ಆ್ಯಪ್ನಗರ

ಸವಾಲು ಎದುರಿಸಲು ಆತ್ಮವಿಶ್ವಾಸ ಬೇಕು

ಭಯ ಬಿಟ್ಟು ಅಗತ್ಯ ಸಿದ್ದತೆಯೊಂದಿಗೆ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಬೇಕು ಎಂದು ನಿವೃತ್ತ ಪ್ರಾಂಶುಪಾಲ, ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಕೆಂಪರಾಜು ತಿಳಿಸಿದರು.

Vijaya Karnataka 14 Mar 2019, 5:00 am
ಗುಂಡ್ಲುಪೇಟೆ : ಭಯ ಬಿಟ್ಟು ಅಗತ್ಯ ಸಿದ್ದತೆಯೊಂದಿಗೆ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಬೇಕು ಎಂದು ನಿವೃತ್ತ ಪ್ರಾಂಶುಪಾಲ, ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಕೆಂಪರಾಜು ತಿಳಿಸಿದರು.
Vijaya Karnataka Web confident to face the challenge
ಸವಾಲು ಎದುರಿಸಲು ಆತ್ಮವಿಶ್ವಾಸ ಬೇಕು


ಪಟ್ಟಣದ ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕದಿಂದ ಸಿರಿಗನ್ನಡ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಆಧ್ಯಾತ್ಮ ಚಿಂತನೆ, ಕವನ ವಾಚನ, ಗುರುರಾಘವೇಂದ್ರರ ಜಯಂತಿ ಮತ್ತು ಸರಸ್ವತಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

''ಧಾರ್ಮಿಕ ನಂಬಿಕೆಗಳು ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿನ ಒಂದು ಭಾಗವಾಗಿವೆ. ಆದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಓದುವ ಜತೆಗೆ ಮಾನಸಿಕ ಸಿದ್ದತೆಗಾಗಿ ದೇವರನ್ನು ಪ್ರಾರ್ಥಿಸುವುದು ಉತ್ತಮ ಅಭ್ಯಾಸ. ಬೆಳೆವ ಸಿರಿಯ ಮೊಳಕೆಯಲ್ಲಿ ಎಂಬಂತೆ ವಿದ್ಯಾರ್ಥಿಗಳು ಅಗಾಧವನ್ನು ಸಾಧಿಸುವ ಅವಕಾಶಗಳಿವೆ. ಆದರೆ ಅಂಕ ಗಳಿಕೆಯೇ ಮುಖ್ಯವಾಗಬಾರದು ಎಂದು ತಿಳಿಸಿದರು. ಆಸ್ತಿ, ಹಣ, ಅಧಿಕಾರದ ಹಿಂದೆ ಹೋದವರು ಜೀವನದಲ್ಲಿ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಸರಸ್ವತಿ ಒಲಿಸಿಕೊಂಡರೆ ಯಾರಿಗೂ ಅಂಜದೇ, ಅಳುಕದೇ ಬದುಕಬಹುದು ''ಎಂದು ತಿಳಿಸಿದರು.

ಶಿಕ್ಷ ಕರಾದ ಜಗತ್‌ಪ್ರಕಾಶ್‌ ಮಾತನಾಡಿ, ''ಪರೀಕ್ಷೆ ಸೇರಿದಂತೆ ಜೀವನದಲ್ಲಿ ಎದುರಾಗುವ ಯಾವುದೇ ಸವಾಲಗಳನ್ನು ಜಯಿಸಲು ಆತ್ಮವಿಶ್ವಾಸ ಮುಖ್ಯ. ಪ್ರತಿಯೊಬ್ಬರು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ''ಎಂದು ಸಲಹೆ ನೀಡಿದರು.

ದೈಹಿಕ ಶಿಕ್ಷ ಣ ಶಿಕ್ಷ ಕ ವೇಲು, ಶಿಕ್ಷ ಕಿ ರೂಪ, ಶಾಂತಲಾರಾಜು, ಮಂಜುನಾಥ್‌ರಾಜ್‌ ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ