ಆ್ಯಪ್ನಗರ

ಜಿಂಕೆ ಬೇಟೆ: ಆರೋಪಿ ಬಂಧನ

ಅರಣ್ಯದೊಳಗೆ ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಹನೂರು ಸಮೀಪದ ಸೊಪ್ಪಿನಗುಡ್ಡೆ ಗ್ರಾಮದ ರಾಮಚಂದ್ರ ಬಂಧಿತ ಆರೋಪಿ.

Vijaya Karnataka 8 Jun 2018, 5:00 am
ಹನೂರು: ಅರಣ್ಯದೊಳಗೆ ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಹನೂರು ಸಮೀಪದ ಸೊಪ್ಪಿನಗುಡ್ಡೆ ಗ್ರಾಮದ ರಾಮಚಂದ್ರ ಬಂಧಿತ ಆರೋಪಿ.
Vijaya Karnataka Web hanuru deer hunting arrest of the accused
ಜಿಂಕೆ ಬೇಟೆ: ಆರೋಪಿ ಬಂಧನ


ಪಿ.ಜಿ. ಪಾಳ್ಯ ವನ್ಯಜೀವಿ ವಲಯದಲ್ಲಿ ಜಿಂಕೆ ಬೇಟೆಯಾಡಿ ಮಾಂಸ ಸಾಗಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ಮಾಡಿ ಜಿಂಕೆ ಚರ್ಮ ಮತ್ತು ಎರಡು ಕೆಜಿ ಮಾಂಸವನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ. ದಾಳಿ ಸಂದರ್ಭದಲ್ಲಿ ಮಸಿಬಾವಿದೊಡ್ಡಿ ಗ್ರಾಮದ ದೊರೆ ಹಾಗೂ ಸೊಪ್ಪಿನಗುಡ್ಡೆ ಗ್ರಾಮದ ಸೋಮ ಎಂಬುವವರು ತಮ್ಮೊಂದಿಗಿದ್ದ ಜಿಂಕೆ ಮಾಂಸದೊಂದಿಗೆ ಪರಾರಿಯಾಗಿದ್ದಾರೆ. ದಾಳಿಯಲ್ಲಿ ವಲಯ ಅರಣ್ಯಾಧಿಕಾರಿ ಸಯ್ಯಾದ್‌ ಸಾಬಾ ಎಚ್‌. ನದಾಫ್‌, ಉಪ ವಲಯ ಅರಣ್ಯಾಧಿಕಾರಿ ವಿಜಯ್‌ಕುಮಾರ್‌, ಅರಣ್ಯ ರಕ್ಷ ಕ ಕೃಷ್ಣಪ್ಪ, ನವೀನ್‌ಕುಮಾರ್‌ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ