ಆ್ಯಪ್ನಗರ

ನೀರಿಗಾಗಿ ಖಾಲಿ ಕೊಡಹಿಡಿದು ಪ್ರತಿಭಟನೆ

ಪಟ್ಟಣದ ಜಿ.ಪಿ.ಮಲ್ಲಪ್ಪಪುರಂಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿ ಬಡಾವಣೆ ಮಹಿಳೆಯರು ಖಾಲಿ ಕೊಡ ಹಿಡಿದು ನಗರ ಸಭೆ ಕಚೇರಿಯ ಪೌರಾಯುಕ್ತರ ಕೊಠಡಿ ಮುಂದೆ ಪ್ರತಿಭಟನೆ ನಡೆಸಿದರು.

Vijaya Karnataka 8 Jan 2019, 5:00 am
ಕೊಳ್ಳೇಗಾಲ: ಪಟ್ಟಣದ ಜಿ.ಪಿ.ಮಲ್ಲಪ್ಪಪುರಂಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿ ಬಡಾವಣೆ ಮಹಿಳೆಯರು ಖಾಲಿ ಕೊಡ ಹಿಡಿದು ನಗರ ಸಭೆ ಕಚೇರಿಯ ಪೌರಾಯುಕ್ತರ ಕೊಠಡಿ ಮುಂದೆ ಪ್ರತಿಭಟನೆ ನಡೆಸಿದರು.
Vijaya Karnataka Web empty the water for protest
ನೀರಿಗಾಗಿ ಖಾಲಿ ಕೊಡಹಿಡಿದು ಪ್ರತಿಭಟನೆ


ಬಡಾವಣೆಯಲ್ಲಿ ಕಳೆದ ಮೂರು ತಿಂಗಳಿಂದ ಸರಿಯಾಗಿ ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ಕಳೆದ ಒಂದು ವಾರದಿಂದ ನೀರು ಸಂಪೂರ್ಣ ವಾಗಿ ನೀರು ಬರದೇ ಪರದಾಡುವಂತಾಗಿದೆ. ಬಡಾವಣೆಯಲ್ಲಿ ಕಾವೇರಿ ನೀರಾಗಲಿ ಬೋರ್‌ ವೆಲ್‌ಗಳ ನೀರಾಗಲಿ ಸರಬರಾಜಾಗುತ್ತಿಲ್ಲ. ಅಪ್ಪಿ ತಪ್ಪಿ ನೀರು ಬಂದರು ಅದು ತಗ್ಗು ಪ್ರದೇಶದಲ್ಲಿರುವವರಿಗೆ ಮಾತ್ರ ದೊರೆಯುತ್ತದೆ. ನಗರಸಭೆ ಕೂಡಲೇ ಬಡಾವಣೆಗೆ ನೀರು ಸರಬರಾಜು ಮಾಡಿ ನೀರಿನ ಸಮಸ್ಯೆ ನೀಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಭಾರತಿ, ಸರಸ್ವತಿ, ಜಯಮ್ಮ, ಪದ್ಮಾವತಿ, ಮರಮ್ಮ, ಶಿವಮ್ಮ, ಮಂಗಳಮ್ಮ ಸೇರಿದಂತೆ 20ಕ್ಕೂ ಹೆಚ್ಚು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಜಿ.ಪಿ.ಮಲ್ಲಪ್ಪಪುರಂ ಬಡಾವಣೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನಕ್ಕೆ ಬಂದಿದೆ. ಹೊಸ ಪೈಪ್‌ಲೈನ್‌ ಹಾಕಿ ಈ ತಿಂಗಳೊಳಗೆ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡುತ್ತೇನೆ. ಅಲ್ಲಿಯ ತನಕ ಪ್ರತಿ ದಿನ 4 ಟ್ಯಾಂಕರ್‌ ನೀರನ್ನು ಪೂರೈಸುವ ಕಾರ್ಯವನ್ನು ತಕ್ಷ ಣದಿಂದ ಮಾಡುತ್ತೇನೆ.

- ನಾಗಶೆಟ್ಟಿ, ಪೌರಾಯುಕ್ತರು, ನಗರ ಸಭೆ ಕೊಳ್ಳೇಗಾಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ