ಆ್ಯಪ್ನಗರ

ಅಭಿವೃದ್ಧಿಗೆ ಜಿಲ್ಲಾಡಳಿತದ ವಾಟ್ಸಪ್ ಗ್ರೂಪ್

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಜಿಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ, ಉಪವಿಭಾಗಾಧಿಕಾರಿಯನ್ನೊಳಗೊಂಡ' ಚಾಮರಾಜನಗರ ಡಿಸ್ಟ್ರಿಕ್‌ ಅಡ್ಮಿನಿಷ್ಟೆ್ರೕಷನ್‌' ವಾಟ್ಸಪ್‌ ಗ್ರೂಪ್‌ ರಚನೆ ಮಾಡಲಾಗಿದೆ ಎಂದು ಜಿಲ್ಲಾಉಸ್ತುವಾರಿ ಸಚಿವ ಎಸ್‌.ಸುರೇಶ್‌ಕುಮಾರ್‌ ಹೇಳಿದರು.

Vijaya Karnataka 26 Sep 2019, 5:00 am
ಚಾಮರಾಜನಗರ: ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಜಿಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ, ಉಪವಿಭಾಗಾಧಿಕಾರಿಯನ್ನೊಳಗೊಂಡ' ಚಾಮರಾಜನಗರ ಡಿಸ್ಟ್ರಿಕ್‌ ಅಡ್ಮಿನಿಷ್ಟೆ್ರೕಷನ್‌' ವಾಟ್ಸಪ್‌ ಗ್ರೂಪ್‌ ರಚನೆ ಮಾಡಲಾಗಿದೆ ಎಂದು ಜಿಲ್ಲಾಉಸ್ತುವಾರಿ ಸಚಿವ ಎಸ್‌.ಸುರೇಶ್‌ಕುಮಾರ್‌ ಹೇಳಿದರು.
Vijaya Karnataka Web CHN25UM3_18


ಚಾಮರಾಜನಗರ ಗಡಿಜಿಲ್ಲೆಜತೆಗೆ ಅಭಿವೃದ್ಧಿಯಲ್ಲಿಹಿಂದುಳಿದ ಜಿಲ್ಲೆಎಂಬ ಹೆಸರಿದೆ, ಕೈಗಾರಿಕೆಗಳಿಲ್ಲ. ಜತೆಗೆ ಬರದ ವಾತಾವರಣವಿದ್ದು, ಇಂತಹ ಸಮಸ್ಯೆ ನಿವಾರಣೆ ಮಾಡಲು ನನ್ನನ್ನು ಜಿಲ್ಲಾಉಸ್ತುವಾರಿ ಸಚಿವರಾಗಿ ಮುಖ್ಯಮಂತ್ರಿಗಳು ನೇಮಕ ಮಾಡಿದ್ದಾರೆ, ಆ ಹಿನ್ನೆಲೆಯಲ್ಲಿಜಿಲ್ಲೆಗೆ ಬಿಡುಗಡೆಯಾಗುವ ಅನುದಾನ, ಯಾವುದಕ್ಕೆ ಕೊರತೆ, ಎಷ್ಟುಬೇಕು, ಏನೇನು ಸಮಸ್ಯೆ ಎಂಬುದನ್ನು ಪ್ರತಿದಿನ ಅರಿಯಲು ಜಿಲ್ಲಾಮಟ್ಟದ ಅಧಿಕಾರಿಗಳ ವಾಟ್ಸಪ್‌ ಗ್ರೂಪ್‌ ರಚನೆ ಮಾಡಲಾಗಿದ್ದು, ಜಿಲ್ಲೆಯಲ್ಲಿಆಗಬೇಕಿರುವ ಕೆಲಸಗಳ ಬಗ್ಗೆ ತಮಗೆ ತಿಳಿಸುತ್ತಾರೆ, ಇದರ ಆಧಾರದ ಮೇಲೆ ಜಿಲ್ಲೆಯ ಅಭಿವೃದ್ಧಿಗೆ ಕ್ರಮವಹಿಸಲಾಗುವುದು,'' ಎಂದು ನಗರದ ಜಿಲ್ಲಾಪಂಚಾಯಿತಿ ಸ್ಥಾಯಿಸಮಿತಿ ಸಭಾಂಗಣದಲ್ಲಿಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿತಿಳಿಸಿದರು.

''ಜಿಲ್ಲೆಯಲ್ಲಿಇಂದು ಸತ್ತೇಗಾಲದಲ್ಲಿಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಪರಿಶೀಲನೆ ನಡೆಸಲಾಗಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದು ತಕ್ಷಣದಲ್ಲೇ ಕಾಮಗಾರಿ ಆರಂಭಿಸಲಾಗುವುದು, ನಗರದ ಜಿಲ್ಲಾಕ್ರೀಡಾಂಗಣಕ್ಕೆ ಭೇಟಿ ನೀಡಿ, ಏನೇನು ಕಾಮಗಾರಿ ಕೈಗೊಳ್ಳಲಾಗಿದೆ ಎಂಬುದರ ವಿವರವನ್ನು ಪಡೆದಿದ್ದೇನೆ, ಜತೆಗೆ ಪ್ರಗತಿಯಲ್ಲಿರುವ ಖಾಸಗಿಬಸ್‌ ನಿಲ್ದಾಣವನ್ನು ನ.1 ರೊಳಗೆ ಮುಗಿಸಿ, ಕನ್ನಡರಾಜ್ಯೋತ್ಸವ ವೇಳೆಗೆ ಲೋಕಾರ್ಪಣೆ ಮಾಡಬೇಕು ಎಂಬ ಸೂಚನೆಯನ್ನು ಸಂಬಂಧಪಟ್ಟ ಇಲಾಖಾಧಿಕಾರಿಗೆ ನೀಡಿರುವುದಾಗಿ,'' ತಿಳಿಸಿದರು.

ಸಮಸ್ಯೆ ಇತ್ಯರ್ಥ: ಜಿಲ್ಲೆಯಲ್ಲಿ4 ತಾಲೂಕುಗಳಿದ್ದು, ಅರಣ್ಯ ಮತ್ತು ಕಂದಾಯ ಇಲಾಖೆಯಲ್ಲಿಸಮಸ್ಯೆಗಳಿದ್ದು, ಮುಂದಿನ ವಾರ ಬೆಂಗಳೂರಿನಲ್ಲಿಎರಡು ಇಲಾಖೆಗಳ ಪ್ರದಾನ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿ, ಕ್ಷೇತ್ರದ ಶಾಸಕರ ಸಭೆ ಆಯೋಜಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು,'' ಎಂದರು.

ಕೆಡಿಪಿ ಸಭೆ ಆಯೋಜನೆ: ''ನದಿಮೂಲದಿಂದ ಜಿಲ್ಲೆಯ ಹಲಕೆರೆಗಳಿಗೆ ನೀರು ತುಂಬಿಸಲು ಕಳೆದ ಎರಡು ವರ್ಷದ ಹಿಂದೆಯೇ ಚಾಲನೆ ನೀಡಲಾಗಿತ್ತು. ಆದರೆ ಇನ್ನು ಅದು ಕಾರ್ಯಗತವಾಗಿಲ್ಲಎಂಬ ಪ್ರಶ್ನೆಗೆ' ಸಚಿವರು ಪ್ರತಿಕ್ರಿಯಿಸಿ' ಈಗಾಗಲೇ ಜಿಲ್ಲೆಯಲ್ಲಿಏನೇನು ಸಮಸ್ಯೆಯಿದೆ ಎಂಬುದನ್ನು ಕ್ಷೇತ್ರದ ಶಾಸಕರ ಜತೆ ಸಭೆ ನಡೆಸಿ ಚರ್ಚಿಸಿದ್ದೇನೆ, ಇದಕ್ಕೆ ಸಂಬಂಧಿಸಿದ ಹಾಗೇ ಮುಂದಿನ 8 ರಿಂದ 10 ದಿನಗಳಲ್ಲಿಪ್ರಗತಿಪರಿಶೀಲನೆ ಸಭೆ ನಡೆಸಲಾಗುವುದು,'' ಎಂದು ತಿಳಿಸಿದರು.

ಜಿಲ್ಲೆಯ ಶಾಲೆಗಳಿಗೆ 5 ತಿಂಗಳಾದರೂ, ಶೂಸಾಕ್ಸ್‌ ಬಂದಿಲ್ಲಎಂಬ ವಿಚಾರ ಗಮನಕ್ಕೆ ಬಂದಿದೆ, ಶಾಲಾಭಿವೃದ್ಧಿ ಸಮಿತಿಗೆ ಇದರ ಖರೀದಿ ಹೊಣೆವಹಿಸಲಾಗಿದೆ, ಮೈಸೂರು ವಿಭಾಗಕ್ಕೆ ಈಗಾಗಲೇ ಅನುದಾನ ಬಿಡುಗಡೆಯಾಗಿದೆ, ಎಲ್ಲಿತೊಡಕಾಗಿದೆ ಎಂಬುದನ್ನು ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದರು.

ಗೋಷ್ಠಿಯಲ್ಲಿಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನಕುಮಾರ್‌,ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಪಂ ಸಿಇಒ ಬಿ.ಎಚ್‌.ನಾರಾಯಣರಾವ್‌, ಎಸ್ಪಿ ಎಚ್‌.ಡಿ.ಆನಂದ್‌ಕುಮಾರ್‌, ಎಡಿಸಿ ಸಿ.ಎಲ್‌.ಆನಂದ್‌, ಎಸಿ ನಿಖಿತಾಚಿನ್ನಸ್ವಾಮಿ ಹಾಜರಿದ್ದರು.

ದೊಡ್ಡಾಣೆಗೆ ಮತ್ತೇ ಭೇಟಿ

ಚಾಮರಾಜನಗರ ಜಿಲ್ಲೆಯ ಕಾಡಂಚಿನ ಗ್ರಾಮ ದೊಡ್ಡಾಣೆಗೆ ಮತ್ತೇ ಭೇಟಿ ನೀಡುವುದಾಗಿ ಸಚಿವ ಎಸ್‌.ಸುರೇಶ್‌ಕುಮಾರ್‌ ಹೇಳಿದರು.

ನಗರದ ಜಿಲ್ಲಾಪಂಚಾಯಿತಿ ಸ್ಥಾಯಿ ಸಮಿತಿ ಸಭಾಂಗಣದಲ್ಲಿಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿ, ''ನಾನು ಚಾಮರಾಜನಗರ ಜಿಲ್ಲಾಉಸ್ತುವಾರಿ ಸಚಿವನಾಗುವುದಕ್ಕಿಂತ ಕಳೆದ 3 ತಿಂಗಳ ಹಿಂದೆ ದೊಡ್ಡಾಣೆ ಗ್ರಾಮಕ್ಕೆ ಭೇಟಿ ನೀಡಿ, ಜನರಸಮಸ್ಯೆಗಳನ್ನು ಹತ್ತಿರದಿಂದಲೇ ಆಲಿಸಿದ್ದೇ, ಸಮಸ್ಯೆ ಕುರಿತಂತೆ ಲೇಖನ ಬರೆಯುವ ಮೂಲಕ ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಜನರ ಸಮಸ್ಯೆ ನಿವಾರಣೆ ಮಾಡಬೇಕು ಎಂದು ಸರಕಾರದ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದೇ, ಇದೀಗ ನಾನೇ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದು, 8ರಿಂದ 10 ದಿನದಲ್ಲಿಗ್ರಾಮಕ್ಕೆ ಭೇಟಿ ನೀಡಿ, ಜನರ ಸಮಸ್ಯೆ ಸ್ವಲ್ಪವಾದರೂ ಪರಿಹಾರವಾಗಿದೆಯೇ ಎಂಬುದನ್ನು ಪರಿಶೀಲಿಸುವುದಾಗಿ,'' ತಿಳಿಸಿದರು.

ಮುಂದಿನ ದಿನಗಳಲ್ಲಿ ಜಿಲ್ಲೆಗೆ ಮುಖ್ಯಮಂತ್ರಿ ಅವರ ಅಗತ್ಯದ ಕಾರ್ಯಕ್ರಮ ಏರ್ಪಾಡಾಗುತ್ತದೋ ಆ ಕಾರ್ಯಕ್ರಮಕ್ಕೆ ಆಹ್ವಾನಿಸುವುದಾಗಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ