ಆ್ಯಪ್ನಗರ

ಬಡತನ: ಹೆತ್ತ ಮಗು ಮಾರಿದ ದಂಪತಿ

ಹೆತ್ತ ಮಗುವನ್ನು ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳ ವರದಿ ಆಧರಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ವಿಕ ಸುದ್ದಿಲೋಕ 24 Aug 2016, 1:01 am
ಚಾಮರಾಜನಗರ : ಹೆತ್ತ ಮಗುವನ್ನು ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳ ವರದಿ ಆಧರಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮಗು ಮಾರಾಟ ಮಾಡಿದ ರಾಧಾ-ಕೃಷ್ಣಕುಮಾರ್ ದಂಪತಿ ಹಾಗೂ ಮಧ್ಯವರ್ತಿಗಳಾದ ಪದ್ಮಾ, ಪವಿತ್ರಾ ಬಂಧಿತರು. ಬಡತನದ ಕಾರಣಕ್ಕೆ ಮಗುವನ್ನು ಮಾರಿದ್ದು ನಿಜ ಎಂಬುದನ್ನು ದಂಪತಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಮಾರಾಟವಾಗಿದ್ದ ಮಗುವನ್ನು ಬಿಡುಗಡೆಗೊಳಿಸಿ, ಸದ್ಯ ಮಂಡ್ಯದ ವಿಕಸನ ಸಂಸ್ಥೆಯ ಪುನರ್ವಸತಿ ಕೇಂದ್ರಕ್ಕೆ ನೀಡಲಾಗಿದೆ.
Vijaya Karnataka Web child sale arrest
ಬಡತನ: ಹೆತ್ತ ಮಗು ಮಾರಿದ ದಂಪತಿ


ಏನಿದು ಪ್ರಕರಣ?:

ಮೂಲತಃ ಕೊಡಗು ಜಿಲ್ಲೆಯ ರಾಧಾ ಮತ್ತು ಈಕೆಯ ಮೊದಲ ಪತಿಗೆ ಇಬ್ಬರು ಮಕ್ಕಳಿದ್ದರು. ಆತನ ನಿಧನ ಬಳಿಕ ನಗರಕ್ಕೆ ಬಂದು ಇಲ್ಲಿನ ಆಶ್ರಮವೊಂದಕ್ಕೆ ಮಕ್ಕಳನ್ನು ಸೇರಿಸಿದ್ದಳು. ಇನ್ನು ತಮಿಳುನಾಡಿನ ಗೂಡಲೂರಿನ ಕೃಷ್ಣಕುಮಾರ್‌ನ ಮೊದಲ ಪತ್ನಿ ಮೃತಪಟ್ಟಿದ್ದು, ಆತ ಇಲ್ಲಿ ಕೂಲಿ ಕೆಲಸಕ್ಕಿದ್ದ. ರಾಧಾ -ಕೃಷ್ಣಕುಮಾರ್ ನಡುವೆ ಪ್ರೇಮ ಏರ್ಪಟ್ಟು, ಸಂಘಟನೆಯೊಂದರ ನೇತೃತ್ವದಲ್ಲಿ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಎರಡು ವರ್ಷದ ಹಿಂದೆ ಇವರಿಗೆ ಅವಳಿ ಮಕ್ಕಳು ಜನಿಸಿದ್ದವು.

ಈ ಪೈಕಿ ಒಂದು ಮಗು ಜನಿಸುತ್ತಲೇ ಮೃತಪಟ್ಟಿತ್ತು. ಉಳಿದ ಮಗುವನ್ನು ದಂಪತಿಯೇ ಎರಡರಿಂದ ಮೂರು ತಿಂಗಳು ಸಲುಹಿದ್ದರು. ಬಡತನ ಕಾರಣಕ್ಕೆ ಸಾಕಲು ಕಷ್ಟವಾಯಿತೆಂದು, ಮುಸ್ಲಿಂ ದಂಪತಿಗೆ 20 ಸಾವಿರ ರೂ.ಗೆ ಮಧ್ಯವರ್ತಿಗಳ ಮೂಲಕ ಮಾರಾಟ ಮಾಡಿದ್ದರು. ಈ ವಿಚಾರವನ್ನು ಪೊಲೀಸರು ಖಚಿತ ಪಡಿಸಿದ್ದಾರೆ. ವಾರದ ಹಿಂದೆ ರಾಧಾ,‘‘ನನ್ನ ಮಗುವನ್ನು ಪತಿ ಮಾರಿದ್ದಾರೆ. ನನಗೆ ಮತ್ತೆ ಆ ಮಗು ಬೇಕು,’’ ಎಂದು ತನಗೆ ಮದುವೆ ಮಾಡಿಸಿದ ಸಂಘಟನೆಯ ಲಕ್ಷ್ಮೀ ಮಹೇಶ್ ಎಂಬುವವರ ಬಳಿ ಕೋರಿದ್ದಾಳೆ. ‘ನೋಡೋಣ’ ಎಂದು ಆಕೆಗೆ ಸಂತೈಸಿದ ಲಕ್ಷ್ಮೀ ಮಹೇಶ್, ಪೊಲೀಸರಿಗೆ ಈ ವಿಚಾರ ತಿಳಿಸಿದ್ದರು. ಪೊಲೀಸರು, ಈ ವಿಚಾರದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಅಧಿಕಾರಿಗಳ ವಿಚಾರಣೆ ವೇಳೆ ಅಸಲಿ ವಿಷಯ ಬೆಳಕಿಗೆ ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ