ಆ್ಯಪ್ನಗರ

ಜಿಂಕೆ ಜೀವ ಉಳಿಸಿದ ಚಿಣ್ಣರು

ತಾಲೂಕಿನ ಶಾಗ್ಯ ಗ್ರಾಪಂ ವ್ಯಾಪ್ತಿಯ ಬಿರೋಟದಲ್ಲಿ ನಾಯಿಗಳ ದಾಳಿಗೊಳಗಾಗಿ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಜಿಂಕೆಯೊಂದನ್ನು ಚಿಣ್ಣರು ರಕ್ಷಿಸಿ, ಪ್ರಥಮ ಚಿಕಿತ್ಸೆ ನೀಡಿದ ಘಟನೆ ನಡೆದಿದೆ.

Vijaya Karnataka 13 May 2019, 5:00 am
ಹನೂರು: ತಾಲೂಕಿನ ಶಾಗ್ಯ ಗ್ರಾಪಂ ವ್ಯಾಪ್ತಿಯ ಬಿರೋಟದಲ್ಲಿ ನಾಯಿಗಳ ದಾಳಿಗೊಳಗಾಗಿ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಜಿಂಕೆಯೊಂದನ್ನು ಚಿಣ್ಣರು ರಕ್ಷಿಸಿ, ಪ್ರಥಮ ಚಿಕಿತ್ಸೆ ನೀಡಿದ ಘಟನೆ ನಡೆದಿದೆ.
Vijaya Karnataka Web CHN-CHN12HNR1


ಹನೂರು ಕಾವೇರಿ ವನ್ಯಧಾಮ ಅರಣ್ಯ ಪ್ರದೇಶದಿಂದ ಮೇವು ನೀರನ್ನು ಅರಸಿ ಬಂದಂತಹ ಜಿಂಕೆಯ ಮೇಲೆ ನಾಯಿ ಹಿಂಡು ದಾಳಿ ನಡೆಸಿದೆ. ಇದೇ ವೇಳೆ ಆಟವಾಡುತ್ತಿದ್ದ 8ರಿಂದ 13 ವರ್ಷದ ಮಕ್ಕಳು ಕೂಡಲೇ ಸಮಯ ಪ್ರಜ್ಞೆಯಿಂದ ಕಲ್ಲು, ದೊಣ್ಣೆಗಳಿಂದ ನಾಯಿ ಹಿಂಡನ್ನು ಓಡಿಸಿ ಜಿಂಕೆಯನ್ನು ರಕ್ಷಿಸಿ ಉಪಚರಿಸಿದ್ದಾರೆ.

ಕೆಲವು ಹಸಿಸೊಪ್ಪುಗಳನ್ನು ಕಿತ್ತು ತಂದು ಪ್ರಥಮ ಚಿಕಿತ್ಸೆಯನ್ನು ನೀಡಿರುವ ಚಿಣ್ಣರು ಜಿಂಕೆಗೆ ನೀರು ಕುಡಿಸಿ ಹಿರಿಯರು ಬರುವ ತನಕ ಜಿಂಕೆಯ ಮೈದಡವಿ ಪ್ರಾಣಿ ವಾತ್ಸಲ್ಯ ಮೆರೆದಿದ್ದಾರೆ.

ಅರುಣ್‌ ಕುಮಾರ್‌, ಚೇತನ್‌, ಭವಾನಿ, ವೀರೇಂದ್ರ, ಚಂದು, ಪ್ರಿಯಾಂಕ, ರಮ್ಯ, ಮನೋಜ್‌, ಮಲ್ಲೇಶ, ಮಾನಸಾ, ಪ್ರೀತಂ ಹಾಗೂ ಲೋಕೇಶ್‌ ಎಂಬ ಚಿಣ್ಣರ ಕಾರ್ಯ ಕಂಡು ಹಿರಿಯ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಜಿಂಕೆಯನ್ನು ಕಾಡಿಗೆ ಬಿಡುವ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ಕಾರ್ಯ ಪರಿಸರ ರಕ್ಷ ಣೆ, ವನ್ಯ ಜೀವಿಗಳನ್ನು ಉಳಿಸುವ ನಿಟ್ಟಿನಲ್ಲಿ ಹಿರಿಯರಿಗೇ ಮಾದರಿಯಾಗಿದ್ದಾರೆ.

ಕಡವೆ ಸಾವು: ಹನೂರು ಮಲೆ ಮಹದೇಶ್ವರ ವನ್ಯಜೀವಿ ವಲಯ ಬಫರ್‌ ರೇಂಜ್‌ನ ಅರಣ್ಯ ಪ್ರದೇಶದಿಂದ ಮೇವು ನೀರು ಅರಸಿ ಬಂದಂತಹ 5ರಿಂದ 6 ವರ್ಷ ಹೆಣ್ಣು ಕಡವೆಯೊಂದನ್ನು ಮಂಡ್ಯ ಫಾರಂ ಬಳಿ ನಾಯಿಗಳ ಹಿಂಡು ದಾಳಿ ನಡೆಸಿ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿ ನೀಡಿ ಮೃತಪಟ್ಟ ಕಡವೆಯನ್ನು ಪಶು ವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ