ಆ್ಯಪ್ನಗರ

ದಾಸನಪುರದಲ್ಲಿ ಗುಂಪು ಘರ್ಷಣೆ: ಐವರಿಗೆ ಗಾಯ

ತಾಲೂಕಿನ ದಾಸನಪುರ ಗ್ರಾಮದಲ್ಲಿ ಮರ ಕಡಿಯುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಐವರು ಗಾಯಗೊಂಡಿರುವುದು ಒಂದೆಡೆಯಾದರೆ, ಗಾಯಾಳುಗಳನ್ನು ನೋಡಲು ಆಸ್ಪತ್ರೆಗೆ ಬಂದವನ ಮೇಲೂ ಹಲ್ಲೆ ನಡೆಸಲಾಗಿದೆ.

Vijaya Karnataka 24 Jul 2019, 9:37 pm
ಕೊಳ್ಳೇಗಾಲ : ತಾಲೂಕಿನ ದಾಸನಪುರ ಗ್ರಾಮದಲ್ಲಿ ಮರ ಕಡಿಯುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಐವರು ಗಾಯಗೊಂಡಿರುವುದು ಒಂದೆಡೆಯಾದರೆ, ಗಾಯಾಳುಗಳನ್ನು ನೋಡಲು ಆಸ್ಪತ್ರೆಗೆ ಬಂದವನ ಮೇಲೂ ಹಲ್ಲೆ ನಡೆಸಲಾಗಿದೆ.
Vijaya Karnataka Web CHN-CHN24KGL6


ಗ್ರಾಮದ ಬಸವರಾಜು, ಮಹದೇವ, ಚಿಕ್ಕೇಗೌಡ, ಬಸವೇಗೌಡ, ಮಹದೇವಮ್ಮ ಗಾಯಗೊಂಡಿದ್ದುಘಿ, ಪಟ್ಟಣದ ಉಪ ವಿಭಾಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಾಳುಗಳನ್ನು ನೋಡಲು ಬಂದ ಮಹದೇವ ಎಂಬುವವನ ಮೇಲೆ ರಾಜೇಶ್, ದೊರೆಸ್ವಾಮಿ ಇತರರು ಆಸ್ಪತ್ರೆಯಲ್ಲೆ ಹಲ್ಲೆ ಮಾಡಿದ್ದಾರೆ.

ಗ್ರಾಮದಲ್ಲಿ ರಾಜೇಶ್ ಕಡೆಯವರ ನಿವೇಶನದಲ್ಲಿದ್ದ ಮರವನ್ನು ಅರಣ್ಯ ಇಲಾಖೆ ಅನುಮತಿ ಪಡೆದು ಕಡಿಯಲು ಮುಂದಾದಾಗ ಬಸವರಾಜು ಮತ್ತು ಆತನ ಕಡೆಯವರು ತಡೆಯಲು ಹೋಗಿದ್ದಾರೆ. ಅದು ಗ್ರಾಮ ಪಂಚಾಯಿತಿಗೆ ಸೇರಿದ ಜಾಗವಾಗಿದ್ದುಘಿ, ಅಲ್ಲಿರುವ ಮರವನ್ನು ಕಡಿಯಬಾರದು ಎಂದು ಬಸವರಾಜು ಗುಂಪು ತಡೆಯಲು ಹೋದಾಗ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದುಘಿ, ಈ ಸಂದರ್ಭದಲ್ಲಿ ಐವರು ಗಾಯಗೊಂಡಿದ್ದಾರೆ.

ಆಸ್ಪತ್ರೆಯಲ್ಲೂ ಹಲ್ಲೆ: ಇನ್ನು ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳುಗಳನ್ನು ನೋಡಲು ಬಂದ ಮಹದೇವ ಎಂಬಾತನ ಮೇಲೂ ಆಸ್ಪತ್ರೆಯ ಒಳಗೆ ಮಾರಕಾಸಗಳನ್ನು ಹಿಡಿದು ಗಲಾಟೆ ಮಾಡಿರುವ ಘಟನೆ ನಡೆದಿದೆ.
ಆಸ್ಪತ್ರೆ ಒಳಗೆ ಮಚ್ಚು, ದೊಣ್ಣೆ ಹಿಡಿದು ಗಲಾಟೆ ಮಾಡಿದ ರಜನಿ, ರಾಜೇಶ್, ದೊರೆಸ್ವಾಮಿ, ಅನಿಲ್ ಸೇರಿದಂತೆ 7ಜನರನ್ನು ವಶಕ್ಕೆ ಪಡೆಯಲಾಗಿದೆ.

ಈ ಎರಡು ಗುಂಪುಗಳ ನಡುವೆ ಈ ಹಿಂದೆಯೂ ನಿವೇಶನ ವಿಚಾರದಲ್ಲಿ ಜಗಳ ನಡೆದಿತ್ತು. ಆ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪುಗಳು ಮರದ ವಿಚಾರವಾಗಿಯೂ ಸಂಘರ್ಷಕ್ಕೆ ಇಳಿದದ್ದು ಘಟನೆಗೆ ಕಾರಣ. ಈ ಬಗ್ಗೆ ಗ್ರಾಮಾಂತರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ