ಆ್ಯಪ್ನಗರ

ಕ್ಯಾಂಪ್‌ನಿಂದ ಕಣ್ಮರೆಯಾಗಿ ಕಾಡಾನೆಗಳೊಂದಿಗೆ ಸಿಕ್ಕಿಬಿದ್ದ ಭಾಸ್ಕರ ಆನೆ

ಕಾಲಿಗೆ ಕಟ್ಟಿದ್ದ ತುಂಡು ಸರಪಳಿಯಿಂದ ಭಾಸ್ಕರನನ್ನು ಗುರುತಿಸಲು ಸಾಧ್ಯವಾಯಿತು. ದಿನದ ವಿಶ್ರಾಂತಿ ನಂತರ ಸಾಕಾನೆಯನ್ನು ಸ್ವಸ್ಥಾನಕ್ಕೆ ಲಾರಿಯಲ್ಲಿ ಸಾಗಿಸಿ ಬಿಡಲಾಯಿತು ಎಂದು ಪಶುವೈದ್ಯಾಧಿಕಾರಿ ಡಾ.ನಾಗರಾಜು ತಿಳಿಸಿದ್ದಾರೆ.

Vijaya Karnataka Web 28 Jul 2020, 10:29 pm
ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಉದ್ಯಾನದ ರಾಂಪುರ ಕ್ಯಾಂಪ್‌ನಿಂದ ನಾಪತ್ತೆಯಾಗಿದ್ದ ಭಾಸ್ಕರ ಆನೆ ನಾಗರಹೊಳೆ ಅಭಯಾರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದಾನೆ.
Vijaya Karnataka Web ಸಾಕಾನೆ ಭಾಸ್ಕರ
ಸಾಕಾನೆ ಭಾಸ್ಕರ


ಇತರೆ ಆನೆಗಳೊಂದಿಗೆ ಮೇಯಲು ಬಿಟ್ಟಿದ್ದ ಸಂದರ್ಭದಲ್ಲಿ ಸಾಕಾನೆ ಭಾಸ್ಕರ (11) ಕಾಣದಾಗಿತ್ತು. ತಡವಾಗಿ ಬರಬಹುದು ಕಾದರೂ ಬಂದಿರಲಿಲ್ಲ. ನಂತರ ಪತ್ತೆಗೆ ಮುಂದಾದರೂ ಸಿಕ್ಕಿರಲಿಲ್ಲ. ಇದು ಕಬಿನಿ ಹಿನ್ನೀರು ದಾಟಿ ಅಂತರಸಂತೆ ವಲಯದಿಂದ ನಾಗರಹೊಳೆ ಅಭಯಾರಣ್ಯದ ಡಿ.ಬಿ ಕುಪ್ಪೆ ಭಾಗಕ್ಕೆ ಬಂದಿರುವ ಬಗ್ಗೆ ಸಂಶಯ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಸಾಕಷ್ಟು ಜಾಲಾಡಿದಾಗ ಕಾಡಾನೆಗಳ ಜತೆಯಲ್ಲಿ ಕಂಡು ಬಂತು. ನಂತರ ಪಶು ವೈದ್ಯಾಧಿಕಾರಿ ಡಾ.ನಾಗರಾಜು ಅವರು, ನಾಗರಹೊಳೆ ಅಭಯಾರಣ್ಯದ ಅಧಿಕಾರಿ ಮತ್ತು ನೌಕರರ ಸಹಕಾರದಲ್ಲಿ ಕಾಡಾನೆ ಜತೆ ಸೇರಿಕೊಂಡಿದ್ದ ಭಾಸ್ಕರನನ್ನು ಅರವಳಿಕೆ ನೀಡುವ ಮೂಲಕ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.

ಕಾಲಿಗೆ ಕಟ್ಟಿದ್ದ ತುಂಡು ಸರಪಳಿಯಿಂದ ಭಾಸ್ಕರನನ್ನು ಗುರುತಿಸಲು ಸಾಧ್ಯವಾಯಿತು. ದಿನದ ವಿಶ್ರಾಂತಿ ನಂತರ ಸಾಕಾನೆಯನ್ನು ಸ್ವಸ್ಥಾನಕ್ಕೆ ಲಾರಿಯಲ್ಲಿ ಸಾಗಿಸಲಾಯಿತು ಎಂದು ಪಶುವೈದ್ಯಾಧಿಕಾರಿ ಡಾ.ನಾಗರಾಜು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ