಬ್ಬರಿಗೂ ಜಗಳವಾಗಿತ್ತು.
Vijaya Karnataka Web Imprisonment
ಸಾಂದರ್ಭಿಕ


ಇದೇ ದ್ವೇಷದಿಂದ 2016ರ ಫೆ.13ರಂದು ಸಂಜೆ 4.30ರಲ್ಲಿ ರತ್ನಮ್ಮ ತೆರಕಣಾಂಬಿಯ ರಾಮಮಂದಿರದ ಬಳಿ ನಡೆದು ಹೋಗುತ್ತಿದ್ದಾಗ, ಸೈಕಲ್‌ನಲ್ಲಿ ಬಂದ ಆನಂದಕುಮಾರ, ಅವಾಚ್ಯ ಶಬ್ದಗಳಿಂದ ಬೈದು ರತ್ನಮ್ಮಳ ಮೇಲೆ ಮಚ್ಚಿನಿಂದ ತೀವ್ರ ಹಲ್ಲೆ ಮಾಡಿದ್ದ. ಇದರಿಂದ ತೀವ್ರ ಗಾಯಗೊಂಡಿದ್ದ ರತ್ನಮ್ಮ ಮೈಸೂರಿನ ಕೆ.ಆರ್‌.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಕೊಲೆ ಮಾಡಿರುವುದು ರುಜುವಾತಾಗಿದ್ದರಿಂದ ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಧೀಶ ಸದಾಶಿವ ಸುಲ್ತಾನ್‌ಪುರಿ ಅವರು ಆನಂದನಿಗೆ ಜೀವಾವಧಿ ಶಿಕ್ಷೆ ಹಾಗೂ 6,500 ರೂ. ದಂಡ ವಿಧಿಸಿದ್ದಾರೆ. ಈ ಪ್ರಕರಣದಲ್ಲಿಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಟಿ.ಎಚ್‌.ಲೋಲಾಕ್ಷಿ ವಾದ ಮಂಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ