ಆ್ಯಪ್ನಗರ

ದಸರಾ ನಡಿಗೆಗೆ ಉತ್ತಮ ಸ್ಪಂದನೆ

ಬೆಳಗಿನ ಚುಮು ಚುಮು ಚಳಿ , ಮೋಡದ ನಡುವೆ ನಗರದ ರಸ್ತೆಗಳಲ್ಲಿ ಸಮವಸ್ತ್ರದ ಟೀ ಶರ್ಟ್‌, ಕ್ಯಾಪ್‌ಗಳನ್ನು ಧರಿಸಿದ ನೂರಾರು ಮಂದಿ ಒಟ್ಟಿಗೆ, ಶಿಸ್ತಿನಿಂದ ಹೆಜ್ಜೆ ಹಾಕಿದ್ದರು.

Vijaya Karnataka 17 Oct 2018, 5:00 am
ಚಾಮರಾಜನಗರ : ಬೆಳಗಿನ ಚುಮು ಚುಮು ಚಳಿ , ಮೋಡದ ನಡುವೆ ನಗರದ ರಸ್ತೆಗಳಲ್ಲಿ ಸಮವಸ್ತ್ರದ ಟೀ ಶರ್ಟ್‌, ಕ್ಯಾಪ್‌ಗಳನ್ನು ಧರಿಸಿದ ನೂರಾರು ಮಂದಿ ಒಟ್ಟಿಗೆ, ಶಿಸ್ತಿನಿಂದ ಹೆಜ್ಜೆ ಹಾಕಿದ್ದರು.
Vijaya Karnataka Web dussehra is a good response
ದಸರಾ ನಡಿಗೆಗೆ ಉತ್ತಮ ಸ್ಪಂದನೆ


ಅವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳ ನಡಿಗೆಯಲ್ಲಿ ಉತ್ಸಾಹವಿತ್ತು. ಇವರಿಗೆ ಉಸ್ತುವಾರಿ ಸಚಿವರು, ಅಧಿಕಾರಿಗಳು ಸಹ ಸಾಥ್‌ ನೀಡಿದರು. ಒಟ್ಟಾರೆ ದಸರಾ ಅಂಗವಾಗಿ ನಡೆದ ವಾಕಥಾನ್‌ಗೆ ಉತ್ತಮ ಸ್ಪಂದನೆ ದೊರೆಯಿತು.

ಇದೇ ಮೊದಲ ಬಾರಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪರಿಸರ ಇಲಾಖೆ, ಸಾರ್ವಜನಿಕ ಶಿಕ್ಷ ಣ, ಪದವಿ ಪೂರ್ವ ಶಿಕ್ಷ ಣ ಇಲಾಖೆ ಸೇರಿದಂತೆ ನಾನಾ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ದಸರಾ ನಡಿಗೆಗೆ ನಿರೀಕ್ಷೆಗೂ ಮೀರಿ ಬೆಂಬಲ ದೊರೆಯಿತು.

ನಗರದ ಚಾಮರಾಜೇಶ್ವರ ದೇವಾಲಯದ ಬಳಿ ಸೋಮವಾರ ಬೆಳಗ್ಗೆ ಚಳಿಯನ್ನೂ ಲೆಕ್ಕಿಸದೆ ಬೆಳಗಿನಿಂದಲೇ ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಸಮಾವೇಶಗೊಂಡರು. ಬಿಳಿ ಬಣ್ಣದ ಟಿ. ಶರ್ಟ್‌, ಕೆಂಪು ಹಸಿರು ಕ್ಯಾಪ್‌ ಧರಿಸಿ ಎಲ್ಲರೂ ಉತ್ಸಾಹದಿಂದಲೇ ದಸರಾ ನಡಿಗೆಗೆ ಸಜ್ಜಾದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ , ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಜತೆ ದಸರಾ ನಡಿಗೆಗೆ ಹಸಿರು ನಿಶಾನೆ ತೋರಿದರು. ಬಳಿಕ ಸಚಿವರೂ ಟಿ ಶರ್ಟ್‌ ಧರಿಸಿ ದಸರಾ ನಡಿಗೆಯಲ್ಲಿ ಪಾಲ್ಗೊಂಡರು. ಜಿ.ಪಂ. ಅಧ್ಯಕ್ಷೆ ಶಿವಮ್ಮ ಅವರು ಸಹ ದಸರಾ ನಡಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಚಾಮರಾಜೇಶ್ವರ ದೇವಾಲಯದಿಂದ ಆರಂಭಗೊಂಡ ದಸರಾ ನಡಿಗೆ ಭುವನೇಶ್ವರಿ ವೃತ್ತ, ಬಿ. ರಾಚಯ್ಯ ಜೋಡಿ ರಸ್ತೆ ಮೂಲಕ ಸಾಗಿ ಡಿವೈಎಸ್‌ಪಿ ಕಚೇರಿ ಮುಂಭಾಗದಿಂದ ಜಿಲ್ಲಾ ನ್ಯಾಯಾಲಯ ರಸ್ತೆಯಲ್ಲಿ ಮುಂದುವರಿಯಿತು. ನಂತರ ಕರಿನಂಜನಪುರ ರಸ್ತೆ, ಪ್ರವಾಸಿ ಮಂದಿರ ವೃತ್ತ (ಸುಲ್ತಾನ್‌ ಷರೀಫ್‌ ವೃತ್ತ), ದೊಡ್ಡ ಅಂಗಡಿ ಬೀದಿ, ನಗರ ಸಭೆ ಕಾರ್ಯಾಲಯ ರಸ್ತೆ ಮೂಲಕ ಸಾಗಿ ವಾಪಸ್ಸು ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಮುಕ್ತಾಯವಾಯಿತು.

ಇದೇವೇಳೆ ಮಾತನಾಡಿದ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ಇದೇ ಮೊದಲ ಬಾರಿಗೆ ದಸರಾ ಮಹೋತ್ಸವ ಅಂಗವಾಗಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಗಳ ಪೈಕಿ ವಾಕಥಾನ್‌ ದಸರಾ ನಡಿಗೆಯೂ ಒಂದಾಗಿದೆ. ಈಗಾಗಲೇ ರೈತ ದಸರಾ, ರಂಗೋಲಿ ಸ್ಪರ್ಧೆಗಳನ್ನು ದಸರಾ ಅಂಗವಾಗಿ ನಡೆಸಲಾಗಿದೆ. ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಗಮನ ಸೆಳೆಯುತ್ತಿವೆ. ಮುಂಬರುವ ವರ್ಷದಲ್ಲಿ 8 ರಿಂದ 9 ದಿನಗಳ ಕಾಲ ದಸರಾ ಮಹೋತ್ಸವ ಆಯೋಜಿಸಲು ಚಿಂತನೆ ನಡೆಸಲಾಗಿದೆ. ದಸರಾ ಅವಧಿಯನ್ನು ಹೆಚ್ಚಿಸುವುದರಿಂದ ಹೆಚ್ಚು ಸಂಖ್ಯೆ ಕಲಾವಿದರಿಗೆ ಅವರ ಕಲಾ ಪ್ರದರ್ಶನ ನೀಡಲು ಹೆಚ್ಚು ಅವಕಾಶ ನೀಡಿದಂತಾಗುತ್ತದೆ ಎಂದರು.

ಇದೇ ಅಕ್ಟೋಬರ್‌ ತಿಂಗಳ 20 ರಿಂದ 22ರವರೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಅತ್ಯಾಕರ್ಷಕ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಎಲ್ಲರ ಸಹಕಾರದಿಂದ ಕಾರ್ಯಕ್ರಮಗಳು ಯಶಸ್ಸುಗೊಳ್ಳುತ್ತಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.

ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‌ ಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಮುಖಂಡರಾದ ರಾಜಪ್ಪ, ಉಮೇಶ್‌, ಡಿವೈಎಸ್‌ಪಿ ಜಯಕುಮಾರ್‌, ಸಾರ್ವಜನಿಕ ಶಿಕ್ಷ ಣ ಇಲಾಖೆ ಉಪನಿರ್ದೇಶಕಿ ಮಂಜುಳಾ, ಪದವಿಪೂರ್ವ ಶಿಕ್ಷ ಣ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಚೆಲುವಯ್ಯ, ತಹಸೀಲ್ದಾರ್‌ ಕೆ. ಪುರಂಧರ್‌, ಇತರೆ ಅಧಿಕಾರಿಗಳು ದಸರಾ ನಡಿಗೆಯಲ್ಲಿ ಪಾಲ್ಗೊಂಡರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ