ಆ್ಯಪ್ನಗರ

ಉರುಳಿಗೆ ಸಿಲುಕಿದ್ದ ಜಿಂಕೆ ರಕ್ಷಣೆ

ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಪ್ರದೇಶದಲ್ಲಿ ಉರುಳಿಗೆ ಸಿಲುಕಿ ಚಿಂತಾಜನಕ ಸ್ಥಿತಿಯಲ್ಲಿದ್ದ ಜಿಂಕೆಯನ್ನು ಬುಧವಾರ ರಕ್ಷಿಸಲಾಗಿದೆ.

Vijaya Karnataka 10 Jan 2019, 5:00 am
ಚಾಮರಾಜನಗರ: ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಪ್ರದೇಶದಲ್ಲಿ ಉರುಳಿಗೆ ಸಿಲುಕಿ ಚಿಂತಾಜನಕ ಸ್ಥಿತಿಯಲ್ಲಿದ್ದ ಜಿಂಕೆಯನ್ನು ಬುಧವಾರ ರಕ್ಷಿಸಲಾಗಿದೆ.
Vijaya Karnataka Web deer protection
ಉರುಳಿಗೆ ಸಿಲುಕಿದ್ದ ಜಿಂಕೆ ರಕ್ಷಣೆ


ನಗರದ ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಪ್ರದೇಶದಲ್ಲಿ ಸಾಕಷ್ಟು ಮುಳ್ಳು ಹಾಗೂ ಕುರುಚಲು ಗಿಡಗಳು ಬೆಳೆದಿದ್ದು, ಇಲ್ಲಿ ಜಿಂಕೆ, ಮೊಲಗಳು ವಾಸಿಸುತ್ತಿವೆ. ಇದನ್ನು ಗಮನಿಸಿದ ದುಷ್ಕರ್ಮಿಗಳು ಗಿಡಗಳ ಮಧ್ಯ ಉರುಳಿಟ್ಟಿದ್ದರು. ಈ ಮಾರ್ಗದಲ್ಲಿ ಸಾಗುತ್ತಿದ್ದ ಜಿಂಕೆ ಆ ಉರುಳಿಗೆ ಸಿಲುಕಿ ಚಿಂತಾಜನಕ ಸ್ಥಿತಿಯಲ್ಲಿತ್ತು. ಈ ವಿಚಾರ ತಿಳಿದ, ಅದೇ ಭಾಗದಲ್ಲಿದ್ದ ಸೈಬರ್‌ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಪಡೆಯ ಇನ್ಸ್‌ಪೆಕ್ಟರ್‌ ಮಹದೇವಶೆಟ್ಟಿ ಹಾಗೂ ಸಿಬ್ಬಂದಿ ಚಿಂತಾಜನಕ ಸ್ಥಿತಿಯಲ್ಲಿದ್ದ ಜಿಂಕೆಯನ್ನು ರಕ್ಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ