ಆ್ಯಪ್ನಗರ

ಹುಲಿ ಪ್ರತ್ಯಕ್ಷಕ್ಕೆ ರೈತರು ಕಂಗಾಲು

ತಾಲೂಕಿನ ವಡ್ಡಗೆರೆಯಿಂದ ಹೆಗ್ಗವಾಡಿಗೆ ಹೋಗುವ ರಸ್ತೆ ಬದಿಯಲ್ಲಿ ಕಾಡುಹಂದಿಯನ್ನು ಹುಲಿ ಕೊಂದು ತಿಂದಿದ್ದು, ರೈತರಲ್ಲಿ ಆತಂಕ ಮೂಡಿದೆ.

Vijaya Karnataka 12 May 2019, 5:00 am
ಗುಂಡ್ಲುಪೇಟೆ : ತಾಲೂಕಿನ ವಡ್ಡಗೆರೆಯಿಂದ ಹೆಗ್ಗವಾಡಿಗೆ ಹೋಗುವ ರಸ್ತೆ ಬದಿಯಲ್ಲಿ ಕಾಡುಹಂದಿಯನ್ನು ಹುಲಿ ಕೊಂದು ತಿಂದಿದ್ದು, ರೈತರಲ್ಲಿ ಆತಂಕ ಮೂಡಿದೆ.
Vijaya Karnataka Web farmers are keen on sighting the tiger
ಹುಲಿ ಪ್ರತ್ಯಕ್ಷಕ್ಕೆ ರೈತರು ಕಂಗಾಲು


ವಡ್ಡಗೆರೆ ಗ್ರಾಮದ ಗಿರೀಶ್‌ ಎಂಬುವರ ಜಮೀನಿನ ಬಳಿ ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ಶನಿವಾರ ಬೆಳಗ್ಗೆ ಜಮೀನಿಗೆ ಹೋಗಿದ್ದವರು ಕಾಡು ಹಂದಿಯನ್ನು ಹುಲಿ ಬೇಟೆಯಾಡಿರುವ ಗುರುತುಗಳನ್ನು ಜಮೀನಿನಲ್ಲಿ ಗಮನಿಸಿ ಹುಡುಕಾಟ ನಡೆಸಿದಾಗ ಕಾಡು ಹಂದಿ ದೇಹ ಪೊದೆಯೊಳಗೆ ಪತ್ತೆಯಾಗಿದೆ. ಹುಲಿಯ ಹೆಜ್ಜೆ ಗುರುತು ದೊಡ್ಡಗಾತ್ರದಲ್ಲಿ ಇದ್ದು, ಘಟನೆ ನಡೆದಿರುವ ಹೆಗ್ಗವಾಡಿ ಮತ್ತು ವಡ್ಡಗೆರೆ ನಡುವಿನ ಸಂಪರ್ಕ ರಸ್ತೆಯಲ್ಲಿ ಸದಾ ಜನರ ಸಂಚಾರ ಇರುತ್ತದೆ. ಇಕ್ಕೆಲಗಳಲ್ಲಿ ಮುಳ್ಳಿನ ಗಿಡಗಳು ಆವರಿಸಿದ್ದು, ಗುಂಡಿಗಳು ನಿರ್ಮಾಣವಾಗಿವೆ. ಇಂತಹ ಸ್ಥಿತಿಯಲ್ಲಿ ಹುಲಿ ಎದುರಾದರೆ ಏನು ಮಾಡುವುದು ಎಂಬ ಭಯ ರೈತರಲ್ಲಿ ಮೂಡಿದೆ. ಈ ಪ್ರದೇಶದ ತೋಟ ಮತ್ತು ನೀರಾವರಿ ಜಮೀನುಗಳಲ್ಲಿ ರೈತರು ವಾಸ ಮಾಡುತ್ತಿದ್ದಾರೆ. ಜಾನುವಾರುಗಳನ್ನು ಹೊರಗೆ ಕಟ್ಟುತ್ತಾರೆ. ಕೊಟ್ಟಿಗೆ ಇದ್ದರೂ ಸೂಕ್ತ ರಕ್ಷ ಣಾ ವ್ಯವಸ್ಥೆ ಇಲ್ಲ. ಈ ಎಲ್ಲ ಕಾರಣಗಳಿಂದ ನಮ್ಮೂರ ಬಳಿ ಹುಲಿಯೊಂದು ಕಾಡು ಹಂದಿ ಕೊಂದು ತಿಂದಿರುವುದು ನಮಗೆ ಆತಂಕ ಉಂಟು ಮಾಡಿದೆ. ವಿಷಯ ತಿಳಿಸಿದ ಹಿನ್ನೆಲೆಯಲ್ಲಿ ಕುಂದಕೆರೆ ಅರಣ್ಯ ವಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಹೋಗಿದ್ದು, ಬೋನ್‌ ಇರಿಸುವ ಭರವಸೆ ನೀಡಿದ್ದಾರೆ. ಆದ್ದರಿಂದ ಸಂಬಂಧಪಟ್ಟವರು ಹುಲಿ ಸೆರೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ವಿ.ಆರ್‌.ನಾಗಪ್ಪ, ಸುಬ್ರಮಣ್ಯ, ಮಂಜುನಾಥ್‌, ಶಿವಕುಮಾರ್‌ ಇತರರು ಒತ್ತಾಯಿಸಿದ್ದಾರೆ.




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ