ಆ್ಯಪ್ನಗರ

ಸರಕಾರಿ ನೌಕರಿಯಲ್ಲಿ ಕನ್ನಡಿಗರಿಗೆ ಮೀಸಲು ನೀಡಿ

​ಸರಕಾರಿ ಉದ್ಯೋಗದಲ್ಲಿಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎಂದು ಭಾರತ್‌ ಸಮಾಜ ಸೇವಾ ಸಂಘದ ಅಧ್ಯಕ್ಷ ಸಿ.ಎನ್‌.ಗೋವಿಂದರಾಜು ಒತ್ತಾಯಿಸಿದರು.

Vijaya Karnataka 4 Nov 2019, 5:00 am
ಚಾಮರಾಜನಗರ :ಸರಕಾರಿ ಉದ್ಯೋಗದಲ್ಲಿಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎಂದು ಭಾರತ್‌ ಸಮಾಜ ಸೇವಾ ಸಂಘದ ಅಧ್ಯಕ್ಷ ಸಿ.ಎನ್‌.ಗೋವಿಂದರಾಜು ಒತ್ತಾಯಿಸಿದರು.
Vijaya Karnataka Web CHN03UM6_18


ನಗರದ ದೇವಾಂಗ ಬೀದಿಯಲ್ಲಿರುವ ದೇವಾಂಗ ಸಮುದಾಯ ಭವನ ದಲ್ಲಿಭಾರತ್‌ ಸಮಾಜ ಸೇವಾ ಸಂಘದ ವತಿಯಿಂದ ನಡೆದ 64ನೇ ಕನ್ನಡ ರಾಜ್ಯೋತ್ಸವ ಕಾರ‍್ಯಕ್ರಮದಲ್ಲಿಭುವನೇಶ್ವರಿ ಭಾವಚಿತ್ರ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ''ಕರ್ನಾಟಕದಲ್ಲಿಅನ್ಯಭಾಷಿಕರು ಅಧಿಕವಾಗಿದ್ದು, ಇದರಿಂದ ರಾಜ್ಯದಲ್ಲಿಉದ್ಯೋಗದ ಸೃಷ್ಠಿಯಾಗಿದೆ. ಆದ್ದರಿಂದ ಸರಕಾರಿ ಉದ್ಯೋಗದಲ್ಲಿಕನ್ನಡಿಗರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸುವಂತೆ,'' ಒತ್ತಾಯಿಸಿದರು.

ಜನಹಿತ ಶಕ್ತಿ ಹೋರಾಟ ವೇದಿಕೆ ಅಧ್ಯಕ್ಷ ರಾಮಸಮುದ್ರ ಸುರೇಶ್‌ ಮಾತನಾಡಿ ದರು.ನಗರಸಭೆ ಮಾಜಿ ಸದಸ್ಯ ಉಪೇಂದ್ರಕುಮಾರ್‌, ಭಾರತ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಬಂಗಾರ ಸ್ವಾಮಿ, ಉಪಾಧ್ಯಕ್ಷ ನಸ್ರುಲ್ಲಾ, ನವೀನ್‌, ಶ್ರೀನಿವಾಸ, ಶ್ರೀನಿವಾಸಜಟ್ಟಿ, ಸುರೇಶ್‌, ರಮೇಶ್‌, ಅಕ್ಮಲ್‌, ಜಯಕುಮಾರ್‌, ಜಾನು, ಕುಮಾರ್‌, ಕಾಳಸ್ವಾಮಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ