ಆ್ಯಪ್ನಗರ

ಚಾಮರಾಜನಗರದ ಜಿಲ್ಲಾದ್ಯಂತ ಉತ್ತಮ ಮಳೆ

ಮಂಗಳವಾರ ರಾತ್ರಿ ನಗರ ಸೇರಿದಂತೆ ಜಿಲ್ಲೆಯ ಯಳಂದೂರು ಹಾಗೂ ನಾನಾ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.

Vijaya Karnataka 29 May 2019, 9:30 pm
ಚಾಮರಾಜನಗರ : ಮಂಗಳವಾರ ರಾತ್ರಿ ನಗರ ಸೇರಿದಂತೆ ಜಿಲ್ಲೆಯ ಯಳಂದೂರು ಹಾಗೂ ನಾನಾ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.
Vijaya Karnataka Web CHN-CHN29YLD2


ಈ ವರ್ಷ ಬಿದ್ದಿರುವ ಮಳೆ ಪೈಕಿ ಮಂಗಳ ವಾರದ ಮಳೆ ಸಾಕಷ್ಟು ಭರ್ಜರಿಯಾಗಿ ಸುರಿದಿದೆ. ಜಿಲ್ಲಾ ಕೇಂದ್ರ ಹಾಗೂ ಸುತ್ತಮುತ್ತ ಒಂದೇ ರಾತ್ರಿಯಲ್ಲೇ 30 ಮಿ.ಮೀ. ಮಳೆ ಯಾಗಿದ್ದರೆ, ಯಳಂದೂರು ತಾಲೂಕಿನಲ್ಲಿ 39 ಮಿ.ಮೀ. ಮಳೆಯಾಗುವ ಮೂಲಕ ವಾತಾವರಣದಲ್ಲಿ ತಂಪೆರೆದಿದೆ.

ಇಡೀ ಜಿಲ್ಲೆಯ ಸರಾಸರಿ ಮಳೆ 14 ಮಿ.ಮೀ.ಆಗಿದ್ದರೆ, ಚಾ.ನಗರ ತಾಲೂಕಿನಲ್ಲಿ 6 ಮಿ.ಮೀ. ವಾಡಿಕೆ ಮಳೆಗೆ 23 ಮಿ.ಮೀ. ಆಗಿದೆ. ಗುಂಡ್ಲುಪೇಟೆಯಲ್ಲಿ 4ಕ್ಕೆ 16, ಕೊಳ್ಳೇಗಾಲದಲ್ಲಿ ಅತಿ ಕಡಿಮೆ 5ಮಿ.ಮೀ.ಗೆ 7 ಹಾಗೂ ಯಳಂದೂರು ತಾಲೂಕಿನಲ್ಲಿ ಅತಿ ಹೆಚ್ಚು 6 ಮಿ.ಮೀ. ವಾಡಿಕೆಗೆ 39 ಮಿ.ಮೀ. ಮಳೆ ಸುರಿದಿದೆ.

ಮೇ 25 ರಿಂದ ರೋಹಿಣಿ ಮಳೆ ಆರಂಭ ವಾಗಿದ್ದುಘಿ, ಜಿಲ್ಲೆಯತ್ತ ವರುಣಾನ ಕೃಪೆಯೂ ತಿರುಗಿದೆ. ಈವರೆಗಿನ ಅಂಕಿ, ಅಂಶದ ಪ್ರಕಾರ, ಜಿಲ್ಲೆಯ ಈವರೆಗೆ ಮಳೆಯಾಗಿರುವುದು ವಾಡಿಕೆಗಿಂತ ಕಡಿಮೆಯೇ. ಆದರೆ, ಮಂಗಳವಾರ ಹಾಗೂ ಅದಕ್ಕೂ ಎರಡು ದಿನದ ಹಿಂದೆ ಬಿದ್ದಿರುವ ಮಳೆ ಮೇ ತಿಂಗಳ ವಾಡಿಕೆಯನ್ನು ಸರಿದೂಗಿಸುವ ನಿರೀಕ್ಷೆಯನ್ನು ಮೂಡಿಸಿದೆ.
ಈವರೆಗೆ ಜಿಲ್ಲೆಯಲ್ಲಿ ಗುಂಡ್ಲುಪೇಟೆ ಹಾಗೂ ಚಾ.ನಗರ ತಾಲೂಕಿನಲ್ಲಿ ಕೃಷಿ ಚಟುವಟಿಕೆ ಇದೀಗ ಸ್ವಲ್ಪ ಚುರುಕುಗೊಂಡಿದೆ.

ಈ ಬಾರಿ ಬೇಸಿಗೆಯೂ ಸಹ ಜೋರಾಗಿದೆ. ಮಧ್ಯಾಹ್ನಘಿ, ಸಂಜೆಯಲ್ಲೂ ಸೆಕೆ ಜನತೆಯನ್ನು ಬೆಂಡಾಗಿಸಿದೆ. ಈ ನಡುವೆ ಬಿದ್ದ ಮಳೆ ವಾತಾವರಣದಲ್ಲಿ ಸ್ವಲ್ಪ ತಂಪು ತಂದಿದ್ದುಘಿ, ರೈತಾಪಿ ವರ್ಗ ಹಾಗೂ ಸಾಮಾನ್ಯ ಜನತೆಯನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ.

ಮಳೆ ಪ್ರಮಾಣ: ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ ಒಟ್ಟು 222 ಮಿ.ಮೀ. ವಾಡಿಕೆ ಮಳೆಗೆ 179 ಮಿ.ಮೀ. ಮಳೆಯಾಗಿದೆ. ಇನ್ನು ಮೇ ತಿಂಗಳಲ್ಲಿ 29ರವರೆಗೆ 108 ಮಿ.ಮೀ. ಮಳೆ ಸುರಿದಿದೆ.

ಯಳಂದೂರು: ಪಟ್ಟಣ ಸೇರಿದಂತೆ ತಾಲೂಕಿನ ಗುಂಬಳ್ಳಿ, ಕೃಷ್ಣಪುರ, ಕುಮಾರನಪುರ, ಯರಿ ಯೂರು, ಕಂದಹಳ್ಳಿ, ವೈಕೆ ಮೋಳೆ, ದುಗ್ಗಹಟ್ಟಿ, ಮೆಳ್ಳಹಳ್ಳಿ, ಹೊನ್ನೂರು, ಗಣಿಗನೂರು, ಅಂಬಳೆ, ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಬಿರುಗಾಳಿ ಸಹಿತ ಹಾಲಿಕಲ್ಲು ಮಳೆ ಬಿದ್ದಿದೆ. ಬಿರುಗಾಳಿ ಯಿಂದ ಕೆಲವು ರೈತರ ಬಾಳೆ ಸಲು ನಾಶವಾಗಿ ದ್ದು, ತೆಂಗಿನ ಮರಗಳು, ವಿದ್ಯುತ್ ಕಂಬಗಳು ನೆಲ್ಲಕ್ಕುರುಳಿವೆ. ಉತ್ತಮ ಮಳೆ ಯಾದ್ದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ