ಆ್ಯಪ್ನಗರ

ಬೆತ್ತಲೆ ಪ್ರಕರಣ ಖಂಡಿಸಿ ತಾಲೂಕು ಕಚೇರಿಗೆ ಮುತ್ತಿಗೆ

ಗುಂಡ್ಲುಪೇಟೆಯ ದಲಿತ ಯುವಕನ ಬೆತ್ತಲೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಪಟ್ಟಣದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಲಾಯಿತು.

Vijaya Karnataka 22 Jun 2019, 5:00 am
ಯಳಂದೂರು: ಗುಂಡ್ಲುಪೇಟೆಯ ದಲಿತ ಯುವಕನ ಬೆತ್ತಲೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಪಟ್ಟಣದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಲಾಯಿತು.
Vijaya Karnataka Web CHN-CHN21YLD1


ನಂತರ ದ.ಸಂ.ಸ ಜಿಲ್ಲಾ ಸಂಚಾಲಕ ಸಿ.ರಾಜಣ್ಣ ಮಾತನಾಡಿ, ಇಡೀ ಜಗತ್ತಿಗೆ ಶಾಂತಿ, ಸೌರ್ಹಾದತೆ, ಮಾನವೀಯತೆ, ವೈಚಾರಿಕತೆ ಬಿತ್ತಿದ ಬುದ್ದ, ಬಸವ, ಸ್ವಾಮಿ ವಿವೇಕಾನಂದರಂತಹ, ಅನೇಕ ಸಾಧು, ಸಂತರು ಸಮಾಜ ಸುಧಾರಕರು ಹುಟ್ಟಿದ ಭಾರತದಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಕ್ಷ ುಲ್ಲಕ ಕಾರಣಗಳಿಗಾಗಿ ಹಲ್ಲೆ, ಕೊಲೆ, ಸುಲಿಗೆ, ಅತ್ಯಾಚಾರ, ಬೆತ್ತಲೆಗೊಳಿಸಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಿ ಅವಮಾನಿಸಿ ದೌರ್ಜನ್ಯವೆಸಗಿರುವ ಸಂವಿಧಾನ ಬಾಹೀರ. ಇಂತಹ ಅಮಾನುಷ ಕೃತ್ಯಗಳು ದೇಶದೆಲ್ಲೆಡೆ ನಿರಂತವಾಗಿ ನಡೆಯುತ್ತಿರುವುದು ಖಂಡನೀಯ. ಇಂತಹ ಘಟನೆಗೆ ಸಾಕ್ಷಿಯಾಗಿ ಚಾ.ನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕೆಬ್ಬೆ ಕಟ್ಟೆ ಬಳಿ ಇರುವ ಶನಿ ದೇವಾಲಯವನ್ನು ಪ್ರವೇಶ ಮಾಡಿದ ಎಂಬ ಕಾರಣಕ್ಕೆ ದಲಿತ ಯುವಕನ ಮೇಲೆ ಹಲ್ಲೆ ನಡೆಸಿ ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿರುವ ಪ್ರಸಂಗ ನಾಗರೀಕ ಸಮಾಜವೇ ನಾಚಿ ತಲೆ ತಗ್ಗಿಸುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃತ್ಯದಲ್ಲಿ ಬಾಗಿಯಾಗಿರುವ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಈ ಸಂದರ್ಬದಲ್ಲಿ ತಾಲೂಕು ಅಂಬೇಡ್ಕರ್‌ ಸಂಘದ ಸೇವಾ ಸಮಿತಿ ಅಧ್ಯಕ್ಷ ಡಿ.ರೇವಣ್ಣ, ಕಂದಹಳ್ಳಿ ನಾರಾಯಣ, ಆಲೂರು ನಾಗೇಂದ್ರ, ಎಂ.ಪುಟ್ಟಸ್ವಾಮಿ, ಗೌಡಳ್ಳಿ ರಾಜು, ನಾಗೇಂದ್ರ ಎ.ಎನ್‌, ಸಿ.ಎಂ ಶಿವಣ್ಣ, ತಾಲೂಕು ಸಂಚಾಲಕ ಚಂದ್ರಶೇಖರ್‌, ಎನ್‌.ರಾಜು, ಎಂ.ಸಿದ್ದು ಯರಗಂಬಳ್ಳಿ, ರಾಜೇಂದ್ರ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ