ಆ್ಯಪ್ನಗರ

ಅಲೆಮಾರಿ ಬುಡಕಟ್ಟು ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

ರಾಜ್ಯದಲ್ಲಿರುವ ಅತ್ಯಂತ ಹಿಂದುಳಿದ ಸಮುದಾಯಗಳಾದ ಹಂದಿಜೋಗಿ, ಹಕ್ಕಿಪಿಕ್ಕಿ, ದೊಂಬರು, ಗೊರಮರು, ಸಿಳ್ಳೇಕ್ಯಾತ ಸೇರಿದಂತೆ 74 ಜಾತಿಗಳ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರಕಾರ ಅಲೆಮಾರಿ ಬುಡಕಟ್ಟು ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಆಲೆಮಾರಿ ಮಹಾಸಭೆ ಪ್ರಧಾನ ಕಾರ್ಯದರ್ಶಿ ವೆಂಕಟರಾಮು ಒತ್ತಾಯಿಸಿದರು.

Vijaya Karnataka 19 Dec 2018, 5:00 am
ಚಾಮರಾಜನಗರ : ರಾಜ್ಯದಲ್ಲಿರುವ ಅತ್ಯಂತ ಹಿಂದುಳಿದ ಸಮುದಾಯಗಳಾದ ಹಂದಿಜೋಗಿ, ಹಕ್ಕಿಪಿಕ್ಕಿ, ದೊಂಬರು, ಗೊರಮರು, ಸಿಳ್ಳೇಕ್ಯಾತ ಸೇರಿದಂತೆ 74 ಜಾತಿಗಳ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರಕಾರ ಅಲೆಮಾರಿ ಬುಡಕಟ್ಟು ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಆಲೆಮಾರಿ ಮಹಾಸಭೆ ಪ್ರಧಾನ ಕಾರ್ಯದರ್ಶಿ ವೆಂಕಟರಾಮು ಒತ್ತಾಯಿಸಿದರು.
Vijaya Karnataka Web forcing the establishment of a nomadic tribal development corporation
ಅಲೆಮಾರಿ ಬುಡಕಟ್ಟು ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ


ತಾಲೂಕಿನ ಮಲ್ಲಯ್ಯನಪುರದ ದುಂಡಿನ ಮಾರಮ್ಮನವರ ದೇವಸ್ಥಾನದ ಆವರಣದಲ್ಲಿ ನಡೆದ ನೂತನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರಮಾಣ ವಚನ ಭೋದಿಸಿ ಮಾತನಾಡಿದರು.

ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಸಹ ಈ ಸಮುದಾಯಗಳಿಗೆ ನೆಲ ಇಲ್ಲದಾಗಿದೆ. ಆರ್ಥಿಕ, ಸಾಮಾಜಿಕ, ಶೈಕ್ಷ ಣಿಕ ಹಾಗೂ ರಾಜಕೀಯ ಸ್ಥಾನಮಾನಗಳು ದೊರೆಯುತ್ತಿಲ್ಲ. ಪರಿಶಿಷ್ಟ ಜಾತಿಗೆ ಸೇರ್ಪಡೆಯಾಗಿದ್ದರೂ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಈ ಸಮುದಾಯಗಳು ಸಂಕಷ್ಟದಲ್ಲಿ ಜೀವನ ನಡೆಸುತ್ತಿವೆ ಎಂದು ವಿಷಾಧ ವ್ಯಕ್ತಪಡಿಸಿದರು.

ಊರಿಂದ ಊರಿಗೆ ಆಲೆಯುವ ಪ್ರವೃತ್ತಿ ಬೆಳೆಸಿಕೊಂಡಿರುವುದರಿಂದ ಮಕ್ಕಳಿಗೆ ಶಿಕ್ಷ ಣ ಕೊಡಿಸಲು ಸಾಧ್ಯವಾಗುತ್ತಿಲ್ಲ. ಆಧಾರ್‌, ಪಡಿತರಚೀಟಿ ಮತ್ತು ಮತದಾರರ ಗುರುತಿನ ಚೀಟಿಯನ್ನು ಪಡೆದುಕೊಳ್ಳಲು ಇನ್ನು ಸಹ ಈ ಸಮುದಾಯಗಳು ಹರಸಾಹಸ ಪಡುತ್ತಿವೆ. ಹಿಂದಿನ ಸರಕಾರದ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಕೋಶ -1 ಸ್ಥಾಪನೆ ಮಾಡಿ, ನೋಡಲ್‌ ಅಧಿಕಾರಿಯಾಗಿ ಡಾ. ಬಾಲಮೂರ್ತಿ ಅವರನ್ನು ನೇಮಕ ಮಾಡಿದ ಪರಿಣಾಮ ಈ ಸಮುದಾಯಗಳ ಸಮೀಕ್ಷೆ, ಹಾಗೂ ಅವರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡುವ ಹಂತಕ್ಕೆ ಬಂದಿದೆ. ಅಲ್ಲದೇ, ಈ ಯೋಜನೆಯಡಿಯಲ್ಲಿ ಒಬ್ಬ ಫಲಾನುಭವಿಗೆ ಒಂದೇ ಬಾರಿ, ಆಶ್ರಯ ಮನೆ, ನಿವೇಶನ, ಸ್ವ ಉದ್ಯೋಗಕ್ಕಾಗಿ ಸಾಲ, ಮಕ್ಕಳ ಶಿಕ್ಷ ಣಕ್ಕಾಗಿ ಸಹಾಯಧನ ನೀಡುವ ಕಾರ್ಯಕ್ರಮವನ್ನು ರೂಪಿಸಲಾಗಿತ್ತು. ಇವೆಲ್ಲವು ಸಹ ಕಾರ್ಯಗತವಾಗಲು ಸಮುದಾಯದವರು ಸಂಘಟಿತರಾಗಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಲು ಮಹಾಸಭೆ ಸಂಘಟನಾತ್ಮಕವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ನೂತನ ಜಿಲ್ಲಾಧ್ಯಕ್ಷ ಕೆರೆಹಳ್ಳಿ ರಾಜೇಂದ್ರಕುಮಾರ್‌ ಮಾತರನಾಡಿ, ಅಲೆಮಾರಿ ಸಮುದಾಯಕ್ಕೆ ಅರ್ಥಿಕ ಭದ್ರತೆ ನೀಡಲು ಜಿಲ್ಲಾಡಳಿತಕ್ಕೆ 73 ಲಕ್ಷ ರೂ. ಬಿಡುಗಡೆಯಾಗಿದ್ದು, ಈ ಅನುದಾನವನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸದ್ಯದಲ್ಲಿಯೇ ಅರ್ಹ ಅಲೆಮಾರಿ ಸಮುದಾಯ ಫಲಾನುಭವಿಗಳಿಗೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ತಾಲೂಕು ಸಮಿತಿಗಳನ್ನು ರಚನೆ ಮಾಡಿ, ಜಿಲ್ಲೆಯಲ್ಲಿ ಅಲೆಮಾರಿ ಸಮುದಾಯಗಳನ್ನು ಗುರುತಿಸಿ ಅವರಿಗೆ ಸೂಕ್ತ ನೆಲ ಕಲ್ಪಿಸುವ ಜತೆಗೆ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ರಾಜ್ಯ ಗೊರಮರ ಸಂಘ ಅಧ್ಯಕ್ಷ ಮಾದೇಶ್‌, ಆಲೆಮಾರಿ ಬುಡಕಟ್ಟು ಮಹಾಸಭೆ ಕಾರ್ಯಾಧ್ಯಕ್ಷ ಚಿಕ್ಕಾಲತ್ತೂರು ಜಿ. ಶಿವಕುಮಾರ್‌, ಉಪಾಧ್ಯಕ್ಷ ರಾದ ಮುನಿಯಪ್ಪ, ಶಿವಕುಮಾರ್‌,ರೇವಣ್ಣ, ವಿ. ಗೋವಿಂದ, ಜಿಲ್ಲಾ ಪ್ರಧಾನಕಾರ್ಯದರ್ಶಿ ಆರ್‌. ರೇವಣ್ಣ ಕೆರೆಹಳ್ಳಿ, ಖಜಾಂಚಿ ಕುದೇರು ಉಲ್ಲಾಸ್‌, ಜಂಟಿ ಕಾರ್ಯದರ್ಶಿ ಜಿ. ಚಂದ್ರಶೇಖರ್‌, ಸಂಘಟನಾ ಕಾರ್ಯದರ್ಶಿ ಚನ್ನರಾಜು ಖಜಾಂಚಿ ಕುದೇರು ಉಲ್ಲಾಸ್‌ ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ