ಆ್ಯಪ್ನಗರ

ಕೊಪ್ಪರಿಗೆ ಮೇಲೆ ಆತಂಕದಲ್ಲೇ ಸಂಚಾರ

ತಾಲೂಕಿನ ದಾಸನಪುರ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗೆ ರಸ್ತೆ ಜೋಡಣೆ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ಹಿನ್ನೆಲೆ ಪ್ರಯಾಣಿಕರು ಮರಳು ತೆಗೆಯುವ ಕೊಪ್ಪರಿಗೆ ಮೇಲೆ ನದಿ ದಾಟಬೇಕಾಗಿದೆ.

Vijaya Karnataka 9 Jan 2019, 5:00 am
ಕೊಳ್ಳೇಗಾಲ: ತಾಲೂಕಿನ ದಾಸನಪುರ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗೆ ರಸ್ತೆ ಜೋಡಣೆ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ಹಿನ್ನೆಲೆ ಪ್ರಯಾಣಿಕರು ಮರಳು ತೆಗೆಯುವ ಕೊಪ್ಪರಿಗೆ ಮೇಲೆ ನದಿ ದಾಟಬೇಕಾಗಿದೆ.
Vijaya Karnataka Web cross the river anxiety traffic
ಕೊಪ್ಪರಿಗೆ ಮೇಲೆ ಆತಂಕದಲ್ಲೇ ಸಂಚಾರ


ಸೇತುವೆಯನ್ನು ತಾತ್ಕಾಲಿಕವಾಗಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು, ರಸ್ತೆಗೆ ಸೇತುವೆ ಸಂಪರ್ಕ ಕಲ್ಪಿಸುವ ಕಾಮಗಾರಿ ನಡೆಯುತ್ತಿರುವುದರಿಂದ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಂಡಿದೆ. ಸೇತುವೆ ಸಂಚಾರ ಸ್ಥಗಿತಗೊಂಡಿರುವ ವಿಚಾರ ಸಾಕಷ್ಟು ಜನರಿಗೆ ತಿಳಿದಿಲ್ಲ, ಹೀಗಾಗಿ ಎಂದಿನಂತೆ ನದಿ ಕಡೆಗೆ ಬರುವ ಜನರು ಅನಿವಾರ್ಯವಾಗಿ ನದಿ ದಾಟಲು ಮರಳು ತೆಗೆಯುವ ಕೊಪ್ಪರಿಗೆಯ ಮೇಲೆ ತಮ್ಮ ವಾಹನಗಳ ಸಮೇತ ಹೋಗುತ್ತಾರೆ. ಇದು ಸುರಕ್ಷಿತವಲ್ಲದಿದ್ದರೂ ಪ್ರಯಾಣಿಕರಿಗೆ ಅನಿವಾರ್ಯವಾಗಿದೆ. ಸ್ಪಲ್ಪ ಅಯಾ ತಪ್ಪಿದರೂ ಕೊಪ್ಪರಿಗೆ ನೀರಿನಲ್ಲಿ ಮುಳುಗುವ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ಆರೋಪ.

ಮೂಲೆ ಸೇರಿದ ಸ್ಟೀಮರ್‌: ಸೇತುವೆ ನಿರ್ಮಾಣಕ್ಕೂ ಮುನ್ನ ಒಳ ನಾಡ ಸಾರಿಗೆ ಮತ್ತು ಬಂದರು ಇಲಾಖೆ ನದಿ ದಾಟಿ ತಿ.ನರಸೀಪುರ ಕಡೆಗೆ ಹೋಗುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಸ್ಟೀಮರ್‌ ವ್ಯವಸ್ಥೆ ಮಾಡಿತ್ತು, ಸೇತುವೆ ನಿರ್ಮಾಣದ ನಂತರ ಸ್ಟೀಮರ್‌ ಅನ್ನು ನದಿ ತೀರಕ್ಕೆ ತಳ್ಳಿ ನಿರ್ಲಕ್ಷಿಸಲಾಗಿದೆ. ಸ್ಟೀಮರ್‌ ಸುಸ್ಥಿಯಲ್ಲಿದ್ದರೆ ತುರ್ತು ಸಂದರ್ಭದಲ್ಲಿ ಬಳಕೆಯಾಗುತ್ತಿತ್ತು, ಈಗ ಅದನ್ನು ಮೂಲೆ ಗುಂಪು ಮಾಡಿರುವುದರಿಂದ ಕೊಪ್ಪರಿಗೆ ನಡೆಸುವವರು ಪ್ರಯಾಣಿಕರಿಂದ ಸುಲುಗೆ ಮಾಡುತ್ತಿದ್ದಾರೆ. ಸುರಕ್ಷಿತವಲ್ಲದ ಕೊಪ್ಪರಿಗೆ ಅಥವ ತೆಪ್ಪ ಬಳಸುವುದು ಸುರಕ್ಷ ತೆ ಇಲ್ಲವಾದ್ದರಿಂದ ಇದನ್ನು ನಿಲ್ಲಿಸಿ ಸ್ಟೀಮರ್‌ ಮೂಲಕ ಜನರನ್ನು ಸಾಗಿಸಬೇಕು ಎಂಬುದು ಪ್ರಯಾಣಿಕರ ಆಗ್ರಹ.

ಸೇತುವೆ ಮುಂದುವರಿದ ಕಾಮಗಾರಿ ನಡೆಯುತ್ತಿರುವುದರಿಂದ ಸೇತುವೆ ಮೇಲಿನ ಸಂಚಾರ ನಿರ್ಬಂಧಿಸಲಾಗಿದೆ. ಕಾವೇರಿ ನದಿ ದಾಟಿ ಹೋಗುವ ಜನ ಕೊಪ್ಪರಿಗೆಯ ಸಹಾಯದಿಂದ ಹೆಚ್ಚು ಹಣ ನೀಡಿ ಹೋಗಬೇಕಿದೆ. ಕೊಪ್ಪರಿಗೆ ಮೇಲೆ ಕುಳಿತು ನದಿ ದಾಟುವುದು ಅಪಾಯಕಾರಿ. ಈ ಹಿಂದೆ ನದಿ ದಾಟಲು ಬಳಸುತ್ತಿದ್ದ ಸ್ಟೀಮರ್‌ ಅನ್ನು ಮೂಲೆಗೆ ತಳ್ಳಲಾಗಿದೆ. ಮತ್ತೆ ಸ್ಟೀಮರ್‌ ದುರಸ್ತಿ ಮಾಡಿಸಿ ಬಳಸುವ ಕಾರ್ಯ ಆಗಬೇಕು.

ಶಶಿಕುಮಾರ್‌, ಪ್ರಯಾಣಿಕ. ಕೊಳ್ಳೇಗಾಲ,

ಬುಧವಾರ ದಾಸನಪುರ ಬಳಿ ಕಾವೇರಿ ನದಿ ಬಳಿ ಭೇಟಿ ನೀಡಿ ಪರಿಶೀಲಿಸಿ ಪ್ರಯಾಣಿಕರ ಸುರಕ್ಷ ತೆ ಬಗ್ಗೆ ಕ್ರಮ ವಹಿಸುತ್ತೇನೆ. ಅಕ್ರಮವಾಗಿ ಜನರನ್ನು ಸಾಗಿಸುವ ಕೊಪ್ಪರಿಗೆಯವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ.

ರಾಯಪ್ಪ ಹುಣಸಗಿ, ತಹಸೀಲ್ದಾರ್‌, ಕೊಳ್ಳೇಗಾಲ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ