ಆ್ಯಪ್ನಗರ

ನೆರೆ ಸಂತ್ರಸ್ತರಿಗೆ 15 ಸಾವಿರ ಚಪಾತಿ ತಯಾರಿ

ಅತಿವೃಷ್ಟಿ ಮಳೆ ಪ್ರವಾಹದಿಂದಾಗಿ ಸಂಕಷ್ಟಕ್ಕೊಳಗಾಗಿರುವ ಸಂತ್ರಸ್ತರಿಗೆ ಸಹಾಯಹಸ್ತ ಚಾಚುವ ನಿಟ್ಟಿನಲ್ಲಿ ದುಯಂ ಕಂದಹಳ್ಳಿ ಗ್ರಾಮಸ್ಥರು 15 ಸಾವಿರ ಚಪಾತಿ ತಯಾರಿಸಿ ಆಹಾರ ಪದಾರ್ಥಗಳನ್ನು ಶಿವಮೊಗ್ಗ ಜಿಲ್ಲೆಯ ಕಾಳಜಿ ಕೇಂದ್ರಗಳಿಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

Vijaya Karnataka 13 Aug 2019, 5:00 am
ಯಳಂದೂರು: ಅತಿವೃಷ್ಟಿ ಮಳೆ ಪ್ರವಾಹದಿಂದಾಗಿ ಸಂಕಷ್ಟಕ್ಕೊಳಗಾಗಿರುವ ಸಂತ್ರಸ್ತರಿಗೆ ಸಹಾಯಹಸ್ತ ಚಾಚುವ ನಿಟ್ಟಿನಲ್ಲಿ ದುಯಂ ಕಂದಹಳ್ಳಿ ಗ್ರಾಮಸ್ಥರು 15 ಸಾವಿರ ಚಪಾತಿ ತಯಾರಿಸಿ ಆಹಾರ ಪದಾರ್ಥಗಳನ್ನು ಶಿವಮೊಗ್ಗ ಜಿಲ್ಲೆಯ ಕಾಳಜಿ ಕೇಂದ್ರಗಳಿಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
Vijaya Karnataka Web CHN-CHN12YLD3


ತಾಲೂಕಿನ ದುಯಂ ಕಂದಹಳ್ಳಿ ಗ್ರಾಮದಲ್ಲಿ ಆಹಾರ ತುಂಬಿದ ವಾಹನದೊಂದಿಗೆ ಗ್ರಾಮದ ಕಿಚ್ಚ ಸುದೀಪ್‌ ಮತ್ತು ವಾಲ್ಮೀಕಿ ಯುವಕ ಸಂಘದವರು ನಿರಾಶ್ರಿತರು ವಾಸ ಮಾಡುವ ಸ್ಥಳಕ್ಕೆ ತಲುಪಿಸಲು ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ತಲುಪಿಸಿ ಬಳಿಕ ನಿರಾಶ್ರಿತರಿಗೆ ಹಂಚಿಕೆ ಮಾಡಲಾಗಿದೆ.

ರಾಜ್ಯದಲ್ಲಿ ಒಂದು ವಾರದಿಂದ ಸತತ ಮಳೆಯಿಂದ ಉತ್ತರ ಕರ್ನಾಟಕದ ಕೆಲವು ಗ್ರಾಮಗಳು ತತ್ತರಿಸಿ ಹೋಗಿದ್ದು, ಅಲ್ಲಿನ ನಿವಾಸಿಗಳು ಮನೆ, ಆಸ್ತಿ ಸೇರಿದಂತೆ ಎಲ್ಲಾವನ್ನು ಕಳೆದುಕೊಂಡು ನಿರಾಶ್ರಿತರಾಗಿ ಹಸಿವಿನಿಂದ ಬಳಲುತ್ತಿದ್ದಾರೆ. ಇದನ್ನು ಮನಗಂಡ ಊರಿನ ಜನರು ಸ್ತ್ರೀ ಶಕ್ತಿ ಮಹಿಳಾ ಸಂಘಟನೆ ಸೇರಿದಂತೆ ಗ್ರಾಮದ ವಾಲ್ಮೀಕಿ ಯುವಕ ಸಂಘ, ಕಿಚ್ಚ ಸುದೀಪ್‌ ಅಭಿಮಾನಿ ಬಳಗದಿಂದ ಸುಮಾರು 4 ಕ್ವಿಂಟಲ್‌ ಗೋದಿ ಹಿಟ್ಟಿನಿಂದ ಚಪಾತಿ ತಯಾರಿಸಿ ಇಡೀ ಗ್ರಾಮದ ಮಹಿಳೆಯರು ಒಟ್ಟಾಗಿ ಸೇರಿ ಸಂತ್ರಸ್ತರಿಗೆ ಚಪಾತಿ ತಯಾರಿಸಿ ತಲುಪಿಸಿದ್ದಾರೆ. ಇದಕ್ಕೆ ತಾಲೂಕಿನ ಪ್ರಗತಿಪರ ಸಂಘಟನೆಗಳು ಸೇರಿದಂತೆ ಸಾರ್ವಜನಿಕರು ಇವರ ಸೇವೆಗೆ ಶಾಘ್ಲನೆ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ನಮ್ಮ ಗ್ರಾಮದ ಪ್ರತಿಯೊಬ್ಬ ಮಹಿಳೆಯರು, ಯುವಕರು ಸೇರಿದಂತೆ ಗ್ರಾಮದ ಯಜಮಾನರು ಕೂಡಾ ಒಗ್ಗಟಿನಿಂದ ಶ್ರಮಿಸಿದ್ದಾರೆ. ಇದಕ್ಕೆ ಗ್ರಾಮದ ಶಿಕ್ಷ ಕರು ಸೇರಿದಂತೆ ಸ್ತ್ರೀಶಕ್ತಿ ಮಹಿಳಾ ಸಂಘಟನೆಗಳು ಸಂಪೂರ್ಣವಾಗಿ ಸಹಕರಿಸಿದ್ದರಿಂದ 15 ಸಾವಿರ ಚಪಾತಿ ತಯಾರು ಮಾಡಲು ಸಾಧ್ಯವಾಗಿದೆ ಎಂದು ಗ್ರಾ.ಪಂ.ಸದಸ್ಯ ಶ್ರೀನಿವಾಸ್‌ ನಾಯಕ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ