ಆ್ಯಪ್ನಗರ

ಜನವರಿ ತಿಂಗಳ ಬಿಲ್ ಪಡೆದುಕೊಳ್ಳಿ

ಭಾಗ್ಯಲಕ್ಷ್ಮಿ ಸೇರಿದಂತೆ ಗ್ರಾಮೀಣ ಪ್ರದೇಶದ ಮನೆಗಳ ವಿದ್ಯುತ್ ಬಿಲ್ ಅನ್ನು ಜನವರಿ ಯಿಂದ ಪಡೆದುಕೊಳ್ಳುವುದು ಹಾಗೂ ಹಳೆ ಬಾಕಿಯನ್ನು ಅಮಾನತಿನಲ್ಲಿಡಲು ಪ್ರವಾಸಿ ಮಂದಿರದಲ್ಲಿ ಶಾಸಕ ಎನ್.ಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಸೆಸ್ಕ್ ಹಾಗೂ ರೈತರ ಮುಖಂಡರ ಸಭೆಯಲ್ಲಿ ಅಧಿಕಾರಿಗಳು ತಿಳಿಸಿದರು.

Vijaya Karnataka 24 Jan 2020, 9:25 pm
ಕೊಳ್ಳೇಗಾಲ : ಭಾಗ್ಯಲಕ್ಷ್ಮಿ ಸೇರಿದಂತೆ ಗ್ರಾಮೀಣ ಪ್ರದೇಶದ ಮನೆಗಳ ವಿದ್ಯುತ್ ಬಿಲ್ ಅನ್ನು ಜನವರಿ ಯಿಂದ ಪಡೆದುಕೊಳ್ಳುವುದು ಹಾಗೂ ಹಳೆ ಬಾಕಿಯನ್ನು ಅಮಾನತಿನಲ್ಲಿಡಲು ಪ್ರವಾಸಿ ಮಂದಿರದಲ್ಲಿ ಶಾಸಕ ಎನ್.ಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಸೆಸ್ಕ್ ಹಾಗೂ ರೈತರ ಮುಖಂಡರ ಸಭೆಯಲ್ಲಿ ಅಧಿಕಾರಿಗಳು ತಿಳಿಸಿದರು.
Vijaya Karnataka Web ಕೊಳ್ಳೇಗಾಲ ಪ್ರವಾಸಿ ಮಂದಿರದಲ್ಲಿ ಶಾಸಕ ಎನ್.ಮಹೇಶ್ ಅಧ್ಯಕ್ಷತೆಯಲ್ಲಿ  ಸೆಸ್ಕ್  ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆ ನಡೆಯಿತು.


ರೈತ ಮುಖಂಡರು ಮಾತನಾಡಿ,‘‘ ಗ್ರಾಮೀಣ ಪ್ರದೇಶದಲ್ಲಿ 31500 ಕುಟುಂಬ ಗಳಿಗೆ ಭಾಗ್ಯ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, 20 ಸಾವಿರಕ್ಕೂ ಹೆಚ್ಚು ಮನೆಗಳಿಗೆ 10 ಸಾವಿರಕ್ಕೂ ಅಧಿಕ ಬಿಲ್‌ಗಳನ್ನು ಕಳುಹಿಸಲಾಗಿದೆ. ಭಾಗ್ಯಜ್ಯೋತಿ ಸಂಪರ್ಕಕ್ಕೆ 40 ಯುನಿಟ್‌ಗಳಷ್ಟು ಉಚಿತವಾಗಿ ಸರಕಾರ ನೀಡುತ್ತಿದೆ. ಸೆಸ್ಕ್ ಅಧಿಕಾರಿಗಳು 40 ಯುನಿಟ್ ಮೀರಿ ಬಳಕೆ ಮಾಡಿದರೆ 40 ಯುನಿಟ್ ಸೇರಿಸಿ ಬಿಲ್ ನೀಡುತ್ತಿರುವುದು ಸರಿಯಲ್ಲ, 40ಯುನಿಟ್‌ಗೂ ಹೆಚ್ಚು ಬಳಕೆ ಯಾಗುವ ವಿದ್ಯುತ್‌ಗೆ ಮಾತ್ರ ಬಿಲ್ ನೀಡಬೇಕು. ಹಳೆ ಬಾಕಿಯನ್ನು ಪೂರ್ಣ ಪ್ರಮಾಣದಲ್ಲಿ ಮನ್ನಾ ಮಾಡಬೇಕು. ಜನವರಿ ತಿಂಗಳಿಂದ ಬಳಕೆ ಮಾಡುವ ಯುನಿಟ್‌ಗಳಿಗೆ ಬಿಲ್ ನೀಡಿ ಹಣ ಪಡೆಯಬೇಕು,’’ ಎಂದು ಒತ್ತಾಯಿಸಿದರು.

ದೋಷ ಪೂರಿತ ಮೀಟರ್: ಹಳೆ ಮೀಟರ್‌ಗಳನ್ನು ತೆಗೆದು ಡಿಜಿಟಲ್ ಮೀಟರ್‌ಗಳನ್ನು ಅಳವಡಿಸಲಾಗು ತ್ತಿದ್ದು, ಮೀಟರ್ ದೋಷ ಪೂರಿತ ವಾಗಿದೆ ಎಂದು ರೈತ ಮುಖಂಡರು ಆರೋಪಿಸಿದರು. ಮೀಟರ್ ಎಷ್ಟು ಓಡಿದೆ ಎಂಬುದು ಮೀಟರ್ ರೀಡರ್‌ಗೆ ಮಾತ್ರ ತಿಳಿಯುತ್ತದೆ. ಮೀಟರ್ ಚಾಲನೆಯಾಗಲು ಸಹ ವಿದ್ಯುತ್ ಬಳಕೆಯಾಗುತ್ತಿದ್ದು, ಅದು ಹೆಚ್ಚಿನ ಹೊರೆಯಾಗುತ್ತಿದೆ. ಹಳೆ ಮೀಟರ್ ಇದ್ದಾಗ ಇದ್ದ ಲೈಟ್‌ಗಳನ್ನು ಈಗಲು ಉರಿಸುತ್ತಿದ್ದೇವೆ. ಈಗ ಎಲ್‌ಇಡಿ ಬಲ್ಬ್‌ಗಳನ್ನು ಬಳಕೆ ಮಾಡುತ್ತಿದ್ದರು ದುಪ್ಪಟ್ಟು ಯುನಿಟ್ ಬಳಕೆಯಾಗುತ್ತಿದೆ. ಈ ಬಗ್ಗೆ ಪರೀಕ್ಷೆ ನಡೆಸಬೇಕು,’’ ಎಂದು ಆಗ್ರಹಿಸಿದರು.

ಮುಖ್ಯ ಎಂಜನಿಯರ್ ಚಂದ್ರ ಶೇಖರ್ ಮಾತನಾಡಿ, ‘‘ತಾಲೂಕಿನಲ್ಲಿ 2810 ಭಾಗ್ಯ ಜ್ಯೋತಿ ಸಂಪರ್ಕ ಇದೆ. 108 ಕೋಟಿ ಬಾಕಿ ಇದೆ. ಎಆರ್‌ಸಿ ನಿಯಮದ ಪ್ರಕಾರ ವಿದ್ಯುತ್ ಖರೀದಿ ಮಾಡಿದ ಸಂಸ್ಥೆಗಳಿಗೆ ಕಾಲಮಿತಿ ಯೊಳಗೆ ಹಣ ಪಾವತಿ ಮಾಡಬೇಕಿದೆ. ಸಂಬಳ, ನಿರ್ವಹಣಾ ವೆಚ್ಚಗಳನ್ನು ಇದರಿಂದಲೇ ಬರಿಸಬೇಕಿದೆ. ಹಿರಿಯ ಅಧಿಕಾರಿಗಳು ಕಡ್ಡಾಯವಾಗಿ ಬಾಕಿ ವಸೂಲಿ ಮಾಡುವಂತೆ ಪತ್ರ ಬರೆದು ತಿಳಿಸಿದ್ದಾರೆ. ವಿವಾದಿತ ಗ್ರಾಮಗಳಿಗೆ ಮಾತ್ರ ಹಳೆ ಬಾಕಿಯನ್ನು ಅಮಾನ ತ್ತಿನಲ್ಲಿಟ್ಟು ಹೊಸ ಬಿಲ್ ಪಡೆಯುವಂತೆ ತಿಳಿಸಲಾಗಿತ್ತು, ಅನಿವಾರ್ಯವಾಗಿ ವಿದ್ಯುತ್ ಬಿಲ್ ವಸೂಲಿ ಮಾಡಬೇಕಿದೆ ಸಹಕರಿಸಿ,’’ ಎಂದರು.

ಸೂಪರಿಡೆಂಟ್ ಎಂಜನಿಯರ್ ಮಹದೇವಸ್ವಾಮಿ ಪ್ರಸನ್ನ. ನಿಯಂತ್ರ ಣಾಧಿಕಾರಿ ಶೇಖ್ ಮಹಮ್ಮದ್ ಉಲ್ಲಾ ಖಾನ್, ಇಇ ಪ್ರದೀಪ್, ಎಇ ವಿಜಯ್‌ಕುಮಾರ್, ಡಿವೈಎಸ್‌ಪಿ ನವೀನ್ ಕುಮಾರ್, ಸಿಪಿಐ ಶ್ರೀಕಾಂತ್, ತಹಸಿಲ್ದಾರ್ ಕುನಾಲ್, ರೈತ ಸಂಘದ ಜಿಲ್ಲಾಧ್ಯಕ್ಷ ಶಿವರಾಂ, ತಾಲೂಕು ಅಧ್ಯಕ್ಷ ಗೌಡೇಗೌಡ, ಮುಖಂಡರಾದ ಅಣಗಳ್ಳಿ ಬಸವರಾಜು, ಮಾಲಂಗಿ ರೇಚಣ್ಣ, ತೇರಂಬಳ್ಳಿ ಮಹದೇವಪ್ಪ, ಏಲಕ್ಕಿಗೌಡ, ರವಿ ನಾಯ್ಡು, ಅರೆಪಾಳ್ಯ ನಾಗರಾಜು, ಷಣ್ಮುಗ ಸ್ವಾಮಿ, ಪನ್ನುಸ್ವಾಮಿ, ದೊರೆಸ್ವಾಮಿ, ಬೂದಿ ತಿಟ್ಟು ಬಸವಣ್ಣ, ಕುಣಗಳ್ಳಿ ರಂಗಸ್ವಾಮಿ ಇದ್ದರು.

ಭಾಗ್ಯಜ್ಯೋತಿ ಹಳೆ ಬಾಕಿ 108 ಕೋಟಿ ಮನ್ನಾ ಮಾಡುವುದು ಸರಕಾರಕ್ಕೆ ಕಷ್ಟವಾಗುವುದಿಲ್ಲ, ಮುಂಬರುವ ಅಧಿವೇಶನದಲ್ಲಿ ಈ ಬಗ್ಗೆ ಗಮನ ಸೆಳೆದು ಸರಕಾರದಿಂದ ಹಣ ಕೊಡುವಂತೆ ಮಾಡುತ್ತೇವೆ. ಅಲ್ಲಿಯ ತನಕ ಹಳೆ ಬಾಕಿ ವಸೂಲಿ ಮಾಡಬಾರದು. ಈಗಾಗಲೆ ಸಂಪರ್ಕ ಕಡಿತಗೊಳಿಸಿರುವ ಮನೆಗಳಿಗೆ ಸಂಪರ್ಕ ಕಲ್ಪಿಸಬೇಕು. ಜನವರಿಯಿಂದ ಬಳಕೆ ಮಾಡುವ ಯುನಿಟ್‌ಗೆ ಮಾತ್ರ ಬಿಲ್ ನೀಡಿ ಪಡೆಯಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯವಾಗಿರುವುದರಿಂದ ವಿದ್ಯುತ್ ಕಡಿತ ಮಾಡಬಾರದು.
-ಎನ್.ಮಹೇಶ್ ಶಾಸಕರು, ಕೊಳ್ಳೇಗಾಲ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ