ಆ್ಯಪ್ನಗರ

ಚಾಮರಾಜನಗರ: ಆನೆಗಳ ಕಬ್ಬಿನಾಸೆಗೆ ಹೆದ್ದಾರಿ ಬಂದ್..! ಗಜರಾಜನ ಕಾಟಕ್ಕೆ ವಾಹನ ಸಂಚಾರ ದುಸ್ತರ

ಕಾಡಾನೆಗಳ ಕಬ್ಬಿನ ಆಸೆಗಾಗಿ ಚಾಮರಾಜನಗರಲ್ಲಿ ಹೆದ್ದಾರಿಯೇ ಬಂದ್‌ ಆಗುತ್ತಿದೆ. ಹೌದು, ಚಾಮರಾಜನಗರ ತಾಲೂಕಿನ ಪುಣಜನೂರು -ಹಾಸನೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಬಂದ್ ಆಗುತ್ತಿದ್ದು, ಕಬ್ಬಿಗಾಗಿ ಆನೆಗಳು ಹೆದ್ದಾರಿಗೆ ಬಂದು ನಿಲ್ಲುತ್ತಿವೆ.

Vijaya Karnataka Web 22 Sep 2020, 7:11 pm
ಚಾಮರಾಜನಗರ: ಕೆಲ ದಿನಗಳಿಂದ ಕಬ್ಬಿನ ಆಸೆಗಾಗಿ ಚಾಮರಾಜನಗರ ತಾಲೂಕಿನ ಪುಣಜನೂರು -ಹಾಸನೂರು ನಡುವಿನ ರಾಷ್ಟ್ರೀಯ ಹೆದ್ದಾರಿಯೇ ಬಂದ್ ಆಗುತ್ತಿದೆ..!
ಇದೇನಿದು ಕಬ್ಬಿಗಾಗಿ ಹೆದ್ದಾರಿ ಬಂದ್ ಎಂದು ಹುಬ್ಬೇರಿಸಬೇಡಿ. ಹೀಗೆ ಕಬ್ಬಿಗಾಗಿ ಹೆದ್ದಾರಿಗೆ ಬಂದು ರಸ್ತೆ ತಡೆ ಮಾಡುತ್ತಿರುವುದು ಕಾಡಾನೆಗಳ ಹಿಂಡು.

ಹೌದು, ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯ ಪುಣಜನೂರು - ತಮಿಳುನಾಡು ಗಡಿ ಹಾಸನೂರು ನಡುವಿನ ರಸ್ತೆಯಲ್ಲಿ ಈಚೆಗೆ ನಿತ್ಯ ಕಾಡಾನೆಗಳು ಬಂದು ನಿಲ್ಲುತ್ತಿವೆ. ಇದರಿಂದ ವಾಹನಗಳ ಸಂಚಾರ ದುಸ್ತರವಾಗುತ್ತಿದೆ.

ಲಾಕ್‌ಡೌನ್ ಶುರುವಾದಾಗ ಅಗತ ವಸ್ತು ಹಾಗೂ ರೈತರ ಕೃಷಿ ಪದಾರ್ಥಗಳ ಸಾಗಣೆಗೆ ಅವಕಾಶ ಇತ್ತು. ಇನ್ನುಳಿದ ಯಾವುದೇ ವಾಹನಗಳ ಓಡಾಟ ಇರಲಿಲ್ಲ. ಹೀಗಾಗಿ ಕಾಡಾನೆಗಳ ಓಡಾಟ ಹೆಚ್ಚಾಗಿತ್ತು. ಹೀಗಾಗಿ ಕಬ್ಬಿನ ಲಾರಿಯವರು ಒಂದಷ್ಟು ಕಬ್ಬನ್ನು ರಸ್ತೆ ಬದಿಯಲ್ಲಿ ಹಾಕಿ ಚಲಿಸುತ್ತಿದ್ದರು.

ಚಾಮರಾಜನಗರ: ಆಶ್ಲೇಷ ಆರ್ಭಟಕ್ಕೆ ಮೈದುಂಬಿಕೊಂಡ ಭರಚುಕ್ಕಿ ಜಲಪಾತ..!

ಕಬ್ಬಿನ ರುಚಿಕಂಡ ಕಾಡಾನೆಗಳು ಇದೀಗ ನಿತ್ಯ ಆ ಹೆದ್ದಾರಿಯಲ್ಲಿ ಬಂದು ನಿಲ್ಲುತ್ತವೆ. ಕಬ್ಬಿನ ಲಾರಿಗಳು ಬಂದರೆ ಅಡ್ಡ ಹಾಕುತ್ತವೆ. ಕಬ್ಬನ್ನು ತಿನ್ನುತ್ತಾ ಹೆದ್ದಾರಿ ಸಮೀಪದಲ್ಲೇ ಸುಳಿದಾಡುತ್ತಿವೆ. ಇದರಿಂದ ಇತರೆ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಓಡಾಡಲು ಹೆದರುವಂತಾಗಿದೆ. ಕಬ್ಬಿನ ಲಾರಿಯವರು ಮಾಡಿದ ಯಡವಟ್ಟು ಇದೀಗ ಅವರಿಗೇ ಸಮಸ್ಯೆಯಾಗಿ ಪರಿಣಮಿಸಿದೆ.

ಕಣ್ಣಲ್ಲಿ ಕಣ್ಣಿಟ್ಟು ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆ: ಬಿಳಿಗಿರಿರಂಗನಬೆಟ್ಟದ ತಪ್ಪಲಿನ ಜನರಿಗೆ ಕಾವಲು ಕಾಯುವುದೇ ಕಾಯಕ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ