ಆ್ಯಪ್ನಗರ

ಆನೆ ದಾಳಿಗೆ ಸಿಲುಕಿ ಬಾಳೆ ನಾಶ

ತಾಲೂಕಿನ ಬಿಳಿಗಿರಿರಂಗನಬೆಟ್ಟದ ಕಾಡಂಚಿನಲ್ಲಿರುವ ರೈತರು ಹಾಕಲಾಗಿರುವ ಬಾಳೆ ತೋಟಕ್ಕೆ ಕಾಡಾನೆಗಳು ಲಗ್ಗೆ ಇಟ್ಟು ಬಾಳೆ ಫಸಲನ್ನು ತಿಂದು ತುಳಿದು ನಾಶ ಮಾಡಿರುವ ಘಟನೆ ಹೊಸಹಳ್ಳಿ ಕೆರೆ (ಕೃಷ್ಣಯ್ಯನ ಕಟ್ಟೆ) ಬಳಿ ನಡೆದಿದೆ.

Vijaya Karnataka 14 Aug 2019, 5:00 am
ಬಿಳಿಗಿರಿರಂಗನಬೆಟ್ಟದ ಕಾಡಂಚಿನ ರೈತರ ತೋಟದಲ್ಲಿ ದಾಂದಲೆ
Vijaya Karnataka Web destroy the banana caught in an elephant attack
ಆನೆ ದಾಳಿಗೆ ಸಿಲುಕಿ ಬಾಳೆ ನಾಶ

ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ ್ಯಕ್ಕೆ ರೈತರ ಅಸಮಾಧಾನ


ಯಳಂದೂರು:
ತಾಲೂಕಿನ ಬಿಳಿಗಿರಿರಂಗನಬೆಟ್ಟದ ಕಾಡಂಚಿನಲ್ಲಿರುವ ರೈತರು ಹಾಕಲಾಗಿರುವ ಬಾಳೆ ತೋಟಕ್ಕೆ ಕಾಡಾನೆಗಳು ಲಗ್ಗೆ ಇಟ್ಟು ಬಾಳೆ ಫಸಲನ್ನು ತಿಂದು ತುಳಿದು ನಾಶ ಮಾಡಿರುವ ಘಟನೆ ಹೊಸಹಳ್ಳಿ ಕೆರೆ (ಕೃಷ್ಣಯ್ಯನ ಕಟ್ಟೆ) ಬಳಿ ನಡೆದಿದೆ.

ಗುಂಬಳ್ಳಿ ಗ್ರಾಮದ ರೈತ ಪ್ರಭುಸ್ವಾಮಿ ಮತ್ತು ಸೋಮಣ್ಣ ಎಂಬುವರಿಗೆ ಸೇರಿದ ಎರಡು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಏಲಕ್ಕಿ ಬಾಳೆ ತೋಟಕ್ಕೆ ನುಗ್ಗಿ ಫಸಲನ್ನು ತಿಂದು ತುಳಿದು ನಾಶ ಮಾಡಿವೆ. ಆದ್ದರಿಂದ ರೈತರು ಅರಣ್ಯ ಇಲಾಖೆ ಕೃಷಿ ಜಮೀನುಗಳಿಗೆ ಆನೆಗಳು ಬಾರದಂತೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಹಲವಾರು ಬಾರಿ ಮನವಿ ಮಾಡಲಾಗಿದೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ ್ಯ ವಹಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ ್ಯದಿಂದ ಅರಣ್ಯದಂಚಿನಲ್ಲಿ ರೈತರು ಕೃಷಿ ಚಟುವಟಿಕೆ ಮಾಡಲು ತೊಂದರೆ ಉಂಟಾಗಿದೆ ಎಂದು ದೂರಿದ್ದಾರೆ.

ಕಳೆದ ವಾರವಷ್ಟೆ ಆನೆಗಳು ರೈತರ ಜಮೀನುಗಳಿಗೆ ನುಗ್ಗಿ ರೈತರು ಬೆಳೆದಿದ್ದ ಟಮೋಟೋ, ಬಾಳೆ, ಮಾವು, ತೆಂಗು ನಾಶ ಮಾಡಿವೆ. ಆದರೂ ಅರಣ್ಯ ಇಲಾಖೆ ರಾತ್ರಿ ಗಸ್ತು ತಿರುಗಲು ಉಡಾಫೆ ಮಾಡಿದ್ದರಿಂದ ರೈತರು ಸಾಲ ಸೋಲ ಮಾಡಿ ಬೆಳೆದಂತಹ ಬೆಳೆ ಕ್ಷ ರ್ಣಾದಲ್ಲಿ ಆನೆಗಳ ಪಾಲಾಗುತ್ತಿದೆ ಎಂದು ರೈತರು ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಪರಿಹಾರ ನೀಡಬೇಕೆಂದು ರೈತರು ಅರಣ್ಯ ಇಲಾಖೆಯವರಿಗೆ ಮನವಿ ಮಾಡಿದ್ದಾರೆ.

ಬಿಳಿಗಿರಿರಂಗನಬೆಟ್ಟಕ್ಕೆ ಬೆಟ್ಟಕ್ಕೆ ಹೊಂದಿಕೂಂಡಿರುವ ಹೊಸಹಳ್ಳಿ ಕೆರೆಗೆ (ಕೃಷ್ಣಯ್ಯನ ಕಟ್ಟೆ) ರಾತ್ರಿ ಸಮಯದಲ್ಲಿ ಆನೆಗಳು ನೀರು ಕುಡಿಯುವುದಕ್ಕೆ ಬರುವುದರಿಂದ ಅರಣ್ಯ ಇಲಾಖೆ ಹಾಕಿರುವ ಸೋಲಾರ್‌ ತಂತಿ ಬೇಲಿ ಕಿತ್ತು ಹಾಕಿ ಆನೆಗಳು ಕೃಷಿ ಜಮೀನುಗಳಿಗೆ ಲಗ್ಗೆ ಇಡುತ್ತಿದೆ. ಅಲ್ಲದೇ ಅರಣ್ಯ ಇಲಾಖೆ ಆನೆಗಳು ನಾಡಿಗೆ ಬಾರದಂತೆ ತಡೆಗೋಡೆಗಳನ್ನು ನಿರ್ಮಿಸಿದರು ಕೂಡಾ ಆನೆಗಳು ದಾಟಿ ಬರುತ್ತಿರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳಿಗೂ ತಲೆ ಬಿಸಿಯಾಗಿದೆ. ಇದರಿಂದ ಫÜಸಲು ಕಳೆದುಕೊಂಡಿರುವ ರೈತರಿಗೆ ಉತ್ತರಿಸುವುದೆ ದೊಡ್ಡ ಸವಾಲಾಗಿದೆ.

ಶಾಶ್ವತ ಪರಿಹಾರ ಬೇಕು:
ಪದೇ ಪದೇ ಆನೆಗಳು ರೈತರ ಜಮೀನುಗಳಿಗೆ ನುಗ್ಗಿ ರೈತರು ಬೆಳೆದಿರುವ ಫಸಲುಗಳನ್ನು ತಿಂದು ನಾಶ ಮಾಡುತ್ತಿದೆ. ಆದರೆ ರೈತರು ಪರಿಹಾರ ನೀಡುವಂತೆ ಕಚೇರಿಗೆ ಪದೇ ಪದೇ ಅಲೆದ ನಂತರ ಅವರಿಗೆ ಕಡಿಮೆ ಪರಿಹಾರ ನೀಡುತ್ತಾರೆ. ಈ ಹಿಂದೆ ರೈತರು ಕಾಡು ಪ್ರಾಣಿಗಳ ಉಪಟಳಕ್ಕೆ ಬೆಸತ್ತು ಬೆಳೆ ರಕ್ಷ ಣೆಗೆ ಜಮೀನಿನ ಸುತ್ತಾ ಸೋಲಾರ್‌ ತಂತಿಗೆ ವಿದ್ಯುತ್‌ ಹರಿಸುತ್ತಿದ್ದರು. ಆನೆಗಳು ಆಹಾರ ಹುಡುಕಿ ಬಂದ ಸಂದರ್ಭದಲ್ಲಿ ವಿದ್ಯುತ್‌ ಸ್ಪರ್ಶಗೊಂಡು ಮೃತಪಟ್ಟಿರುವ ಘಟನೆಗಳು ಸಹಾ ನಡೆದಿದೆ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಮಾನವ ಮತ್ತು ಪ್ರಾಣಿ ಸಂಘರ್ಷಕ್ಕೆ ಎಡೆ ಮಾಡಿಕೊಡದೆ ಕಾಡಿನಿಂದ ನಾಡಿನತ್ತ ಕಾಡು ಪ್ರಾಣಿಗಳು ಬಾರದಂತೆ ಕ್ರಮ ವಹಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

--------------
ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡುತ್ತಾರೆ ಹೊರತು ಸೂಕ್ತ ಪರಿಹಾರ ನೀಡುವುದಿಲ್ಲ. ಆನೆ ಬರುವ ಹಾದಿಗಳಿಗೆ ಸೂಕ್ತ ಸೋಲಾರ್‌ ತಂತಿ ಬೇಲಿ ಹಾಕದೆ ಇರುವುದರಿಂದ ಆನೆಗಳು ಕಾಡಿನಿಂದ ಕೃಷಿ ಜಮೀನುಗಳಿಗೆ ಲಗ್ಗೆ ಇಡುತ್ತಿದೆ. ಈ ಬಗ್ಗೆ ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳು ಗಮನಹರಿಸಿ ರೈತರ ಸಮಸ್ಯೆಗೆ ಸ್ಪಂದಿಸಬೇಕಾಗಿದೆ.
-ನಂಜನಾಯಕ, ಯರಗಂಬಳ್ಳಿ ರೈತ

-------------------

ಈಗಾಗಲೇ ಆನೆಗಳು ಕಾಡಿನಿಂದ ಹೊರ ಬಾರದಂತೆ ವಿಶೇಷ ಯೋಜನೆಗಳನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮುಂದಾಗಲಿದೆ. ನಷ್ಟವಾಗಿರುವ ಫಸಲಿಗೆ ಸರಕಾರದಿಂದ ಪರಿಹಾರ ನೀಡಲಾಗುವುದು.
-ಮಹದೇವಯ್ಯ, ಆರ್‌ಎಫ್‌ಒ ಬಿಆರ್‌ಟಿ ವಲಯ, ಯಳಂದೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ